ರಾಮಾನುಜನ್‌ ಎಂಬ ದೈವದತ್ತ ಗಣಿತ ಪ್ರತಿಭೆ ಚೆನ್ನೈ ಬಂದರಿನಲ್ಲಿ ಮೂಟೆ ಲೆಕ್ಕ ಮಾಡುತ್ತಿತ್ತು!

1887ರ ಡಿಸೆಂಬರ್ 22ರಂದು ಈರೋಡ್ ನಗರದಲ್ಲಿ ಒಬ್ಬ ಸಾಮಾನ್ಯ ಗುಮಾಸ್ತನ ಮಗನಾಗಿ ಜನಿಸಿದ ಶ್ರೀನಿವಾಸ ರಾಮಾನುಜನ್ ಬಾಲ್ಯದಿಂದಲೂ ಗಣಿತ ಲೋಕದಲ್ಲಿ ಮುಳುಗಿಬಿಡುತ್ತಿದ್ದರು. ಐದನೇ ತರಗತಿಯಲ್ಲಿ ಒಬ್ಬ ಗಣಿತ ಅಧ್ಯಾಪಕರು ಪಾಠ ಮಾಡುತ್ತಾ ಸೊನ್ನೆಗೆ ಸೊನ್ನೆಯಿಂದ ಭಾಗಿಸಿದರೆ ಒಂದು ಎಂದು ನಿರೂಪಣೆ ಮಾಡಲು ಹೊರಟಾಗ ಸಾಧ್ಯವೇ ಇಲ್ಲ, ಸೊನ್ನೆಯಿಂದ ಯಾವ ಸಂಖ್ಯೆಯನ್ನು ಭಾಗಿಸಿದರೂ ಅನಂತ( Infinite) ಸಂಖ್ಯೆಯು ದೊರೆಯುತ್ತದೆ ಎಂದು ವಾದ ಮಾಡಿ ಗೆದ್ದವರು ರಾಮಾನುಜನ್!ಮೂರನೇ ತರಗತಿಯಲ್ಲಿ ಇರುವಾಗ ಶ್ರೇಣಿಯ ಅಪ್ಲಿಕೇಶನ್ ಲೆಕ್ಕಗಳನ್ನು ಬಿಡಿಸಿದ ಪ್ರತಿಭಾವಂತ ಆತ! ನಾಲ್ಕನೇ ಫಾರಂ ಓದುತ್ತಿದ್ದಾಗ ಡಿಗ್ರಿಯ ಪಠ್ಯಪುಸ್ತಕವಾದ ಎಸ್‌ಎಲ್ ಲೋನಿ ಎಂಬ ಲೇಖಕನ ‘ಟ್ರಿಗೊನೋಮೆಟ್ರಿ ಪಾರ್ಟ್ 2’ ಪುಸ್ತಕವನ್ನು ಪೂರ್ತಿಯಾಗಿ ಓದಿ ಜೀರ್ಣಿಸಿಕೊಂಡವರು ಅವರು!ಮುಂದೆ ತನ್ನ ವಯಸ್ಸಿಗಿಂತ ಅಗಾಧ ಬುದ್ಧಿ ಮತ್ತೆಯನ್ನು ತೋರಿಸುತ್ತಾ ಹೋದ ಅವರು ಪಿಯುಸಿಯ ಪ್ರವೇಶ ಪರೀಕ್ಷೆಯಾದ FA ಪರೀಕ್ಷೆಯಲ್ಲಿ ಫೇಲ್ ಆದರು! ಕಾರಣ ಎಂದರೆ ಅವರು ಗಣಿತ ಬಿಟ್ಟು ಬೇರೆ ಯಾವುದೇ ವಿಷಯಗಳನ್ನು ಓದುತ್ತಲೇ ಇರಲಿಲ್ಲ! ಅದರಿಂದಾಗಿ ಅವರು ಹಲವು ಅವಕಾಶಗಳನ್ನು ಮುಂದೆ ಕಳೆದುಕೊಂಡರು. ವಿದ್ಯಾರ್ಥಿವೇತನ ಕೊನೆಗೊಂಡಿತು. ಆರ್ಥಿಕ ಸಮಸ್ಯೆಗಳು ಉಲ್ಬಣ ಆದವು. ಅದರಿಂದಾಗಿ ಗಣಿತದ ಈ ಅದ್ಭುತ ಪ್ರತಿಭೆ ಮದ್ರಾಸಿನ ಬಂದರಿನಲ್ಲಿ ಮೂಟೆಗಳನ್ನು ಲೆಕ್ಕ ಮಾಡುವ ಕೆಲಸವನ್ನು ಮಾಡಬೇಕಾಯಿತು! ಆದರೆ, ಗಣಿತದ ಅಧ್ಯಯನದ ಹಸಿವು ನಿಲ್ಲಲಿಲ್ಲ ಅನ್ನುವುದು ಭಾರತದ ಅದೃಷ್ಟ.ರಾಮಾನುಜನ್ ಮದುವೆ ಆದಾಗ ಅವರಿಗೆ 22 ವರ್ಷ. ಅವರ ಹೆಂಡತಿ ಜಾನಕಿಗೆ 9 ವರ್ಷ! ಗುಮಾಸ್ತನ ಕೆಲಸ ಮಾಡುತ್ತ ಈ ಗಣಿತ ಪ್ರತಿಭೆ ಹಾಳಾಗಬಾರದು ಎಂದು ಆಗ ಆರ್ಕಾಟ್ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಆಗಿದ್ದ ರಾಮಸ್ವಾಮಿ ಅಯ್ಯರ್ ಅವರು ಮೊದಲು ಮನಗಂಡರು. ಅದಕ್ಕಾಗಿ ಕೇಂಬ್ರಿಜ್ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಜಿ ಹೆಚ್ ಹಾರ್ಡಿ ಅವರೇ ಸೂಕ್ತವಾದ ಗುರು ಆಗುತ್ತಾರೆ ಎಂದು ಮನಗಂಡರು ಅಯ್ಯರ್. ಅವರ ಶಿಫಾರಸು ಪಡೆದು ರಾಮಾನುಜನ್ ತನ್ನ ಸಂಶೋಧನೆಯ ಫಲವಾದ 120 ಗಣಿತದ ಪ್ರಮೇಯಗಳನ್ನು ಬರೆದು ಹಾರ್ಡಿ ಸರ್ ಅವರಿಗೆ ಕಳುಹಿಸಿಕೊಟ್ಟರು.ಹಾರ್ಡಿ ಸರ್ ಈ ಯುವಕನ ಅಗಾಧ ಪ್ರತಿಭೆಯನ್ನು ಮನಗಂಡು ಇಂಗ್ಲಂಡ್‌ಗೆ ಬರಲು ಹೇಳಿದರು. 1914ರ ಮಾರ್ಚ್ 17ರಂದು ಲಂಡನ್ ಹೋಗುವ ಹಡಗಿನಲ್ಲಿ ಆರು ತಿಂಗಳು ಪ್ರಯಾಣ ಮಾಡಿ ಅವರು ಕೇಂಬ್ರಿಜ್ ತಲುಪಿದರು.ಹೊರಡುವ ಮೊದಲು ನಿನಗೆ ಬುಟ್ಟಿ ತುಂಬಾ ಚಿನ್ನದ ಆಭರಣ ತರುವೆ ಎಂದು ಹೆಂಡತಿಗೆ ಅವರು ಪ್ರಾಮಿಸ್ ಕೊಡುತ್ತಾರೆ. ಆಗ 19 ವರ್ಷದ ಹೆಂಡತಿ ಜಾನಕಿ ಹೇಳಿದ ಮಾತು ಇಲ್ಲಿ ನಾನು ದಾಖಲು ಮಾಡಬೇಕು. ‘ನನಗೆಚಿನ್ನಾಭರಣದ ಆಸೆ ಇಲ್ಲ .ನೀವು ಗಣಿತದ ಮಹಾ ಮೇರು ಎಂದು ಸಾಧನೆ ಮಾಡಿಕೊಂಡು ಹಿಂದೆ ಬರುವ ಭರವಸೆ ನನಗಿದೆ. ಅದೇ ನನಗೆ ಚಿನ್ನದ ಆಭರಣ!’ ಎಂದಿದ್ದರು ಜಾನಕಿ. ರಾಮಾನುಜನ್ ಜೀವನದಲ್ಲಿ ಆಕೆ ಕೊಟ್ಟ ಸ್ಫೂರ್ತಿ ಮತ್ತು ಪ್ರೀತಿಗಳನ್ನು ಬೇರೆ ಯಾರೂ ಕೊಡಲು ಸಾಧ್ಯ ಇರಲಿಲ್ಲಕೇಂಬ್ರಿಜ್‌ನಲ್ಲಿ ರಾಮಾನುಜನ್ ಇದ್ದದ್ದು ಹೆಚ್ಚು ಕಡಿಮೆ ಐದು ವರ್ಷಗಳು. ಆದರೆ ಹಗಲು ರಾತ್ರಿ ಗಣಿತ ಪ್ರಪಂಚದಲ್ಲಿ ಮುಳುಗಿಬಿಟ್ಟ ಆತ ನೂರಾರು ಗಣಿತದ ಸಂಶೋಧನೆಗಳನ್ನು ಪೂರ್ತಿ ಮಾಡಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಗೆ ಬಂದ ಮಂಜುಗೆ ಧಿಕ್ಕಾರ ಕೂಗಿದ ಮನೆ ಮಂದಿ..!

Thu Dec 22 , 2022
ಬಿಗ್ ಬಾಸ್ ಜರ್ನಿ ಇರುವುದು ಕೇವಲ ಇನ್ನು ಎರಡು ವಾರ ಮಾತ್ರ. ಮುಗಿದರೆ ಎಲ್ಲರೂ ಫೈನಲ್‌ನಲ್ಲಿ ಇರುತ್ತಾರೆ. ಯಾರಾದರೂ ಒಬ್ಬರು ಟ್ರೋಫಿ ತೆಗೆದುಕೊಂಡು ಹೋಗುತ್ತಾ ಇರುತ್ತಾರೆ. ಬಿಗ್ ಬಾಸ್ ಮುಗಿದ ಮೇಲೆ ಅದರ ಫಿಲಿಂಗ್ಸ್ ನಲ್ಲಿ ಒಂದಷ್ಟು ದಿನ ತೇಲಾಡುತ್ತಾ ಉಳಿದವರು ಮುಂದಿನ ಕೆಲಸಗಳನ್ನು ನೋಡುತ್ತಾರೆ.ಆದರೆ ಈಗಾಗಲೇ 88 ದಿನದತ್ತ ಬಂದಿರುವ ಬಿಗ್ ಬಾಸ್ ಮನೆ ಮಂದಿಗೆ ಈಗ ಒಂದಷ್ಟು ಎಕ್ಸ್ಟ್ರಾ ಬೂಸ್ಟ್ ಬೇಕಾಗಿದೆ. ಆ ಬೂಸ್ಟ್ ನೀಡುವುದಕ್ಕೆ ಬಿಗ್ […]

Advertisement

Wordpress Social Share Plugin powered by Ultimatelysocial