ಬಿಗ್ ಬಾಸ್ ಮನೆಗೆ ಬಂದ ಮಂಜುಗೆ ಧಿಕ್ಕಾರ ಕೂಗಿದ ಮನೆ ಮಂದಿ..!

ಬಿಗ್ ಬಾಸ್ ಜರ್ನಿ ಇರುವುದು ಕೇವಲ ಇನ್ನು ಎರಡು ವಾರ ಮಾತ್ರ. ಮುಗಿದರೆ ಎಲ್ಲರೂ ಫೈನಲ್‌ನಲ್ಲಿ ಇರುತ್ತಾರೆ. ಯಾರಾದರೂ ಒಬ್ಬರು ಟ್ರೋಫಿ ತೆಗೆದುಕೊಂಡು ಹೋಗುತ್ತಾ ಇರುತ್ತಾರೆ. ಬಿಗ್ ಬಾಸ್ ಮುಗಿದ ಮೇಲೆ ಅದರ ಫಿಲಿಂಗ್ಸ್ ನಲ್ಲಿ ಒಂದಷ್ಟು ದಿನ ತೇಲಾಡುತ್ತಾ ಉಳಿದವರು ಮುಂದಿನ ಕೆಲಸಗಳನ್ನು ನೋಡುತ್ತಾರೆ.ಆದರೆ ಈಗಾಗಲೇ 88 ದಿನದತ್ತ ಬಂದಿರುವ ಬಿಗ್ ಬಾಸ್ ಮನೆ ಮಂದಿಗೆ ಈಗ ಒಂದಷ್ಟು ಎಕ್ಸ್ಟ್ರಾ ಬೂಸ್ಟ್ ಬೇಕಾಗಿದೆ. ಆ ಬೂಸ್ಟ್ ನೀಡುವುದಕ್ಕೆ ಬಿಗ್ ಬಾಸ್ ಆಗಾಗ ಪ್ಲ್ಯಾನ್ ಮಾಡುತ್ತಲೇ ಇರುತ್ತದೆ. ಈ ಬಾರಿ ಮಂಜು ಪಾವಗಡ ಎಂಬ ಬೂಸ್ಟ್ ನೀಡಿದ್ದರೂ ಮನೆ ಮಂದಿ ಸೇರಿಕೊಂಡು ಧಿಕ್ಕಾರ ಕೂಗಿದ್ದಾರೆ.ಒಂದು ಹಾಡನ್ನು ಹೇಳಿಸಿದ ಮಂಜುಮನೆಗೆ ಬರುವುದಕ್ಕೂ ಮುನ್ನ ಎಲ್ಲರ ಬಗ್ಗೆಯೂ ಮಂಜು ಚೆನ್ನಾಗಿಯೇ ತಿಳಿದುಕೊಂಡು ಬಂದಿದ್ದರು. ಹೀಗಾಗಿ ಅವರಿಗೆ ಮನೆಗೆ ಬಂದ ಕೂಡಲೇ ಯಾವುದು ಕಷ್ಟವಾಗಲಿಲ್ಲ. ಅದರಲ್ಲೂ ರಾಜಣ್ಣನನ್ನು ಕಂಡು ಅವರ ಹಾಡನ್ನು ನೆನೆಪಿಸಿಕೊಂಡಿದ್ದಾರೆ. “ರಾಜಣ್ಣ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿ ಇದೆ. ಅವತ್ತು ಹಾಡು ಕೇಳಿದಾಗ ತುಂಬಾ ಖುಷಿ ಅನ್ನಿಸಿತ್ತು. ಒಂದು ಹಾಡು ಹೇಳಿ” ಎಂದಾಗ ರಾಜಣ್ಣ ಕೂಡ ಗೀತಾ ಸಿನಿಮಾದ “ಪ್ರೀತಿ ಎಂದರೇನು ಈಗ ಅರಿತೇನು…” ಎಂಬ ಹಾಡನ್ನು ಹಾಡಿದ್ದಾರೆ. ಜೊತೆಗೆ “ಮಂಜಣ್ಣ ಬಿಗ್ ಬಾಸ್‌ಗೆ ಬರುತ್ತಾರೆ ಎಂದರೆ ನಮಗೆ ಖುಷಿಯಾಗದೆ ಇರುವುದಿಲ್ಲ. ನೀವೂ ಇದ್ದಷ್ಟು ದಿನ ನಾವೂ ಖುಷಿಯಾಗಿರುತ್ತೇವೆ. ಒಳ್ಳೆಯದಾಗಲಿ ಮಂಜಣ್ಣ” ಎಂದು ಶಂಕರ್ ನಾಗ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದಿದ್ದಾರೆ. ರಾಜಣ್ಣನ ಅದೃಷ್ಟ ಹೇಗಿತ್ತು ಎಂದರೆ ಮಂಜು ಹಾಕಿದ ಪ್ರತಿಯೊಂದು ಕಾಯಿ ಕೂಡ ಗೆಲುವಿಗೆ ಹತ್ತಿರ ತಂದಿತ್ತು. ಫಸ್ಟ್ ವಿನ್ ಆಗಿದ್ದು ರಾಜಣ್ಣ ಅನ್ನೋದು ವಿಶೇಷ.ಮಂಜುಗೆ ಧಿಕ್ಕಾರ ಕೂಗಿದ ಮನೆಯವರುಅತ್ತ ಮಂಜು ಹಾಕುತ್ತಿದ್ದ ಒಂದೊಂದು ಕಾಯಿಯಿಂದ ರಾಜಣ್ಣ ಮುಂದೆ ಹೋಗುತ್ತಾ ಇದ್ದರು. ಅದನ್ನು ಕಂಡು ಮನೆಯವರು ಹೌಹಾರುತ್ತಿದ್ದರು. “ಮಂಜ ಈ ನಂಬರ್ ಹಾಕಬೇಡ, ಆ ನಂಬರ್ ಹಾಕಬೇಡ” ಅಂತ ದಿವ್ಯಾ ಕಿರುಚುತ್ತಾ ಇದ್ದರು. ಆದರೂ ರಾಜಣ್ಣ ಫಸ್ಟ್ 100 ಪರ್ಸೆಂಟ್‌ಗೆ ತಲುಪಿ ಗೆದ್ದು ಹೊರಗೆ ಬಂದರು. ಗೆದ್ದ ಖುಷಿ ರಾಜಣ್ಣ ಮತ್ತು ಮಂಜಣ್ಣ ಇಬ್ಬರಲ್ಲೂ ಇತ್ತು. ಆದರೆ ಮನೆಯವರೆಲ್ಲಾ ಮಂಜನಿಗೆ ಧಿಕ್ಕಾರ, ಧಿಕ್ಕಾರ ಅಂತ ಕೂಗುತ್ತಾ ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಹಾರ್ದಿಕ್ ಪಾಂಡ್ಯಗೆ ಸೂಚನೆ.

Thu Dec 22 , 2022
ಡಿಸೆಂಬರ್ 21ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಆದರೆ, ಬಿಸಿಸಿಐ ಉನ್ನತ ಅಧಿಕಾರಿಗಳು ಹಾರ್ದಿಕ್ ಪಾಂಡ್ಯರನ್ನು ಸಂಪರ್ಕಿಸಿ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಂಡ್ಯ ಯೋಚಿಸಲು ಸಮಯ ಕೇಳಿದ್ದಾರೆ.ಬಿಸಿಸಿಐ ಶೀಘ್ರದಲ್ಲೇ ಹೊಸ ಆಯ್ಕೆ ಸಮಿತಿಯನ್ನು ನೇಮಿಸಿ ನಿರ್ಧಾರವನ್ನು ಅಧಿಕೃತಗೊಳಿಸಲಿದೆ. ರೋಹಿತ್ ಶರ್ಮಾ 2023 ರ ವಿಶ್ವಕಪ್ ವರೆಗೆ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕರಾಗಿ ಮುಂದುವರೆಯಲಿದ್ದಾರೆ. ಇಂಗ್ಲೆಂಡ್ […]

Advertisement

Wordpress Social Share Plugin powered by Ultimatelysocial