ಉಗ್ರಗಾಮಿ ಸಂಘಟನೆಗೆ ಸಂಚು

ಗ್ರಗಾಮಿ ಸಂಘಟನೆ ಸ್ಥಾಪಿಸಲು ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಶಾಸಕ ಹಿತೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೊಕ್ರಜಾರ್ ಜಿಲ್ಲೆಯ ಮಾಜಿ ಶಾಸಕ ಹಿತೇಶ್ ಬಸುಮತರಿ ಅವರ ಮೇಲೆ ಗುಮಾನಿ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರ ನಿವಾಸದ ಮೇಲೆ ಶೋಧ ಕಾರ್ಯ ನಡೆಸಿದ್ದರು.ಈ ವೇಳೆ ಒಂದು ಎಕೆ 47 ಮತ್ತು ಒಂದು ಎಂ16 ರೈಫಲ್ ಹಾಗೂ 100 ಜೀವಂತ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ.ಘಟನೆಯಲ್ಲಿ ಮಾಜಿ ಶಾಸಕ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಈ ಮೂವರು ಹೊಸ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಲು ಸಂಚು ರೂಪಿಸುತ್ತಿದ್ದರು. ಅದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಕೋಕ್ರಜಾರ್ ಪೊಲೀಸ್ ಅಧೀಕ್ಷಕ ಪುಷ್ಪರಾಜ್ ಸಿಂಗ್ ತಿಳಿಸಿದ್ದಾರೆ.”ನಾವು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯಲು ಬಿಜೆಪಿ ಭರ್ಜರಿ ತಯಾರಿ

Sun Jan 8 , 2023
  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಈ ನಿಟ್ಟಿನಲ್ಲಿ ತೊಡಗಿಕೊಂಡಿವೆ. ರಾಜಕೀಯ ಪಕ್ಷಗಳ ನಾಯಕರ ಆರೋಪ – ಪ್ರತ್ಯಾರೋಪದ ನಡುವೆ ಅಪರೂಪದ ಘಟನೆಯೊಂದು ನಡೆದಿದಹೌದು, ಸಮಾರಂಭ ಒಂದರಲ್ಲಿ ಪಾಲ್ಗೊಂಡಿದ್ದ ತುಮಕೂರು ಕ್ಷೇತ್ರದ ಬಿಜೆಪಿ ಸಂಸದ ಜಿ.ಎಸ್. ಬಸವರಾಜು, ವಿಧಾನಸಭಾ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದು, ಗಮನಾರ್ಹ ಸಂಗತಿ ಎಂದರೆ ರಾಜಣ್ಣ […]

Advertisement

Wordpress Social Share Plugin powered by Ultimatelysocial