ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕಸಿಂಗನಗುತ್ತಿ ಗ್ರಾಮದ ಬಳಿ ನಡೆದಿದೆ.ಬೆಂಕಿ ಅವಘಡದಿಂದ ಜಮೀನಿನಲ್ಲಿದ್ದ ಪಿವಿಸಿ ಪೈಪುಗಳು,ಡ್ರಿಪ್ ಪೈಪ್ ಗಳು ಸಂಪೂರ್ಣ ಸುಟ್ಟು ಹೋಗಿದೆ.ಜೊತೆಗೆ ಶೇಂಗಾ,ತೊಗರಿ,ಕಡಲೆ ಬೆಳೆಗಳು ಸುಟ್ಟು ಹಾಳಾಗಿದೆ.ಅನೇಕ ತೆಂಗಿನ ಗಿಡಗಳು ನಿಂಬೆ ಗಿಡಗಳು ಪೇರಲ ಗಿಡಗಳು ನಾಶವಾಗಿದ್ದು, ರೈತ ಶ್ರೀಧರ್ ಬಾರಿಕೇರ್ ಹಾಗೂ ಅವರ ತಾಯಿ ಕಂಗಾಲಾಗಿದ್ದಾರೆ.ಇನ್ನು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ […]

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಆನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದೆ. ಕಾಡಾನೆಗಳ ಅಬ್ಬರಕ್ಕೆ 10-15 ತೆಂಗಿನ ಸಸಿಗಳು ನಾಶವಾಗಿದೆ.3-5 ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು,ವೆಂಕಟಲಕ್ಷ್ಮಮ್ಮ, ಮಲ್ಲೇಶ್ ಎಂಬುವರಿಗೆ ಸೇರಿದ ಬೆಳೆಯನ್ನು ಸಂಪೂರ್ಣ ಧ್ವಂಸ ಮಾಡಿದೆ. ಕಳೆದ 1 ತಿಂಗಳಿಂದ ಸತತವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದು,ಆನೆಗಳ ದಾಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ:ಚಿರತೆ ದಾಳಿಗೆ ಕುರಿ ಸಾವು

ಮಂಡ್ಯ ಜಿಲ್ಲೆಯ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿದವು. ಎರಡು ಎಕರೆ ಕಬ್ಬು ಬೆಳೆ ಮತ್ತು ರಾಗಿ ಮೆದೆಗಳನ್ನು ನಾಶ ಮಾಡಿದ್ದು, ಬೆಳ್ಳಂಬೆಳಗ್ಗೆ ಶಿವಕುಮಾರ್ ಎಂಬ ರೈತರ ಜಮೀನಿನಲ್ಲಿ ಆನೆಗಳು ಪ್ರತ್ಯಕ್ಷವಾದವು . ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಮಾಡಿದರು. ಇದನ್ನೂ ಓದಿ :ಟ್ಯಾಂಕರ್ ಮತ್ತು ದ್ವಿಚಕ್ರವಾಹನ ಡಿಕ್ಕಿ

Advertisement

Wordpress Social Share Plugin powered by Ultimatelysocial