ಸಾಲ ಬಾದೆ ಹಿನ್ನಲೆ ನೇಣು ಬಿಗಿದುಕೊಂಡು ರೈತ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಡಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಮುನಿರಾಮಪ್ಪ (62) ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಸಾಲ ಕಟ್ಟುವಂತೆ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಇನ್ನು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಚಿತ್ರದುರ್ಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ

ರೈತ ವಿರೋಧಿ ಕಾಯ್ದೆ ಹಾಗೂ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಲು ರಾಷ್ಟ್ರೀಯ ರಿಪಬ್ಲಿಕನ್ ಸೇನೆ ವತಿಯಿಂದ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘಟನಾಕಾರರು ನೀಲಿ ಶಾಲನ್ನು ಧರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕನಕ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಜಾಥಾ ನಡೆಸಿ, ದುಡಿದು ತಿನ್ನಲು ಆಗದ ರೀತಿಯಲ್ಲಿ ಇಂದು ಒಂದು ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾರಿಗೆ ತಂದಿರುವ ನೀತಿಯನ್ನು ಕೂಡಲೆ ರದ್ದು ಮಾಡಬೇಕು […]

ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳು ಕಾಡಾನಡಗಳ ದಾಳಿಯಿಂದ ಹಾನಿಯಾಗಿರುವ ಘಟನೆ ಕೋಲಾರದ ಗಡಿ ಭಾಗದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು,ರೈತನ ಒಂದು ಎಕರೆ ಟೊಮ್ಯಾಟೊ ತೋಟ ಸಂಪೂರ್ಣ ನಾಶವಾಗಿದೆ. ಇತ್ತೀಚೆಗಷ್ಟೇ ರೈತನು ಸಾಲ‌ಮಾಡಿ ಟೊಮ್ಯಾಟೊ ಬೆಳೆದಿದ್ದ, ಇನ್ನೇನು ಫಸಲು ಬಿಡುವಷ್ಟರಲ್ಲಿ ಕಾಡಾನೆಗಳ ದಾಳಿಯಿಂದ ಇಡೀ ತೋಟ ಹಾನಿಯಾಗಿದೆ. ಇದಲ್ಲದೆ ಭೀಮಗಾನಹಳ್ಳಿ ಸುತ್ತಮುತ್ತಲಿನಲ್ಲಿ ಹಲವಾರು ರೈತರು ಬಾಳೆ, ಕ್ಯಾಪ್ಸಿಕಂ ಸೇರಿದಂತೆ ವಿವಿಧ […]

ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಡಿಕೇರಿಯ ಪೊನ್ನಂಪೇಟೆಯಲ್ಲಿ ಮಾತನಾಡಿದ ಬಿಸಿ ಪಾಟೀಲ್ ರೈತರು ಆತ್ಮ ಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸಕ್ಕೆ ಮುಂದಾಗಬಾರದು.. ಕೃಷಿ ಮಾಡಿ ಉತ್ತಮ ಜೀವನ ನಡೆಸುವವರಿದ್ದಾರೆ. ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದವನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಗಳು ಎಂದು ಬಿಸಿ ಪಾಟೀಲ್ ರೈತರ ಅನ್ನದಾತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಇದನ್ನು ಓದಿ:ಸಂಪೂರ್ಣ ಹದಗೆಟ್ಟಿರುವ ಆದರಹಳ್ಳಿ ರಸ್ತೆ

ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದಲ್ಲಿ ನಡೆದಿದೆ. ಎಸ್.ಬಿ.ಐ ಬ್ಯಾಂಕ್ ನಲ್ಲಿ 7ಲಕ್ಷ ಸಾಲ ಸೇರಿದಂತೆ 3 ಲಕ್ಷ ರೂ ಕೈಸಾಲ ಮಾಡಿ ರೈತ 7 ಎಕರೆಯಲ್ಲಿ ಹತ್ತಿ, ಮೆಕ್ಕೆಜೋಳ ಬೆಳೆದಿದ್ದು, ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿತ್ತು. ಬೆಳೆ ಹಾನಿಯಿಂದಾಗಿ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ :ಕ್ಲಬ್ […]

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ಬೆಳೆಗಾರರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ಹಾಗೂ ಕೆಲವು ಕಡೆ ರೈತರುಗಳು ಆತ್ಮಹತ್ಯಗೆ ಶರಣಾಗಿದ್ದರು.  ಈ ಹಿನ್ನಲೆಯಲ್ಲಿ ಮೆಕ್ಕೆಜೋಳ ಹಾಗೂ ಹೂವು ಬೆಳೆದ ರೈತರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ ಪರಿಹಾರ ಧನ ನೀಡುವುದಾಗಿ ಪ್ರಕಟಿಸಿತ್ತು. ಅದೇ ರೀತಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು  ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ […]

ರೈತರಿಗೆ ಬ್ಯಾಂಕುಗಳು ಕಹಿಸುದ್ದಿಯನ್ನ ನೀಡಿದ್ದು, ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲು ಹಿಂದಿನ ಬಾಕಿಯನ್ನ ಮೇ ೩೧ರೊಳಗಾಗಿಯೇ ಮರುಪಾವತಿಸಬೇಕೆಂದು ಸಹಕಾರಿ ಬ್ಯಾಂಕುಗಳು ರೈತರಿಗೆ ತಿಳಿಸಿವೆ. ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ರೈತರು ಕೃಷಿ ಸಾಲವನ್ನು ಕಟ್ಟಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದಲ್ಲಿ ಕೇಂದ್ರ ಸರಕಾರದ ಪಾಲನ್ನು ರಾಜ್ಯ ಸರಕಾರ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತಪರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ.

ಕೊರೊನಾ ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಅನುಕೂಲ ಆಗಲೆಂದು ಕೇಂದ್ರ ರ‍್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಇದೀಗ ಕಿಸಾನ್ ಸಮ್ಮಾನ್ ಯೋಜನೆಯಡಿ ನೀವು ಕಿಸಾನ್ ಕ್ರೆಡಿಟ್ ಕರ‍್ಡ್ ಕೂಡ ಪಡೆಯಬಹುದು. ರ‍್ಕಾರದಿಂದ ಈ ಕ್ರೆಡಿಟ್ ಕರ‍್ಡ್ ನೀಡಲಾಗುತ್ತದೆ. ಪ್ರಸ್ತುತ ಸುಮಾರು ೭ ಕೋಟಿ ರೈತರು ಕೆಸಿಸಿ ಹೊಂದಿದ್ದಾರೆ. ಇದರ ಜೊತೆಗೆ ಒಬ್ಬ ರೈತ, ಪಿಂಚಣಿ ಯೋಜನೆಯ ಫಲಾನುಭವಿ ಕೂಡ ಆಗಬಹುದಾಗಿದೆ‌, ಅನೇಕ ರೈತರ ಖಾತೆಗೆ ಈ ಯೋಜನೆಯಡಿ ಹಣ […]

Advertisement

Wordpress Social Share Plugin powered by Ultimatelysocial