ಈ ಬಾರಿ ಫ್ರೀ ಆಗಿ ನೋಡಿ ತಾಜ್​ ಮಹಲ್​!

 ತಾಜ್​ ಮಹಲ್​ ನೋಡ್ಬೇಕು ಅಲ್ಲೇ ತಮ್ಮ ಪ್ರೇಮಿಗೆ ಪ್ರಪೋಸ್ ​ ಮಾಡ್ಬೇಕು ಅನ್ನೋದು ಹಲವು ಪ್ರೇಮಿಗಳ ಬಯಕೆಯಾಗಿರುತ್ತೆ. ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಯೊಂದಿಗೆ ಒಮ್ಮೆಯಾದರೂ ತಾಜ್ ಮಹಲ್ ಗೆ ಹೋಗಬೇಕು ಎಂದು ಬಯಸುತ್ತಾನೆ.
ಇನ್ನು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಫ್ಯಾಮಿಲಿ ಫೋಟೋ ತೆಗೆದುಕೊಳ್ಳೋ ಆಸೆ ಕೂಡ ಅಧಿಕ ಮಂದಿಗಿದೆ. ಪ್ರೀತಿಯ ಸಂಕೇತವಾಗಿರುವ ಈ ತಾಜ್​ ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ಒಂದು ಗುಡ್​ ನ್ಯೂಸ್ ನೀಡಿದೆ. ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ.
ತಾಜ್​ ಮಹಲ್​ಗೆ 3 ದಿನ ಉಚಿತ ಪ್ರವೇಶ

3 ದಿನ ತಾಜ್​ ಮಹಲ್​ಗೆ ಉಚಿತ ಪ್ರವೇಶ ಭಾರತೀಯ ಪುರಾತತ್ವ ಇಲಾಖೆ ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ. ಈ 3 ದಿನ ತಾಜ್ ಮಹಲ್​ನಲ್ಲಿ ಷಹಜಹಾನನ ಉರುಸ್​ ಆಚರಿಸಲಾಗುವುದು. ಹೀಗಾಗಿ ಈ 3 ದಿನಗಳಲ್ಲಿ ಪ್ರವಾಸಿಗರು ವಿನಾಯಿತಿ ಪಡೆಯಲಿದ್ದಾರೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ತಿಳಿಸಿದ್ದಾರೆ. ಪ್ರತಿ ವರ್ಷ ಉರುಸ್ ಆಚರಣೆ ಸಂದರ್ಭದಲ್ಲಿ ಈ ವಿನಾಯಿತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದಂದು ಕೂಡಾ ತಾಜ್ ಮಹಲ್​ನಲ್ಲಿ ಪ್ರವಾಸಿಗರಿಗೆ ಉಚಿತ ಪ್ರವೇಶ ದೊರೆಯಲಿದೆ.
ಉರುಸ್ ಆಚರಣೆ ಹಿನ್ನೆಲೆ ವಿನಾಯಿತಿ

ತಾಜ್ ಮಹಲ್​ನಲ್ಲಿ ಮುಮ್ತಾಜ್ ಮಹಲ್ ಸಮಾಧಿ ಇದೆ. ಷಹಜಹಾನ್ನನ್ನು ಅವನ ಪತ್ನಿಯೊಂದಿಗೆ ಸಮಾಧಿ ಮಾಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅನುಮತಿಗೆ ಅನುಗುಣವಾಗಿ ಪ್ರತಿ ವರ್ಷ ಚಕ್ರವರ್ತಿಯ ಷಹಜಹಾನ್ ಮೃತಪಟ್ಟ ದಿನದಂದು ಇಲ್ಲಿ ಉರುಸ್ ನಡೆಯುತ್ತದೆ ಫೆಬ್ರವರಿ 27ರಂದು ಷಹಜಹಾನ್​ನ ಉರುಸ್ ಮೊದಲ ದಿನ. ಅಂದು ಮಧ್ಯಾಹ್ನ 2 ಗಂಟೆಯಿಂದ ಸೂರ್ಯಾಸ್ತದ ವರೆಗೆ ಎಲ್ಲಾ ಪ್ರವಾಸಿಗರಿಗೂ ಉಚಿತ ಪ್ರವೇಶ ಇರಲಿದೆ. ಫೆಬ್ರವರಿ 28 ರಂದು ಹಿಂದಿನ ದಿನದ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಮಾರ್ಚ್ 1 ಉರುಸ್ ಕೊನೆಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಚಿತ ಪ್ರವೇಶ ಇರಲಿದೆ ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ರಾಜ್​ಕುಮಾರ್ ಪಟೇಲ್ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಕಡ್ಡಾಯ

ಷಹಜಹಾನ್ ನ 3 ದಿನಗಳ ಉರುಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಇರಲಿದೆ. ಹೀಗಾಗಿ ತಾಜ್ ಮಹಲ್​ ಭದ್ರತಾ ವ್ಯವಸ್ಥೆ ಬಲಪಡಿಸಲಾಗುತ್ತದೆ. ಉಚಿತ ಪ್ರವೇಶ ಪಡೆಯುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಒಂದು ವರ್ಷದ ನಂತರ ಪ್ರವಾಸಿಗರಿಗೆ ರಾತ್ರಿವೇಳೆ ತಾಜ್​ಮಹಲ್ ಕಣ್ತುಂಬಿಕೊಳ್ಳೋ ಅವಕಾಶ, ಯಾವಾಗಿನಿಂದ? ಯಾವ ಸಮಯದಲ್ಲಿ ಅನುಮತಿ?
ತಾಜ್​ ಮಹಲ್​ ಭೇಟಿಗೆ ಫೆಬ್ರವರಿ ತಿಂಗಳೇ ಉತ್ತಮ

ತಾಜ್​ ಮಹಲ್​ಗೆ ಭೇಟಿ ನೀಡುವವರು ನವೆಂಬರ್ ನಿಂದ ಫೆಬ್ರವರಿ ಅಂತ್ಯದೊಳಗೆ ಹೋಗದೇ ಉತ್ತಮ, ಬಳಿಕ ಬೇಸಿಗೆ ಬಿಸಿಲು ಶುರುವಾಗುತ್ತೆ ಅಸಹನೀಯವಾಗಿ ಬಿಸಿಯಾಗಬಹುದು ಅಥವಾ ಮಳೆಯಾಗಬಹುದು. ಆದರೂ ನೀವು ಕೆಲವು ಅತ್ಯುತ್ತಮ ಆಫ್-ಸೀಸನ್ ರಿಯಾಯಿತಿಗಳನ್ನು ಪಡೆಯಬಹುದು. ತಾಜ್ ಮಹಲ್ ಅದರ ಬಣ್ಣವನ್ನು ದಿನಕ್ಕೆ ಬದಲಾಗುತ್ತಿರುವ ಬೆಳಕಿನಲ್ಲಿ ಕ್ರಮೇಣ ಮಾರ್ಪಡಿಸುತ್ತದೆ. ಯಮುನ ನದಿ ತೀರದಲ್ಲಿರೋ ತಾಜ್ ಮಹಲ್​ ಬಳಿ ಸುರ್ಯೋದಯ ನೋಡೋದೆ ಒಂದು. ಬೆಳಗಿನ ಜಾವ ಇಂಥಾ ಅನುಭವ ಪಡೆಯಲು ಪ್ರವಾಸಿಗರು ಕಾಯುತ್ತಿರುತ್ತಾರೆ. ನಿತ್ಯ ಈ ಸುಂದರ ತಾಣ ನೋಡಲು ಸಾವಿರಾರು ಪ್ರವಾಸಿಗರ ದಂಡೇ ಹರಿದು ಬರುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಪಿ ಚುನಾವಣೆ 2022: ಎಸ್‌ಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯುಪಿ ಭಾರತದಾದ್ಯಂತ ಭಯೋತ್ಪಾದನೆಯನ್ನು ಪೂರೈಸುತ್ತದೆ - ಅಖಿಲೇಶ್ ಯಾದವ್ ವಿರುದ್ಧ ಅಮಿತ್ ಶಾ ವಾಗ್ದಾಳಿ

Sat Feb 19 , 2022
  ಲಖನೌ: ಸಮಾಜವಾದಿ ಪಕ್ಷದ ವಿರುದ್ಧ ಗೃಹ ಸಚಿವ ಅಮಿತ್ ಶಾ ಶನಿವಾರ ವಾಗ್ದಾಳಿ ನಡೆಸಿದ್ದು, ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶವು “ದೇಶದಾದ್ಯಂತ ಭಯೋತ್ಪಾದನೆಯನ್ನು ಪೂರೈಸುತ್ತದೆ” ಎಂದು ಪ್ರತಿಪಾದಿಸಿದ್ದಾರೆ. ನಡೆಯುತ್ತಿರುವ ರಾಜ್ಯ ಅಸೆಂಬ್ಲಿ ಚುನಾವಣೆಯ ಮೂರನೇ ಹಂತಕ್ಕೆ ಮುಂಚಿತವಾಗಿ, ಷಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಬ್ಬರೂ ಕೂಡ ರಾಜ್ಯದಲ್ಲಿ ಮರು ಆಯ್ಕೆಯಾದರೆ ಬಿಜೆಪಿ ಪ್ರತಿ ವರ್ಷ ಎರಡು ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ನೀಡಲಿದೆ ಎಂದು […]

Advertisement

Wordpress Social Share Plugin powered by Ultimatelysocial