ಟೆಲಿಗ್ರಾಮ್​ ಬಳಕೆದಾರರೇ ಎಚ್ಚರ!

ಕೊಚ್ಚಿ: ಟೆಲಿಗ್ರಾಮ್​ನಲ್ಲಿ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳಿಗೆ ಯಾವುದೇ ಕಡಿವಾಣ ಇಲ್ಲ. ಈ ವೇದಿಕೆಯಲ್ಲಿ ಪೋರ್ನ್​ ವಿಡಿಯೋಗಳ ಮಾರಾಟ, ಶೇರಿಂಗ್​ ನಿರಂತರವಾಗಿ ನಡೆಯುತ್ತಲೇ ಇದೆ. ಕೆಲವು ಗ್ಯಾಂಗ್​ಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ.

ಅಪ್ರಾಪ್ತ ಮಕ್ಕಳ ಬೆತ್ತಲೆ ವಿಡಿಯೋಗಳನ್ನು ಹರಿಬಿಟ್ಟು ಯುವ ಪೀಳಿಗೆಯನ್ನು ತಮ್ಮ ಜಾಲಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ಜಾಲಕ್ಕೆ ಸಿಲುಕಿದರೆ ಜೈಲು ಶಿಕ್ಷೆ ಫಿಕ್ಸ್​ ಎಂಬುದನ್ನು ಮರೆಯಬೇಡಿ. ಏಕೆಂದರೆ, ಪೊಲೀಸ್​ ಇಲಾಖೆ ಟೆಲಿಗ್ರಾಮ್​ ಮೇಲೆ ಹದ್ದಿನ ಕಣ್ಣು ಇಟ್ಟಿದೆ.

ಹೌದು, ಟೆಲಿಗ್ರಾಮ್​ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿ ಸಂಗ್ರಹಿಸಿ ಇಟ್ಟಿದ್ದ ಯುವಕನನ್ನು ಕೇರಳದ ಅಂಟಿಕಾಡ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೆಬಿನ್​ ಥಾಮಸ್​ (26) ಎಂದು ಗುರುತಿಸಲಾಗಿದೆ. ಈತ ಈ ಮೊದಲು ಅರುನಾಟ್ಟುಕರಾದಲ್ಲಿ ವಾಸಿವಿದ್ದನು. ಈಗ ವರಿಯಂ ರಸ್ತೆ ಬಳಿಯ ಪುಲಿಕ್ಕನ್ ಮೂಲಂಕುಲಂ ಮನೆಯಲ್ಲಿದ್ದಾನೆ.

ಮಕ್ಕಳ ಬೆತ್ತಲೆ ವಿಡಿಯೋಗಳೇ ತುಂಬಿದ್ದ ಮೊಬೈಲ್​ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟೆಲಿಗ್ರಾಮ್​​ ಗ್ರೂಪ್‌ಗಳಲ್ಲಿ ಮಕ್ಕಳ ನಗ್ನ ಚಿತ್ರಗಳನ್ನು ಶೇರ್ ಮಾಡುವ ಒಂದು ದೊಡ್ಡ ಗ್ಯಾಂಗ್ ಇದೆ. ಅವರು ಈ ಗುಂಪುಗಳಲ್ಲಿ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಹಣವನ್ನು ಪಡೆದು ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಾರೆ. ಆರೋಪಿ ಸೆಬಿನ್ ಅಂತಹ ಗುಂಪಿನಿಂದ ಮಕ್ಕಳ ನಗ್ನ ವಿಡಿಯೋಗಳು ಮತ್ತು ಚಿತ್ರಗಳನ್ನು ಖರೀದಿಸಿ ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಐಶ್ವರ್ಯ ಡೋಂಗ್ರೆ ಅವರಿಗೆ ದೊರೆತ ಖಚಿತ ಸುಳಿವಿನ ಮೇರೆಗೆ ಇರಿಂಗಲಕುಡ ಡಿವೈಎಸ್ಪಿ ಬಾಬು ಕೆ ಥಾಮಸ್ ಅವರ ಸೂಚನೆ ಮೇರೆಗೆ ಅಂಟಿಕಾಡ್ ಇನ್ಸ್‌ಪೆಕ್ಟರ್ ಪಿ.ಕೆ.ದಾಸ್, ಎಸ್‌ಐ ಐಶ್ವರ್ಯ, ಎಎಸ್‌ಐ ಅರುಣ್‌ಕುಮಾರ್, ಪೊಲೀಸರಾದ ಮುರುಕದಾಸ್ ಮತ್ತು ಸಹದ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದೆ. (ಏಜೆನ್ಸೀಸ್​)

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತಂತ್ರ ವಿಧಾನಸಭೆ ನಿರೀಕ್ಷೆ ಬೆನ್ನಲ್ಲೇ ಮೈತ್ರಿಗೆ ಮುಂದಾದ ಮೇಘಾಲಯ ಸಿಎಂ,

Tue Feb 28 , 2023
ಕೊರ್ನಾಡ್ ಸಂಗ್ಮಾ ತುರಾ (ಮೇಘಾಲಯ): ಮೇಘಾಲಯದಲ್ಲಿ ಸೋಮವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಸಾಧಿಸುವ ಸಾಧ್ಯತೆ ಇಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ತನ್ನ ಹಳೆ ಮಿತ್ರ ಪಕ್ಷವಾದ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಾಗಿ ಮೇಘಾಲಯ ಸಿಎಂ ಕೊರ್ನಾಡ್ ಸಂಗ್ಮಾ ಪ್ರಕಟಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‍ಪಿಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸುಭದ್ರ ಸರ್ಕಾರ […]

Advertisement

Wordpress Social Share Plugin powered by Ultimatelysocial