ಬಾಗಲಕೋಟೆ ಶಾಸಕ ಹಾಗೂ ಸಹೋದರನ ಸವಾಲ್ ಮುಗಿಯುವ ಹಾಗೆ ಕಾಣ್ತಿಲ್ಲ.

ಬಾಗಲಕೋಟೆ ಶಾಸಕ ಹಾಗೂ ಸಹೋದರನ ಸವಾಲ್ ಮುಗಿಯುವ ಹಾಗೆ ಕಾಣ್ತಿಲ್ಲ. ನಿನ್ನೆ ತಮ್ಮನ ವಿರುದ್ಧ ಗುಡುಗಿದ್ದ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಕಿರಿಯ ಸಹೋದರ ಮಲ್ಲಿಕಾರ್ಜುನ ಚರಂತಿಮಠ ತಿರುಗಿ ಬಿದ್ದಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅಣ್ಣನ ಹೆಸರು ಹೇಳದೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. 2004ರಲ್ಲಿ ಬಾಗಲಕೋಟೆಯಲ್ಲಿ ನಿನಗೆ ಬಿಜೆಪಿ ಟಿಕೆಟ್ ಸಿಕ್ಕಾಗ ಎರಡು ಸಲ ಗೆದ್ದಿದ್ದ ಸಿಟ್ಟಿಂಗ್ ಎಂಎಲ್ ಎ ಆಗಿದ್ದ ಪಿ.ಎಚ್.ಪೂಜಾರ ಅವರಿಗೆ ಟಿಕೆಟ್ ತಪ್ಪಿಸಿ ನಿನಗೆ ಟಿಕೆಟ್ ಕೊಟ್ಟಿದ್ದಾರೆ. ಈಗ ಅಭ್ಯರ್ಥಿ ಹೇಗೆ ಚೇಂಜ್ ಮಾಡ್ತಾರಾ ಅಂತಿದಿ. ನಾ ಬಂದ ಮೇಲೆ ಅಷ್ಟು ಓಟು ಬಂದ್ವು, ಇಷ್ಟು ಓಟು ಬಂದ್ವು ಅಂತೀದಿಯಾ.2004ರಲ್ಲಿ ಚೇಂಜ್ ಮಾಡಿದ್ರಲ್ಲ. ಹಂಗೆ ಈಗಲೂ ಮಾಡಬೇಕು. ಪಕ್ಷದ ಮೀಟಿಂಗ್ ಇದ್ದಾಗ ಏನೇನೋ ಮಾತಾಡ್ತಿಯಾ. ಮಾಜಿ ಶಾಸಕ ಪಿ.ಎಚ್.ಪೂಜಾರ ಸೇರಿ ಅನೇಕರು ಪಕ್ಷ ಬಿಟ್ಟು ಹೋಗಿದ್ರು ಮರಳಿ ಬಂದ್ರಿಲ್ಲ ಅಂತ ಹೇಳ್ತಿ. ಅವರು ಬಂದಿಲ್ಲ, ನೀನ ಅವರ ಮನೀ ಮುಂದ ನಿಂತು ಕರೆದುಕೊಂಡು ಬಂದೀ. ಈಗ ನಮ್ಮ ಬಗ್ಗೆ ಅವರೆಷ್ಟು ಜನ ಇದ್ದಾರಾ? ಏಳೆಂಟು ಜನ ಅದಾರ ಅಂತೀ.‌ ಪಾಂಡವರು ಐದು ಜನ ಮಾತ್ರ ಇದ್ರು. ಕೌರವರು ಸಾವಿರಾರು ಜನರು ಇದ್ರು. ತಗೊಂಡು ಏನ್ ಮಾಡೋದು. ನಿನಗೊಬ್ಬನಿಗೆ ಮಾತಾಡಲು ಬರುತ್ತೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಾಲ್ಕು ಮಂದಿ ಮುಂದ ಬಾಗಿಲು ಹಾಕಿಕೊಂಡು ವೀರಾವೇಶದಿಂದ ಮಾತಾಡಿದ್ರ ಎಲ್ಲರನ್ನು ಮೋಸ ಮಾಡುವ ನಿನಗೆ ಇರುವ ಕಲಾ ನನಗೆ ಇಲ್ಲ.‌ ಬಾಗಲಕೋಟೆ ನಗರದಲ್ಲಿ ನೀನು ಮಾಡಿದ್ದೇ ನಾಲ್ಕು ರೋಡ್. ಶಿವಾನಂದ ಜಾಮದಾರ ಮಾಡಿದ್ದು ನಾಲ್ಕು ನೂರು ರಸ್ತೆ ಮಾಡಿದ್ರು. ನಾ ಬರು ಮುಂಚೆ ಊರೆಲ್ಲ ಹೊಲಸು ಆಗಿ ಹೋಗುತ್ತು ಅಂತಾನ. ಮತ್ತ ಜಾಮದಾರ ಅವರು ಮಾಡಿದ್ದೇನು…? ಇಂವ ಬರುವ ಮುಂಚೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಇರಲಿಲ್ಲೇನು? ಹಿಂದೆ ಇಲ್ಲಿ ಶಾಸಕರು, ಸಚಿವರು ಆಗಿದ್ದವರು ಏನು ಮಾಡಿಲ್ಲೇನು? ಪೂಜಾರ, ಸರನಾಯಕ, ಮಂಟೂರು, ಎಸ್ ಆರ್ ಪಾಟೀಲ ಮಂತ್ರಿ ಇದ್ದಾಗ ಏನು ಆಗಿಲ್ಲೇನು? ರಸ್ತೆ ಮಾಡಿಸುವುದು ನಿರಂತರ ಪ್ರಕ್ರಿಯೆ,‌ ರಸ್ತೆ ಅಗಲೀಕರಣ, ಡಾಂಬರಾಕುವುದು ಇದ್ದೆ ಇರುತ್ತೆ. ರೋಡ್ ಮಾಡಿದ್ದು ನೀನು ಅಲ್ಲ, ಜಾಮದಾರ ಅವರು ಮಾಡಿಸಿದ್ದು. ಇಷ್ಟು ಅಭಿವೃದ್ದಿ ಹರಿಕಾರ ಅಂತೀ. ಹಾಗಿದ್ರೆ ಬಾಗಲಕೋಟೆ ಕಿಲ್ಲಾದ ಒಂದು ಸಾವಿರ ಮನೆ ಸ್ಥಳಾಂತರ ಯಾಕ್ ಮಾಡಿಸಿಲ್ಲ? ಮೂರು ಸಲ ಎಂಎಲ್ ಎ ಆಗಿದ್ದಿ. ಯಾಕ್ ಮಾಡಿಸಲಿಲ್ಲ. ಬಾಗಲಕೋಟೆ ನವನಗರ ನೀ ಇದ್ರು, ಇಲ್ದಿದ್ರು ಅಭಿವೃದ್ದಿ ಕೆಲಸ ಆಗ್ತಾವು. ಇದು ಮುಳುಗಡೆ ನಗರ. ಕೆಬಿಜೆಎನ್ ಎಲ್ ನಿಂದ ಫಂಡ್ ಬರ್ತೈತಿ. ನೀ ಇಲ್ಲದಿದ್ದಾಗಲೂ ನವನಗರ ಯುನಿಟ್ ಒಂದು, ಎರಡು ಆಗಿದ್ವು. ಈಗ ಮೂರನೇ ಯೂನಿಟ್ ಆಗುತ್ತೆ ಎಂದು ಸಹೋದರನ ವಿರುದ್ದವೇ ಗುಟುರು ಹಾಕಿದ್ರು. ಬಾಗಲಕೋಟೆ ಕ್ಷೇತ್ರದ ಶಾಸಕರ ಬಗ್ಗೆ ಪಕ್ಷದ ಮುಖಂಡರಿಗೆ ಎಲ್ಲ ಮಾಹಿತಿ ಕೊಟ್ಟು ಬಂದಿದ್ದೇವೆ ಸಂತೋಷಜೀ ಸೇರಿ ಅನೇಕರನ್ನ ಭೇಟಿ‌ಮಾಡಿ ಬಂದಿದ್ದೇವೆ. ಅವರು ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ. ಮೊನ್ನೆ ಬಾಗಲಕೋಟೆಗೆ ಬಂದಾಗಲೂ ಕೆಲವರಿಗೆ ಕಿವಿಯಲ್ಲಿ ಏನು ಹೇಳಬೇಕು ಹೇಳಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಕೊಟ್ರೆ ನಮ್ಮಲ್ಲಿ (ಈಗ ಉಚ್ಛಾಟಿತಗೊಂಡವರು) ಯಾರಾದ್ರೂ ಒಬ್ರು ಕಣದಲ್ಲಿ ಇರುತ್ತೇವೆ. ಈ ಬಗ್ಗೆ ಯಾರು ಎನ್ನುವ ಬಗ್ಗೆ ನಿರ್ಣಯ ಮಾಡುತ್ತೇವೆ. ನಮ್ಮ ಹಿರಿಯರ ಜೊತೆ ಚರ್ಚೆ ಮಾಡುತ್ತೇವೆ. ನಾವು ಬಿಜೆಪಿಯಲ್ಲಿ 28 ವರ್ಷಗಳುಂದ ಇದ್ದೇವೆ. ಉಚ್ಛಾಟನೆ ವಿಚಾರ ಟೆಕ್ನಿಕಲಿ ವಿಷಯವಾಗಿದೆ. ನಾವು ಪಕ್ಷದಿಂದ ಹೋಗೋದಾದ್ರೆ ಯಾವಾಗಲೋ ಹೋಗ್ತಿದ್ವಿ. ಬೇರೆಯವರು ನಮ್ಮನ್ನು ಕರೆದುಕೊಳ್ಳಲು ಪಾಳೇ ಹಚ್ಚಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಹಾಳು ಮಾಡಿದ್ದಾರೆಂದು ನಾವು ವರಿಷ್ಠರಿಗೆ ತಿಳಿಸಿದ್ದೇವೆ. ಹಾಲಿ ಬಿಟ್ಟು ಬೇರೆ ಯಾರಿಗಾದ್ರೂ ಟಿಕೆಟ್ ಕೊಡುವಂತೆ ನಾವು ಹೇಳಿದ್ದೇವೆ. ನಮಗೆ ಕೊಡಬೇಕು ಎಂದಿಲ್ಲ. ಇವರನ್ನು(ವೀರಣ್ಣ ಚರಂತಿಮಠ) ಹೊರತು ಪಡಿಸಿ ಯಾರಿಗೆ ಕೊಟ್ರು ಹಿರಿಯರು ಹೇಳಿದಂತೆ ಕೇಳ್ತೇವೆ. ಏನೋ ಹೋಗ್ಲಿ ಬಿಡು ನಮ್ಮ ಮನ್ಯಾಗ ಒಬ್ರು ಎಂಎಲ್ ಎ ಅದಾರ ಅಂತ ಸುಮ್ನ ಕುಂತ್ರ, ಈಗ ಅಂವಾ ಊರಾ ನಂದು ಅಂತ ಕುಂತಾನ. ಪ್ರತಿಷ್ಠಿತ ಬಿವಿವಿ ಸಂಘಕ್ಕೆ ಹಿರಿಯರು ಜೀವಾ ಕೊಟ್ಟಾರ. ಹಿಂಗ್ ಮಾಡಿ ಮಾಡಿಯೇ 2013 ರಲ್ಲಿ ಸೋತಿದ್ದಿ. ನೀ ಸೋತಾಗ ನಾವು ನಿನ್ನ ಕೂಸು ಜೋಪಾನ ಮಾಡಿದಂತೆ ಮಾಡಿದ್ವಿ ಅಂತಾ ವ್ಯಂಗ್ಯ ವಾಡಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಕನ್ಯಾ ಸಮೃದ್ಧಿ ಯೋಜನೆ :

Sat Feb 11 , 2023
    ನವದೆಹಲಿ: ಭಾರತ ಸರ್ಕಾರವು ಸುಕನ್ಯಾ ಸಮೃದ್ಧಿ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಉಳಿತಾಯ ಖಾತೆಗಳನ್ನು ನೋಂದಾಯಿಸಲು ಮತ್ತು ಹಾಕಿದ ಹಣದ ಮೇಲೆ ಬಡ್ಡಿಯನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್ವೈ) ನಿಮ್ಮ ಮಗಳ ಭವಿಷ್ಯದ ಆರ್ಥಿಕ ಭದ್ರತೆಗೆ ತಿಂಗಳಿಗೆ 250 ರೂ.ಗಳಷ್ಟು ಕಡಿಮೆ ಕೊಡುಗೆ ನೀಡಲು ನಿಮಗೆ ಅನುವು ಮಾಡಿಕೊಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳು ನಿಮ್ಮ ಮಗಳ ಹೆಸರಿನಲ್ಲಿ ನೋಂದಾಯಿಸಲಾದ ಎಸ್‌ಎಸ್ವೈ […]

Advertisement

Wordpress Social Share Plugin powered by Ultimatelysocial