ರಾಜ್ಯದ ಗದ್ದುಗೆ ಏರೋಕೆ ಕಾಂಗ್ರೆಸ್ ಭಾರೀ ಕಸರತ್ತು ನಡೆಸ್ತಿದೆ.

ರಾಜ್ಯದ ಗದ್ದುಗೆ ಏರೋಕೆ ಕಾಂಗ್ರೆಸ್ ಭಾರೀ ಕಸರತ್ತು ನಡೆಸ್ತಿದೆ. ನಿರಂತರವಾಗಿ ಸಮಾವೇಶಗಳನ್ನ ಮಾಡಿ ಮತ ಬೇಟೆಯಾಡ್ತಿದೆ. ಈ ಮಧ್ಯೆ ಕಾಂಗ್ರೆಸ್​​ ಟಿಕೆಟ್​​ಗಾಗಿ ಪೈಪೋಟಿಯೂ ಜೋರಾಗಿದೆ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಈ ಬಾರಿ ಹೆಚ್ಚಿನ ಟೆಕೆಟ್​ಗಾಗಿ ಬೇಡಿಕೆ ಇಟ್ಟಿದೆ.

ಕಾಂಗ್ರೆಸ್​​ ಲಿಂಗಾಯತ ಮುಖಂಡರು ಸಭೆ ನಡೆಸಿ ಹೈಕಮಾಂಡ್​ಗೆ ಕೆಲ ಸಂದೇಶಗಳನ್ನೂ ರವಾನಿಸಿದ್ದಾರೆ.

ಕಾಂಗ್ರೆಸ್​​ ಪ್ರಜಾಧ್ವನಿ ಯಾತ್ರೆ, ಪ್ರತ್ಯೇಕ ಬಸ್​ ಯಾತ್ರೆ, ಮಹಿಳಾ ಸಮಾವೇಶ, ಎರಡು ಪ್ರಮುಖ ಯೋಜನೆಗಳ ಘೋಷಣೆ. ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​​ ಭರ್ಜರಿ ತಾಲೀಮು ಶುರು ಮಾಡಿದೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಂಪರ್ಕ ಸಾಧಿಸ್ತಿದೆ. ಶತಾಯ-ಗತಾಯ ಈ ಬಾರಿ ರಾಜ್ಯದಲ್ಲಿ ಗೆದ್ದು ಬೀಗೋಕೆ ಭಾರೀ ಕಸರತ್ತು ನಡೆಸ್ತಿದೆ.

ಹೀಗೆ ರಾಜ್ಯಾದ್ಯಂತ ಮತಬೇಟೆಯಾಡ್ತಿರೋ ಹಸ್ತಪಡೆಗೆ ಟಿಕೆಟ್​​ ಹಂಚಿಕೆಯೇ ದೊಡ್ಡ ತಲೆನೋವಾಗಿದೆ. ಅಳೆದು ತೂಗಿ ಟೆಕೆಟ್​ ಹಂಚಬೇಕಾದ ಅನೀವಾರ್ಯತೆ ಬಂದೊದಗಿದೆ. ಈ ಮಧ್ಯೆ ರಾಜ್ಯದ ಪ್ರಬಲ ಸಮುದಾಯ ಈ ಬಾರಿ ತಮಗೆ ಹೆಚ್ಚಿನ ಟೆಕಟ್​ ನೀಡುವಂತೆ ಬೇಡಿಕೆ ಇಟ್ಟಿದೆ. ಸಭೆ ನಡೆಸಿ ನಮ್ಮ ಸುಮುದಾಯವನ್ನ ನಿರ್ಲಕ್ಷಿಸದಂತೆ ಸಂದೇಶ ರವಾನಿಸಿದೆ.

ಕಾಂಗ್ರೆಸ್​​ ಟಿಕೆಟ್​​ಗಾಗಿ ಲಿಂಗಾಯತ ಮುಖಂಡರ ಸಭೆ
ಹೌದು.. ಕಾಂಗ್ರೆಸ್ ಲಿಂಗಾಯತ ಮುಖಂಡರು ಹಾಗೂ ಟಿಕೆಟ್​ ಆಕಾಂಕ್ಷಿಗಳು ನಿನ್ನೆ ಬೆಂಗಳೂರಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ, ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಹೈ-ವೋಲ್ಟೋಜೆ ಸಭೆ ನಡೆದಿದೆ. ಎರಡೂವರೆ ಗಂಟೆಗೂ ಹೆಚ್ಚು ಹೊತ್ತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಕನಿಷ್ಠ 50ಕ್ಕೂ ಹೆಚ್ಚು ಟಿಕೆಟ್​ಗಳನ್ನ ನಮ್ಮ ಸುಮುದಾಯಕ್ಕೆ ನೀಡಬೇಕು
ರಾಜ್ಯದಲ್ಲಿ ಲಿಂಗಾಯತ ಸಮುದಾಯ ಅತ್ಯಂತ ಪ್ರಬಲ ಸಮುದಾಯವಾಗಿದೆ. ಹಲವು ಕ್ಷೇತ್ರಗಳಲ್ಲಿ ಲಿಂಗಾಯತ ಸುಮದಾಯದ ಮತಗಳೇ ನಿರ್ಣಾಯಕವಾಗಿವೆ. ಹೀಗಾಗಿ ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಟಿಕೆಟ್ ನೀಡಬೇಕು. ಕನಿಷ್ಠವೆಂದರೂ 50ಕ್ಕೂ ಹೆಚ್ಚು ಟಿಕೆಟ್​ಗಳನ್ನ ನೀಡಬೇಕು. ಅದರಲ್ಲೂ ಬೆಂಗಳೂರಿನ ಚಿಕ್ಕಪೇಟೆ ಹಾಗೂ ರಾಜಾಜಿನಗರ ಕ್ಷೇತ್ರದಲ್ಲಿ ನಮ್ಮ ಸುಮುದಾಯದವರಿಗೆ ಟಿಕೆಟ್​​ಗೆ ನೀಡಬೇಕೆಂದು ಲಿಂಗಾಯತ ಮುಖಂಡು ತೀರ್ಮಾನ ಕೈಗೊಂಡಿದ್ದಾರೆ. ಹೈಕಮಾಂಡ್ ಮುಂದೆಯೂ ಈ ಬೇಡಿಕೆ ಇಟ್ಟು ಟಿಕೆಟ್​​ಗಾಗಿ ಒತ್ತಾಯಿಸಲು ನಿರ್ಧಿರಿಸಿದ್ದಾರೆ.

‘ಪ್ರಬಲ ಲಿಂಗಾಯತ ಸಮುದಾಯವನ್ನ ನಿರ್ಲಕ್ಷಿಸಬೇಡಿ’
ಇದಿಷ್ಟೇ ಅಲ್ಲ, 2 ಗಂಟೆಗೂ ಹೆಚ್ಚಿನ ಕಾಲ ಸಭೆ ನಡೆಸಿದ ಲಿಂಗಾಯತ ಮುಖಂಡರು ಟಿಕೆಟ್​​ ವಿಚಾರವಾಗಿ ಹೈಕಮಾಂಡ್​​ಗೆ ಕೆಲ ಸಂದೇಶಗಳನ್ನೂ ರವಾನಿಸಿದ್ದಾರೆ. ಲಿಂಗಾಯತ ಸುಮುದಾಯವನ್ನ ಕಡೆಗಣಿಸದಂತೆ ಮೆಸ್ಸೇಜ್​ ಪಾಸ್​ ಮಾಡಿದ್ದಾರೆ.

ಲಿಂಗಾಯತರು 1 ಲಕ್ಷ ಜನಸಂಖ್ಯೆ ಇರುವ ಕಡೆ ಬೇರೆಯವರಿಗ್ಯಾಕೆ ಟಿಕೆಟ್​?
ಟಿಕೆಟ್​​ಗಾಗಿ ಲಿಂಗಾಯತ ಸಮುದಾಯದ 210 ಆಕಾಂಕ್ಷಿಗಳು ಅರ್ಜಿ ಸಲ್ಲಿದ್ದಾರೆ. 74 ಮಂದಿಯ ಹೆಸರು ಈಗಾಗಲೇ ಶಾರ್ಟ್ ಲಿಸ್ಟ್ ಆಗಿದೆ. ಇದರಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಮಂದಿಗೆ ಟಿಕೆಟ್ ಕೊಡಬೇಕು. ಅಲ್ಲದೆ ಲಿಂಗಾಯತರು 1 ಲಕ್ಷ ಜನಸಂಖ್ಯೆ ಇರುವ ಕಡೆ 10ರಿಂದ 15 ಸಾವಿರ ಜನ ಸಂಖ್ಯೆ ಇರುವ ಸಮುದಾಯಕ್ಕೆ ಟಿಕೆಟ್ ನೀಡಿದರೆ ಹೇಗೆ? ಟಿಕೆಟ್ ಹಂಚಿಕೆ ವೇಳೆ ಗೆಲುವಿನ ಅಂಶವೇ ಮುಖ್ಯವಾಗಿರಬೇಕು. ಸಾಮಾಜಿಕ ನ್ಯಾಯವನ್ನು ನಿಗಮ ಮಂಡಳಿ ಹಾಗೂ ಸಚಿವ ಸ್ಥಾನ ಕೊಡುವಾಗ ಪಾಲಿಸಬೇಕು. ಬಳ್ಳಾರಿಯ ಯಾವ ಕ್ಷೇತ್ರಕ್ಕೂ ಲಿಂಗಾಯತರಿಗೆ ಅವಕಾಶ ಕೊಡುತ್ತಿಲ್ಲ. ಗೋಕಾಕ್‌ನಲ್ಲಿ ಸಾಮಾಜಿಕ ನ್ಯಾಯ ಎಂದು ಸಣ್ಣ ಸಮುದಾಯಕ್ಕೆ ಟಿಕೆಟ್ ನೀಡಲಾಗ್ತಿದೆ. ಇದೆಲ್ಲವನ್ನೂ ಸರಿಪಡಿಸಿ ನಮ್ಮ ಸಮುದಾಯದವರಿಗೆ ಹೆಚ್ಚಿನ ಟಿಕೆಟ್​ ಕೊಡುವಂತೆ ಕಾಂಗ್ರೆಸ್​​ ಹೈಕಮಾಂಡ್​ಗೆ ಲಿಂಗಾಯತ ಮುಖಂಡು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಚುನಾವಣೆ ಗೆಲ್ಲಲು ಈಗಾಗಲೇ ಸಮರಾಭ್ಯಾಸ ಶುರುಮಾಡಿರುವ ಕಾಂಗ್ರೆಸ್​​ಗೆ ಟಿಕೆಟ್​​ ಹಂಚಿಕೆ ದೊಡ್ಡ ಸವಾಲಾಗಿಬಿಟ್ಟಿದೆ. ಈ ಮಧ್ಯೆ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಹೆಚ್ಚಿನ ಟಿಕೆಟ್​ಗಾಗಿ ಬೇಡಿಕೆ ಬೇರೆ ಇಟ್ಟಿದೆ. ಕನಿಷ್ಠ 50 ಟಿಕೆಟ್​​ ನೀಡುವಂತೆ ಆಗ್ರಹಿಸಿದೆ. ಇದೆಲ್ಲವನ್ನೂ ಹೈಕಮಾಂಡ್​ ಹೇಗೆ ನಿಭಾಯಿಸುತ್ತೆ ಅನ್ನೋದೇ ಸದ್ಯದ ಪ್ರಶ್ನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೇಮಿಗಳ ದಿನದಂದು ಗೆಳತಿಗೆ ಉಡುಗೊರೆ ನೀಡಲು ಮೇಕೆ ಕದ್ದ ಗೆಳೆಯ ಅರೆಸ್ಟ್‌.!

Tue Feb 14 , 2023
ಚೆನ್ನೈ: ಪ್ರೇಮಿಗಳ ದಿನದಂದು ತನ್ನ ಗೆಳತಿಗೆ ಉಡುಗೊರೆ ನೀಡಲು ಮೇಕೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿ ಮತ್ತು ಅವನ ಸಹಾಯಕನನ್ನು ಬಂಧಿಸಲಾಗಿದೆ. ಬಂಧಿತರನ್ನು ಕಾಲೇಜು ವಿದ್ಯಾರ್ಥಿ ಅರವಿಂದ್ ಕುಮಾರ್ ಮತ್ತು ಆತನ ಸ್ನೇಹಿತ ಮೋಹನ್ ಎಂದು ಗುರುತಿಸಲಾಗಿದೆ. ವಿಲ್ಲುಪುರಂ ಜಿಲ್ಲೆಯ ಮಲಯರಸಂಕುಪ್ಪಂನಲ್ಲಿ ಈ ಘಟನೆ ನಡೆದಿದೆ. ಅವರು ಹತ್ತಿರದ ಹಳ್ಳಿಯ ರೈತನ ಮನೆಯಿಂದ ಮೇಕೆಯನ್ನು ಕದ್ದಿದ್ದಾರೆ. ಕಳ್ಳತನ ಮಾಡಿ ಹಿಂದಿರುಗಿದ ಕೂಡಲೇ ಅವರನ್ನು ಬಂಧಿಸಲಾಯಿತು. ಅವರು ಮೇಕೆಯೊಂದಿಗೆ ಬೈಕಿನಲ್ಲಿ ತಪ್ಪಿಸಿಕೊಳ್ಳಲು […]

Advertisement

Wordpress Social Share Plugin powered by Ultimatelysocial