ಬೆಂಗಳೂರಿನಲ್ಲಿ ‘The Conversion’ ಸಿನಿಮಾದ ಪ್ರೀಮಿಯರ್ ಶೋ..ಮೇ 6ಕ್ಕೆ ಬೆಳ್ಳಿತೆರೆಗೆ ಮತಾಂತರ ವಿಷಯಾಧಾರಿತ ಚಿತ್ರ ಎಂಟ್ರಿ!

ಮತಾಂತರ ವಿಷಯಾಧಾರಿತ ಸಿನಿಮಾ The Conversion ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಮೇ 6ರಂದು ಸಿನಿಮಾ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಂಡಿತ್ತು.ಇತ್ತೀಚೆಗಷ್ಟೇ ಅಹಮದಬಾದ್ ನಲ್ಲಿ ಪ್ರೀಮಿಯರ್ ಶೋ ನಡೆಸಿದ್ದ ಚಿತ್ರತಂಡ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಗರುಡ ಮಾಲ್ ನಲ್ಲಿಯೂ ಪ್ರೀಮಿಯರ್ ಶೋ ಆಯೋಜಿಸಿತ್ತು‌. ಈ ವಿಶೇಷ ಶೋಗೆ ಹಿಂದು ಸಂಘಟನೆಯ ಮುಖ್ಯಸ್ಥರು, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಭಾಗವಹಿಸಿ ಸಿನಿಮಾ ವೀಕ್ಷಣೆ ಮಾಡಿದರು.ವಿನೋದ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ the conversion ಸಿನಿಮಾದಲ್ಲಿ ಪ್ರತೀಕ್ ಶುಕ್ಲಾ ಮತ್ತು ರವಿ ಭಾಟೀಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಾಮಿಕ ಚೌಹಾಣ್, ರಾಜ್ ಪಾಟೇಲ್, ರಾಜ್ ನಸ್ಟ್ರೋಮ್ ಹಾಗೂ ವಿಫುಲ್ ಪಟೇಲ್ ಚಿತ್ರಕ್ಕೆ ಹಣ ಹಾಕಿದ್ದು, ಬರೋ ಮೇ 6 ರಿಂದ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀ5 ಒಟಿಟಿಯಲ್ಲಿ ಏಕ್ ಲವ್ ಯಾ ಧಮಾಕಾ...ಜಸ್ಟ್ 7 ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್!

Fri Apr 15 , 2022
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಮ್ಯೂಸಿಕಲ್ ಹಿಟ್ ಮೂವೀ ಏಕ್ ಲವ್ ಯಾಗೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಏಪ್ರಿಲ್ 8ರಂದು ಜೀ5ಗೆ ಲಗ್ಗೆ ಇಟ್ಟ ಈ ಸಿನಿಮಾ ಜಸ್ಟ್ ಏಳು ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.ರಕ್ಷಿತಾ ಪ್ರೇಮ್ ಸಹೋದರ, ಹೊಸಪ್ರತಿಭೆ ರಾಣಾ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಏಕ್ ಲವ್ ಯಾ ಸಿನಿಮಾ‌‌ […]

Advertisement

Wordpress Social Share Plugin powered by Ultimatelysocial