ಮೂತ್ರ ವಿಸರ್ಜನೆಗಾಗಿ 3 ವರ್ಷದ ಮಗಳನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದ ತಂದೆ, ಆದ್ರೆ ಅಲ್ಲಿ ಆದದ್ದೇ ಬೇರೆ?

ತಂದೆ ಹಾಗೂ ಆತನ 3 ವರ್ಷದ ಮಗಳು ಶಾಪಿಂಗ್‌ಗೆ ಹೋದಾಗ, ಮಗಳು ವಾಶ್‌ರೂಮ್‌ಗೆ ಹೋಗಬೇಕು ಎಂದಿದ್ದಾಳೆ. ಆ ಶಾಪಿಂಗ್‌ ಮಾಲ್‌ನಲ್ಲಿ ಫ್ಯಾಮಿಲಿ ವಾಶ್ ರೂಂ ಇಲ್ಲದ್ದರಿಂದ ಆತ ಪುರುಷರ ಸಾರ್ವಜನಿಕ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ.

ಇದಾದ ನಂತ್ರ ಅಲ್ಲಿ ನಡೆದಿದ್ದೇ ಬೇರೆ.

ಮಗಳು ತುಂಬಾ ಚಿಕ್ಕವಳಾದ್ದರಿಂದ ಆಕೆಯನ್ನು ಒಬ್ಬೊಂಟಿಯಾಗಿ ಮಹಿಳೆಯರ ಶೌಚಾಲಯಕ್ಕೆ ತಂದೆಗೆ ಸಾಧ್ಯವಾಗಿಲ್ಲ. ಹೀಗಾಗಿ, ಆತ ಪುರುಷರ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ನಂತ್ರ, ಮಗಳನ್ನು ಹೊರಕ್ಕೆ ಕರೆದುಕೊಂಡು ಬರುವಾಗ ಅದನ್ನು ಕಂಡ ಅಪರಿಚಿತ ಮಹಿಳೆಯೊಬ್ಬಳು ಕೂಗಾಗಿದ್ದಾಳೆ. ಇದನ್ನು ಕಂಡ ತಂದೆ ಗಾಬರಿಗೊಂಡಿದ್ದಾನೆ.

ಈ ಬಗ್ಗೆ ಮಾತನಾಡಿರುವ ತಂದೆ, ʻನಾನು ನನ್ನ ಮಗಳ ಜೊತೆ ಬಾತ್ರೂಮ್ನಿಂದ ಹೊರಬರುವುದನ್ನು ನೋಡಿದ ಒಬ್ಬ ಮಹಿಳೆ ಕಿರುಚುತ್ತಾಳೆ. ನೀವು ಹುಡುಗರ ಕೋಣೆಗೆ ಹುಡುಗಿಯನ್ನು ಕರೆದುಕೊಂಡು ಹೋಗಲು ಎಷ್ಟು ಧೈರ್ಯ ಎನ್ನುತ್ತಾ ಕಿರುಚುತ್ತಾಳೆ. ಆಗ ನಾನು ಆಕೆಗೆ ಇದು ಹುಚ್ಚು ನೋಟ ಎಂದು ಭಾವಿಸಿ ಮುಂದೆ ಸಾಗಿದೆ. ಆದ್ರೂ, ಆಕೆ ಈ ಬಗ್ಗೆ ಹೇಳುತ್ತಾ ಕಿರುಚುತ್ತಲೇ ಇದ್ದಳುʼ ಎಂದು ಹೇಳಿಕೊಂಡಿದ್ದಾರೆ.

ʻನಾನು ನನ್ನ ಪರಿಸ್ಥತಿ ಬಗ್ಗೆ ಆ ಮಹಿಳೆಗೆ ವಿವರಿಸಿದರೂ, ಆಕೆ ಅರ್ಥ ಮಾಡಿಕೊಳ್ಳಲೇ ಇಲ್ಲ. ನನ್ನ ಮಗಳು ಮೂತ್ರ ವಿಸರ್ಜಿಸಬೇಕಾದರೆ ನಾನು ಏನು ಮಾಡಬೇಕಿತ್ತು?ʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಫ್ಯಾಮಿಲಿ ವಾಶ್ ರೂಂ ಇಲ್ಲದ ಕಾರಣ ಮಗಳನ್ನು ಪುರುಷರ ಟಾಯ್ಲೆಟ್ ಗೆ ಕರೆದುಕೊಂಡು ಹೋಗುವ ಅಪ್ಪನ ನಿರ್ಧಾರ ಸರಿಯಾಗಿದೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How come Older Men and Younger Females Are Dating

Sat Mar 11 , 2023
Many people are frequently https://sugardaddyaustralia.org/sugar-daddy-usa/sugar-dating-las-vegas/ mixed up as to why an older man and younger girl are seeing. While there useful site are a lot of varied reasons click here. behind this kind of, one of the most prevalent is that they want to find someone who brings them a […]

Advertisement

Wordpress Social Share Plugin powered by Ultimatelysocial