ತಾಯಿ ಶವವನ್ನು 2 ವರ್ಷಗಳಿಂದ ಫ್ರೀಜರ್​ನಲ್ಲಿಟ್ಟಿದ್ದ ಮಹಿಳೆ.

ವಾಷಿಂಗ್ಟನ್,ಫೆ.4-ಅಮೆರಿಕದ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯ ದೇಹವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. 96 ವರ್ಷದ ತನ್ನ ತಾಯಿಯ ಸಾವನ್ನು ಕಳೆದ ಎರಡು ವರ್ಷಗಳಿಂದ ಮರೆಮಾಚಿಕೊಂಡು ಬಂದಿದ್ದ ಇವಾ ಬ್ರಾಚರ್ ಎಂಬ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಚಿಕಾಗೋದಲ್ಲಿನ ಎರಡು ಅಂತಸ್ತಿನ ಅಪಾಟ್ರ್ಮೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರಿಸಲಾದ ಡೀಪ್ ಫ್ರೀಜರ್‍ನಲ್ಲಿ ಮೃತಪಟ್ಟ ತಾಯಿ ರೆಜಿನಾ ಮಿಚಾಲ್ಸ್ಕಿಯ ಅವರ ಶವವನ್ನು ಆಕೆ ಕಾಪಿಟ್ಟುಕೊಂಡು ಬಂದಿದ್ದರು.

ತಾಯಿಯ ಶವವಿಡಲು ಆಕೆ ತಂದಿದ್ದ ಫ್ರೀಜರ್ ಅನು ಆಕೆ 2021ರಲ್ಲಿ ಖರೀದಿಸಿರುವುದು ಪತ್ತೆಯಾಗಿರುವ ಹಿನ್ನಲೆಯಲ್ಲಿ ಆಕೆ ಎರಡು ವರ್ಷಗಳಿಂದ ತನ್ನ ತಾಯಿಯ ಶವವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರಬಹುದು ಎಂದು ಶಂಕಿಸಲಾಗಿದೆ.

ಮೃತಪಟ್ಟ ತಾಯಿಯ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ ಆಕೆ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಯಾರ ಬಗ್ಗೆಯೂ ಕನಿಕರವಿಲ್ಲದ ನನ್ನ ತಾಯಿ ಆಕೆಯ ತಾಯಿಯ ಶವವನ್ನು ಎರಡು ವರ್ಷಗಳಿಂದ ಏಕೆ ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬ್ರಾಚರ್ ಪುತ್ರಿ ಆಭಿಪ್ರಾಯಪಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹರಿಯಾಣದ ಜನಪ್ರಿಯ ಡ್ಯಾನ್ಸರ್‌,

Sat Feb 4 , 2023
ಚಂಡೀಗಢ:ಹರಿಯಾಣದ ಜನಪ್ರಿಯ ಡ್ಯಾನ್ಸರ್‌, ಬಿಗ್‌ ಬಾಸ್‌ ಖ್ಯಾತಿಯ ಸ್ವಪ್ನ ಚೌಧರಿ ಹಾಗೂ ಕುಟುಂಬಸ್ಥರ ಮೇಲೆ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇಲೆ ಪಲ್ವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ವಪ್ನ ಚೌಧರಿಯ ಸಹೋದರನ ಹೆಂಡತಿ ಅಂದರೆ ನಾದಿನಿಗೆ ಕಿರುಕುಳ ಹಾಗೂ ಹಿಂಸೆ ಕೊಟ್ಟ ಆರೋಪದ ಮೇಲೆ ನಾದಿನಿ ಸ್ವಪ್ನ ಚೌಧರಿ ಸೇರಿ ಅವರ ಕುಟುಂಬದ ಸದಸ್ಯರ ಮೇಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಹಿನ್ನೆಲೆ: 2018ರಲ್ಲಿ ಸ್ವಪ್ನ ಅವರ ಸಹೋದರ ಕರಣ್‌ […]

Advertisement

Wordpress Social Share Plugin powered by Ultimatelysocial