ಪುರುಷರಿಗಿಂತ ಮಹಿಳೆರಿಗೆ ಸಾಲ ನೀಡಲು ರಿಸ್ಕ್‌ ಕಡಿಮೆಯಂತೆ!

ಕ್ರೆಡಿಟ್‌ ಡೇಟಾ ಸಂಸ್ಥೆಯಾದ ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಸಾಲ ಮರುಪಾತಿ ಕುರಿತಂತೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ಪ್ರಕಾರ ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳಿಂದ ಸಾಲವನ್ನು ಮರುಪಾವತಿಸುವಾಗ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಸ್ತುಬದ್ಧತೆ ಅಥವಾ ಪ್ರಾಮಾಣಿಕತೆಯನ್ನು ತೋರಿಸುತ್ತಿರುವುದಾಗಿ ಹೇಳಿದೆ.

ಈ ವರದಿಯು ಮಹಿಳಾ ದಿನಾಚರಣೆಯಾದ ಮಾ.8ರ ಮುನ್ನವೇ ಬಿಡುಗಡೆಯಾಗಿದೆ.

ಈ ವರದಿಯಲ್ಲಿ ಹೊರಬಂದ ಅಂಶಗಳ ಪ್ರಕಾರ ಕಳೆದ ಐದು ವರ್ಷದಲ್ಲಿ ಮಹಿಳೆಯರಿಗೆ ನೀಡಿರುವ ಸಾಲದ ಸಂಖ್ಯೆ ಹೆಚ್ಚಾಗಲು ಅವರು ಮರುಪಾವತಿಯಲ್ಲಿ ತೋರಿಸಿದ ಪ್ರಾಮಾಣಿಕತೆಯೇ ಕಾರಣ ಎಂದು ಹೇಳಿದೆ. ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಪ್ರಕಾರ, ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಲಗಾರರ ಸಂಖ್ಯೆಯು ವಾರ್ಷಿಕ ಶೇ.15ರಂತೆ ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆ. ಪುರುಷ ಸಾಲಗಾರ ಸಂಖ್ಯೆ ಶೇ.11 ರಷ್ಟು ಇದೆ.

ಡೇಟಾದಲ್ಲಿ ಬೇರೆ ಏನಿದೆ ನೋಡಿ

2017ರಲ್ಲಿ ಶೇ.25ರಷ್ಟು ಸಾಲಗಾರರು ಮಹಿಳೆಯರಾಗಿದ್ದು, 2022ಕ್ಕೆ ಅದು ಶೇ.28ಕ್ಕೆ ಏರಿಕೆಯಾಗಿದೆ. ಈ ಅಂಕಿ-ಅಂಶವನ್ನು ನೋಡಿದಾಗ ದೇಶದ ಆರ್ಥಿಕ ಸೇರ್ಪಡೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು ಹಾಗೂ ಮಹಿಳೆಯರಿಗೆ ಸಾಲ ನೀಡುವಲ್ಲಿ ವಿಪುಲ ಅವಕಾಶವಿರುವುದನ್ನು ಸೂಚಿಸುತ್ತದೆ. ಪ್ರಸ್ತುತ ಭಾರತದ ಅಂದಾಜು 1.4 ಬಿಲಿಯನ್‌ ಜನಸಂಖ್ಯೆಯಲ್ಲಿ ಸುಮಾರು 454 ಮಿಲಿಯನ್‌ ಮಂದಿ ವಯಸ್ಕ ಮಹಿಳೆಯರಾಗಿದ್ದಾರೆ.

ಆ ಪೈಕಿ ಸುಮಾರು 6.3 ಕೋಟಿ ಮಹಿಳೆಯರು ಸಾಲ ಪಡೆದುಕೊಂಡಿರುವುದಾಗಿ 2022ರವರೆಗಿನ ಅಂಕಿ-ಅಂಶಗಳು ಹೇಳುತ್ತವೆ. 2017ರಲ್ಲಿ ಸಾಲ ಪಡೆಯುವ ಮಹಿಳೆಯರ ಸಂಖ್ಯೆ ಶೇ.7ರಷ್ಟು ಇದ್ದು, ಅದು 2022ರಲ್ಲಿ ಶೇ.14ಕ್ಕೆ ಹೆಚ್ಚಳವಾಗಿದೆ. ಈ ಅಂಕಿ-ಅಂಶವನ್ನು ನೋಡಿದರೆ, ದೇಶದಲ್ಲಿ ಮಹಿಳೆಯರ ಆರ್ಥಿಕ ಸೇರ್ಪಡೆ ಸಾಧಿಸುವಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ. ಆದರೆ, ಇಲ್ಲಿವರೆಗೆ ಮಾಡಿರುವ ಪ್ರಗತಿಯು ಉತ್ತೇಜನಕಾರಿಯಾಗಿದೆ.

ಮಹಿಳಾ ಸಾಲಗಾರರ ಸಂಖ್ಯೆಯಲ್ಲಿನ ಹೆಚ್ಚಳವು ಸರ್ಕಾರದ ಆರ್ಥಿಕ ಸೇರ್ಪಡೆಗೆ ಧನಾತ್ಮಕ ಸಂಕೇತವಾಗಿದೆ ಎಂದು ಟ್ರಾನ್ಸ್‌ಯೂನಿಯನ್‌ ಸಿಬಿಲ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲಾ ಚಂದೋರ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಮಹಿಳೆಯರಿಗೆ ಸಾಲ ನೀಡುವುದರಿಂದ ವಿವಿಧ ಸಾಮಾಜಿಕ-ಆರ್ಥಿಕ ವರ್ಗದವರಿಗೆ, ನಾನಾ ವಯಸ್ಸಿನವರಿಗೆ ಹಾಗೂ ಭೌಗೋಳಿಕವಾಗಿ ತಮ್ಮ ಆಕಾಂಕ್ಷೆಗಳನ್ನು ಪೂರೈಸುವುದಕ್ಕೆ ಸಹಾಯವಾಗುತ್ತದೆ.

ಇದರಿಂದ ಮಹಿಳೆಯರಿಗೆ ಮಾತ್ರವಲ್ಲದೆ ಸಾಂಪ್ರದಾಯಿಕವಾಗಿ ಹಿಂದುಳಿದ ವಲಯದವರಿಗೂ ಅನುಕೂಲವಾಗಲಿದೆ ಎನ್ನುವುದು ಅವರ ಸಲಹೆಯಾಗಿದೆ.ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ವರದಿಯು ಭಾರತದ ಕ್ರೆಡಿಟ್‌ ಮಾರ್ಕೆಟ್‌ನಲ್ಲಿ ಮಹಿಳೆಯರ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ಸಕಾರಾತ್ಮಕ ಪ್ರವೃತ್ತಿಯನ್ನು ತೋರಿಸುತ್ತದೆ.

ಸುಧಾರಣೆಗಳಿಗೆ ಇನ್ನೂ ಅವಕಾಶಗಳಿರುವ ಬಗ್ಗೆ ಉಲ್ಲೇಖಿಸಿರುವ ವರದಿಯು ಮಹಿಳೆಯರು ತಾವು ಪಡೆಯುವ ಸಾಲವನ್ನು ಮರುಪಾವತಿಸುವಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದಾರೆ ಹಾಗೂ ಇದು ಮಹಿಳಾ ಸ್ನೇಹಿ ಸಾಲದ ಅವಕಾಶಗಳನ್ನು ಒದಗಿಸುವ ಮೂಲಕ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಹಾಗೂ ಆರ್ಥಿಕ ಬೆಳವಣಿಯನ್ನು ಉತ್ತೇಜಿಸಲು ಸಹಾಯವಾಗುತ್ತದೆ ಎಂದು ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ʻH3N2ʼ ಪ್ರಕರಣದಲ್ಲಿ ಭಾರೀ ಹೆಚ್ಚಳ!

Wed Mar 8 , 2023
ನವದೆಹಲಿ: ದೇಶದಾದ್ಯಂತ ಇನ್‌ಫ್ಲುಯೆನ್ಸ A ಸಬ್‌ಟೈಪ್ H3N2 ಪ್ರಕರಣಗಳು ಹಠಾತ್ ಕಾಣಿಸಿಕೊಂಡಿದ್ದು, ಇದು ಆತಂಕವನ್ನು ಹುಟ್ಟುಹಾಕಿದೆ. ದೇಶಾದ್ಯಂತ ಆಸ್ಪತ್ರೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಇನ್ಫ್ಲುಯೆನ್ಸ Aನ H3N2 ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇದು 3-5 ದಿನಗಳವರೆಗೆ ಜ್ವರ ಮತ್ತು ನಿರಂತರ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ವೈದ್ಯಕೀಯ ತಜ್ಞರು H3N2 ನಿಭಾಯಿಸಲು ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಿದ್ದಾರೆ. ಎಐಐಎಂಎಸ್‌ನ ಮಾಜಿ ಉನ್ನತ ವೈದ್ಯರು, ಅಧ್ಯಕ್ಷರು ಮೇದಾಂತ ಡಾ ರಂದೀಪ್ […]

Advertisement

Wordpress Social Share Plugin powered by Ultimatelysocial