Amitabh Bachchan ಜೊತೆ ಕುಳಿತ ಈ ಮಗು ಈಗ ಸೂಪರ್ ಸ್ಟಾರ್.

ಬಾಲಿವುಡ್‌ ಚಕ್ರವರ್ತಿ ಅಮಿತಾಬ್ ಬಚ್ಚನ್ ಅವರ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಒಬ್ಬರೇ ಕಾಣಿಸುತ್ತಿಲ್ಲ. ಇಂದು ಬಾಲಿವುಡ್‌ನ ದೊಡ್ಡ ಸ್ಟಾರ್ ಆಗಿರುವ ವ್ಯಕ್ತಿಯೊಬ್ಬರು ಸಹ ಕುಳಿತಿದ್ದಾರೆ.ಅಂದು ಮುದ್ದು ಕಂದಮ್ಮನಾಗಿದ್ದ ಈ ಸೂಪರ್ಸ್ಟಾರ್ ಯಾರೆಂದು ಗುರುತಿಸಬಲ್ಲಿರಾಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಈ ಮಗುವನ್ನು ಗುರುತಿಸುವಲ್ಲಿ ಅನೇಕರು ಸೋತು ಹೋಗಿದ್ದಾರೆ. ನೀವು ಹಿಂದಿ ಚಲನಚಿತ್ರಗಳ ಅಭಿಮಾನಿಯಾಗಿದ್ದರೆ, ಹತ್ತಿರದಲ್ಲಿ ಕುಳಿತಿರುವ ಮಗುವನ್ನು ಗುರುತಿಸಬಹುದು. ಚಿತ್ರದಲ್ಲಿ, ಅಮಿತಾಬ್ ಬಚ್ಚನ್ ಕುರ್ಚಿಯ ಮೇಲೆ ಕುಳಿತುಕೊಂಡು ತಮ್ಮ ಸ್ಕ್ರಿಪ್ಟ್ ಅನ್ನು ಚರ್ಚಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ಹತ್ತಿರದ ಕುರ್ಚಿಯ ಮೇಲೆ ಕುಳಿತಿರುವ ಚಿಕ್ಕ ಮಗುವು ಅವರನ್ನು ಬಹಳ ಪ್ರೀತಿಯಿಂದ ನೋಡುತ್ತಿದೆ.ನೀವು ಇನ್ನೂ ಈ ಮಗುವನ್ನು ಗುರುತಿಸದಿದ್ದರೆ, ನಿಮಗೆ ಸುಳಿವು ನೀಡುತ್ತೇವೆ ನೋಡಿ. ಈ ಮಗು ಕೂಡ ಫೇಮಸ್ ಸ್ಟಾರ್ ಕಿಡ್. ನಟನೆ ಮತ್ತು ನೋಟದ ಜೊತೆಗೆ ಇಡೀ ಜಗತ್ತೇ ಇವರ ನೃತ್ಯಕ್ಕೆ ಫಿದಾ ಆಗಿದೆ. ಈ ಫೋಟೋ 1979 ರಲ್ಲಿ ಅಮಿತಾಬ್ ಬಚ್ಚನ್ ಅವರ ‘ನಟ್ವರ್ಲಾಲ್’ ಚಿತ್ರದ ಚಿತ್ರೀಕರಣದಲ್ಲಿ ಮೆಹಬೂಬ್ ಸ್ಟುಡಿಯೋದಲ್ಲಿದ್ದಾಗ ತೆಗೆದದ್ದಾಗಿದೆ. ಅವರ ಹತ್ತಿರ ಮೇಜಿನ ಮೇಲೆ 3 ಚಿಕ್ಕ ಮಕ್ಕಳು ಕುಳಿತಿದ್ದಾರೆ. ಮೊದಲ ಮಗು ಬೇರೆ ಯಾರೂ ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್. ಅಮಿತಾಬ್ ಬಚ್ಚನ್ ಅವರ ಜನ್ಮದಿನದಂದು ಹೃತಿಕ್ರೋಷನ್. ಅಮಿತಾಬ್ ಬಚ್ಚನ್ ಅವರ ಜನ್ಮದಿನದಂದು ಹೃತಿಕ್ ರೋಷನ್ ಅವರೇ ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಹೃತಿಕ್ ರೋಷನ್ 2000 ರಲ್ಲಿ ತಮ್ಮ ತಂದೆಯ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಲಾದ ‘ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅನೇಕ ಹಿಟ್ ಸಿನಿಮಾಗಳು ಹೃತಿಕ್ ಮಡಿಲಿಗೆ ಸೇರಿವೆ. ಆದರೆ, ಹೃತಿಕ್ ರೋಷನ್ ಕೊನೆಯದಾಗಿ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದ ‘ವಿಕ್ರಮ್ ವೇದ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಚಿತ್ರವು ಅದೇ ಹೆಸರಿನ ದಕ್ಷಿಣದ ಚಲನಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿತ್ತು. ಇನ್ನು ಮುಂಬರುವ ಸಿನಿಮಾದ ಬಗ್ಗೆ ಮಾತನಾಡುವುದಾದರೆ, ಶೀಘ್ರದಲ್ಲೇ ಅವರು ದೀಪಿಕಾ ಪಡುಕೋಣೆ ಅವರೊಂದಿಗೆ ‘ಫೈಟರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿದ್ದ ಪ್ರೇಮಿ ಬಳಿ ಬರಲು ಚಿನ್ನವನ್ನೇ ಮಾರಿದ್ದಳು ಪಾಕ್ ಯುವತಿ...!

Sat Feb 25 , 2023
ಸಾಮಾಜಿಕ ಜಾಲತಾಣದಲ್ಲಿ ತನಗೆ ಪರಿಚಯವಾಗಿದ್ದ ಯುವಕನನ್ನು ಪ್ರೀತಿಸುತ್ತಿದ್ದ ಪಾಕಿಸ್ತಾನದ ಯುವತಿ ಆತನೊಂದಿಗೆ ಮದುವೆಯಾಗಲು ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದಳು. ಬಳಿಕ ತಾನು ಮೆಚ್ಚಿದ ಯುವಕನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸಂಸಾರವನ್ನೂ ನಡೆಸುತ್ತಿದ್ದಳು.ಉತ್ತರಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ ಯುವತಿ ಇಕ್ರಾ ಜೀವನಿ ಬಳಿ ತನ್ನ ಹೆಸರನ್ನು ಸಮೀರ್ ಅನ್ಸಾರಿ ಎಂದು ಹೇಳಿಕೊಂಡಿದ್ದಲ್ಲದೆ ತಾನು ಸಾಫ್ಟ್ ವೇರ್ ಇಂಜಿನಿಯರ್ ಎಂದು ಹೇಳಿದ್ದ ಎನ್ನಲಾಗಿದೆ.ಪಾಕಿಸ್ತಾನದ […]

Advertisement

Wordpress Social Share Plugin powered by Ultimatelysocial