ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!

ಸೀತಾಫಲದಂತೆಯೇ ರಾಮಫಲ ಕೂಡ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ, ಇದು ಒಂದು ರೀತಿಯ ಋತುಮಾನದ ಹಣ್ಣಾಗಿದೆ, ಇದು ಹೆಚ್ಚಾಗಿ ಅಸ್ಸಾಂ, ಮಹಾರಾಷ್ಟ್ರದಲ್ಲಿ ಸಿಗುತ್ತದೆ. ರಾಮಫಲ ಸಕ್ಕರೆ ರೋಗಿಗಳಿಗೆ ತುಂಬಾ ಉಪಯುಕ್ತ ಹಣ್ಣಾಗಿದೆ, ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಹಣ್ಣುಗಳನ್ನು ಎಚ್ಚರಿಕೆಯಿಂದ ತಿನ್ನಲು ಸಲಹೆ ನೀಡಲಾಗುತ್ತದೆ, ಆದರೆ, ರಾಮಫಲ ಸೇವನೆಯಿಂದ ಕೇವಲ ಸಕ್ಕರೆ ನಿಯಂತ್ರಣ ಅಷ್ಟೇ ಅಲ್ಲ, ಇದರಿಂದ ನೀವು ನಿಮ್ಮ ತೂಕವನ್ನು ಕೂಡ ಇಳಿಕೆ ಮಾಡಿಕೊಳ್ಳಬಹುದು.

ರಕ್ತದಲ್ಲಿನ ಸಕ್ಕರೆಯ ಏರಿಳಿತ ನಿಯಂತ್ರಣ
ರಾಮ ಫಲ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಸಾಬೀತಾಗುತ್ತದೆ. ಸಕ್ಕರೆ ಪ್ರಮಾಣ ನಿಯಂತ್ರಿಸುವ ಗುಣಧರ್ಮಗಳು ಈ ಹನ್ನಿನಲ್ಲಿವೆ, ಇದು ದೇಹದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ಕಾಡು ಸಿಹಿ ಎಂದೂ ಕರೆಯುತ್ತಾರೆ.

ತೂಕ ಇಳಿಕೆ
ಒಂದು ವೇಳೆ ನೀವು ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ. ಈ ಹಣ್ಣು ನಿಮಗೆ ತುಂಬಾ ಸಹಕಾರಿಯಾಗಿದೆ. ಅದರ ಸೇವನೆಯಿಂದಾಗಿ, ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ, ಇದರಿಂದಾಗಿ ನಿಮ್ಮ ಬೊಜ್ಜು ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ
ಕೂದಲು ಉದುರುವಿಕೆ, ನೆತ್ತಿಯಲ್ಲಿನ ತುರಿಕೆ, ಈ ರೀತಿಯ ಸಮಸ್ಯೆಗಳಿಗೂ ಕೂಡ ಇದೊಂದು ಉಪಯುಕ್ತ ಹಣ್ಣಾಗಿದೆ, ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರಾಮಫಲ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ರಾಮಫಲ ಚರ್ಮದ ಕಲೆಗಳು, ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಸಿ ಸಮೃದ್ಧವಾಗಿರುವ ರಾಮಫಲ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಬೇಗನೆ ರೋಗಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಾರೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮಲ್ಲಿ ರೋಗ ಮತ್ತು ವೈರಲ್ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರಾಮಫಲ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಸಿರು ಕಾಫಿ ಮತ್ತು ಅದರ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

Wed Mar 1 , 2023
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಅಧಿಕ ಕೊಬ್ಬಿನಿಂದಾಗಿ ಬಾಡಿ ಶೇಪ್ ಬಿಗಡಾಯಿಸಲು ಪ್ರಾರಂಭವಾಗುತ್ತದೆ. ಇದಲ್ಲದೆ ಇದರಿಂದ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೈನಂದಿನ ವ್ಯಾಯಾಮದ ಜೊತೆಗೆ, ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವೂ ಕೂಡ ನಿಮ್ಮ ತೂಕವನ್ನು ಬಯಸುತ್ತಿದ್ದರೆ, ಹಸಿರು ಚಹಾದ ಜೊತೆಗೆ ನೀವು ಹಸಿರು ಕಾಫಿ […]

Advertisement

Wordpress Social Share Plugin powered by Ultimatelysocial