ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್;

 
ಭವಾನಿ ರೇವಣ್ಣ ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಾ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು.ಹಾಸನ: ಭವಾನಿ ರೇವಣ್ಣ   ಅವರು ಹಾಸನ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್​ಗಾಗಿ ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇನೆ ಎಂದಿದ್ದರು.

ಈ ಬಗ್ಗೆ ಮಾತನಾಡಿದ ಹಾಸನದ ಪ್ರಬಲ ಟಿಕೆಟ್ ಆಕಾಂಕ್ಷಿ ಹೆಚ್.ಪಿ.ಸ್ವರೂಪ್  ಕುಮಾರಣ್ಣ ಅವರ ಜೊತೆ ನಾನು ಚರ್ಚೆ ಮಾಡಿಲ್ಲ. ನಾನು ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಸಿ.ಎಂ.ಇಬ್ರಾಹಿಂ, ಹೆಚ್.ಡಿ. ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಅವರು ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ದರಾಗಿದ್ದು, ಕಾರ್ಯಕರ್ತರೆಲ್ಲಾ ಸೇರಿ ಕೆಲಸ ಮಾಡುತ್ತೇವೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರೂಪ್, ಸದ್ಯದ ಪರಿಸ್ಥಿತಿಯಲ್ಲಿ ನಾನು ಕೂಡ ಟಿಕೆಟ್ ಬಗ್ಗೆ ಯಾರ ಬಳಿ ಚರ್ಚೆ ಮಾಡಿಲ್ಲ, ನನ್ನ ಬಳಿ ಯಾರು ಚರ್ಚೆ ಮಾಡಿಲ್ಲ. ಕುಮಾರಣ್ಣ ಅವರು ವೈಯುಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಆ ಅಭ್ಯರ್ಥಿ ಪರ ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ದೇವೇಗೌಡ ಸಾಹೆಬ್ರು, ರೇವಣ್ಣ ಸಾಹೆಬ್ರು, ಕುಮಾರಣ್ಣ ಸಾಹೇಬರು ಭೇಟಿ ಮಾಡಬೇಕು. ಭವಾನಿ ಅಕ್ಕವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುವ ಕೆಲಸ ಮಾಡುತ್ತೇನೆ. ಒಟ್ಟಿನಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಬರಬೇಕು ಎಂದರು.

ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸುವ ಶಕ್ತಿ ನಮ್ಮ ಜೆಡಿಎಸ್ ಪಕ್ಷಕ್ಕೆ ಇದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರು ಕೂಡ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದೆ ಗೆಲ್ಲುತ್ತದೆ. ನಾನು ಕೂಡ ಆಕಾಂಕ್ಷಿ ಹೌದು, ಅಂತಿಮವಾಗಿ ವರಿಷ್ಠರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ದನಾಗಿರುತ್ತೇನೆ. ಕುಮಾರಸ್ವಾಮಿ ಹೇಳಿಕೆಯಿಂದ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ ಎಂಬ ಪ್ರಶ್ನೆ ಇಲ್ಲ. ಜೆಡಿಎಸ್‌ನಿಂದ ಯಾರಿಗೆ ಟಿಕೆಟ್ ಕೊಟ್ಟರು ಗೆದ್ದೇ ಗೆಲ್ಲುತ್ತಾರೆ. ಹಾಗಾಗಿ ಭವಾನಿ ಅಕ್ಕನಿಗೆ ಹಿನ್ನಡೆ ಆಗುವಂತಹ ಪ್ರಶ್ನೆ ಉದ್ಭವವಾಗಲ್ಲ ಎಂದರು.

ಕುಮಾರಣ್ಣನ ಹೇಳಿಕೆ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಪದೇ ಪದೇ ಅದನ್ನೇ ಹೇಳುತ್ತಿದ್ದೇನೆ, ಅಂತಿಮವಾಗಿ ಪಕ್ಷದ ತೀರ್ಮಾನದಂತೆ ನಡೆಯುತ್ತೇವೆ. ಕುಮಾರಣ್ಣ ಹೇಳಿರುವುದು ಅವರ ವೈಯಕ್ತಿಕ ಹೇಳಿಕೆ. ಭವಾನಿರೇವಣ್ಣ ಅವರಿಗೆ ಟಿಕೆಟ್ ಕೊಟ್ಟರೆ ಖಂಡಿತವಾಗಿ ಕೆಲಸ ಮಾಡುತ್ತೇನೆ. ಅವರಿಗೆ ಟಿಕೆಟ್ ಕೊಟ್ಟರೆ ನನ್ನದು ಯಾವುದೇ ಡಿಮ್ಯಾಂಡ್ ಪ್ರಶ್ನೇಯೇ ಇಲ್ಲ. ದೇವೇಗೌಡರು, ರೇವಣ್ಣ ಅವರ ಋಣ ನಮ್ಮ ಕುಟುಂಬದ ಮೇಲೆ ಇದೆ. ಆರು ಬಾರಿ ಟಿಕೆಟ್ ಕೊಟ್ಟಿದ್ದಾರೆ, ನಾಲ್ಕು ಭಾರಿ ಶಾಸಕರಾಗಿ ನಮ್ಮ ತಂದೆ ಆಯ್ಕೆಯಾಗಿದ್ದಾರೆ. ನನ್ನದು ಯಾವುದೇ ಡಿಮ್ಯಾಂಡ್ ಇಲ್ಲ. ಭವಾನಿ ಅಕ್ಕನಿಗೆ ಟಿಕೆಟ್ ಕೊಟ್ಟರು ಕೂಡ ಮನಸ್ಸಿನಿಂದ ಕೆಲಸ ಮಾಡಿ ಗೆಲ್ಲಿಸುವ ಕೆಲಸ‌ ಮಾಡುತ್ತೇವೆ. ಈಗಲೂ ನಾನು ಪ್ರಬಲ ಟಿಕೆಟ್ ಆಕಾಂಕ್ಷಿ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪದ್ಮವಿಭೂಷಣ' ಕನ್ನಡಿಗರಿಗೆ ಸಮರ್ಪಣೆ -ಎಸ್​​.ಎಂ.ಕೃಷ್ಣ

Thu Jan 26 , 2023
ಬೆಂಗಳೂರು: ತಮಗೆ ಸಿಕ್ಕಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು 7 ಕೋಟಿ ಕನ್ನಡಿಗರಿಗೆ ಸಮರ್ಪಣೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಹೇಳಿದ್ದಾರೆ. ಭಾರತ ಸರ್ಕಾರ ನಿನ್ನೆ ಎಸ್.​ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಈ ಕುರಿತು ಮಾತನಾಡಿದ ಅವರು, 6 ದಶಕಗಳ ಕಾಲ ನನಗೆ ಕನ್ನಡ ಜನ ಪೋಷಣೆ ಮಾಡಿದ್ದಾರೆ. 7 ಕೋಟಿ ಕನ್ನಡಿಗರಿಗೆ, ಭಾರತೀಯನಾಗಿ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಕಾಲಘಟ್ಟದಲ್ಲಿ ರಾಜಕಾರಣ ಬದಲಾಗ್ತಿರುತ್ತದೆ. ಅದರದ್ದೇ ಆದ ದಿಕ್ಕು-ದೆಶೆಯನ್ನ […]

Advertisement

Wordpress Social Share Plugin powered by Ultimatelysocial