ತಿಂಗಳಿಗೆ ʼ₹55 ಠೇವಣಿʼ ಮಾಡಿದ್ರೂ, ವೃದ್ಧಾಪ್ಯದಲ್ಲಿ ʼ₹36,000 ಪಿಂಚಣಿʼ ಸಿಗುತ್ತೆ : ಅದ್ಭುತ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.!

Pension Scheme : ತಿಂಗಳಿಗೆ ʼ₹55 ಠೇವಣಿʼ ಮಾಡಿದ್ರೂ, ವೃದ್ಧಾಪ್ಯದಲ್ಲಿ ʼ₹36,000 ಪಿಂಚಣಿʼ ಸಿಗುತ್ತೆ : ಅದ್ಭುತ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.!!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಖಾಸಗಿ ಉದ್ಯೋಗಳಿಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿ ಯೋಜನೆಗಳಿವೆ. ಇನ್ನು ಸರ್ಕಾರಿ ನೌಕರರಿಗೆ ಸರ್ಕಾರದ ಹಲವು ಪಿಂಚಣಿ ಯೋಜನೆಗಳಿವೆ. ಆದ್ರೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ಪಿಂಚಣಿ ಯೋಜನೆಗಳಿಲ್ಲದ ಕಾರಣ ಕೇಂದ್ರಸರ್ಕಾರ ʼಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆʼ (PMSYM) ಯೋಜನೆಯನ್ನ ಪ್ರಾರಂಭಿಸಿದೆ.

ಈ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೂ ನಿವೃತ್ತಿಯ ನಂತ್ರ ವರ್ಷಕ್ಕೆ 36,000 ಪಿಂಚಣಿ ಸಿಗಲಿದೆ. ನೀವಿದಕ್ಕೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನ ಠೇವಣಿ ಇಟ್ಟರೆ ಸಾಕು. ಹಾಗಂತ ಹೆಚ್ಚು ಮೊತ್ತವೇನು ತೆಗೆದಿಡಬೇಕಿಲ್ಲ. ದಿನಕ್ಕೆ 2ಕ್ಕಿಂತ ಕಡಿಮೆ ಅಂದ್ರೆ ತಿಂಗಳಿಗೆ 55 ರೂಪಾಯಿ ಠೇವಣಿಯಿಟ್ಟರೇ ಸಾಕು.

ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆಯು ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಮಧ್ಯಾಹ್ನದ ಊಟದ ಕೆಲಸಗಾರರು, ಇಟ್ಟಿಗೆ ಗೂಡು ಕಾರ್ಮಿಕರು, ರಿಕ್ಷಾ ಚಾಲಕರು, ದಿನಗೂಲಿಗಳು, ಕೃಷಿ ಕಾರ್ಮಿಕರು ಹೀಗೆ ಅನೇಕರನ್ನ ಒಳಗೊಂಡಿರುತ್ತದೆ. ಭಾರತದಲ್ಲಿ 42 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ರೂಪಿಸಿರುವ ಅದ್ಭುಯ ಯೋಜನೆ ಇದಾಗಿದೆ.

ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್‌ ಯೋಜನೆಯಡಿ ಹಣ ಠೇವಣಿ ಇಡುವವರಿಗೆ 60 ವರ್ಷದಿಂದ ತಿಂಗಳಿಗೆ 3,000 ರೂ.ನಂತೆ ವಾರ್ಷಿಕ 36,000 ರೂಪಾಯಿ ಪಿಂಚಣಿ ನಿಗದಿಯಾಗಿದೆ. ಈ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ರೆ, ಅವರ ಸಂಗಾತಿಗೆ ಶೇಕಡಾ 50ರಷ್ಟು ಕುಟುಂಬ ಪಿಂಚಣಿ ಸಿಗುತ್ತದೆ. ಇನ್ನು ಈ ಕುಟುಂಬ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ರೈತ ಸಮುದಾಯಕ್ಕೆ ಸಿಹಿಸುದ್ದಿ : ಜನವರಿ 26 ಕ್ಕೆ ರೈತರ ಮನೆ ಬಾಗಿಲಿಗೆ ಉಚಿತ ಪಹಣಿ

Sun Jan 2 , 2022
ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಮನೆ ಬಾಗಿಲಿಗೆ ಉಚಿತ ಪಹಣಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 26 ರಂದು ಕಂದಾಯ ಇಲಾಖೆಯಿಂದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು. ಈ ಪೈಕಿ ಪಹಣಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವೂ ಒಂದಾಗಿದೆ. ಒಂದೇ ದಿನದಲ್ಲಿ ಪಹಣಿನೀಡುವ ಕೆಲಸ […]

Advertisement

Wordpress Social Share Plugin powered by Ultimatelysocial