ಹೊರಗಿನಿಂದ ಟಾಯ್ಲೆಟ್, ಒಳಗೆ ನೋಡಿದ್ರೆ ಬೆಡ್‌ ರೂಂ! ಕೋಟೆನಾಡಲ್ಲಿ ಹೈಟೆಕ್ ವೇಶ್ಯಾವಾಟಿಕೆ!

 

ಚಿತ್ರದುರ್ಗ: ಅದು ಕರುನಾಡಿನ ಕೋಟೆ ನಾಡು, ಮದಕರಿ ನಾಯಕರಂತ (Madakari Nayaka) ಶೂರರು ಆಳಿದ ನೆಲ, ಒನಕೆ ಒಬವ್ವನಂತ (Onake Obavva) ವೀರ ಮಹಿಳೆಯರಿಗೆ, ಆದರ್ಶ ನಾರಿಯರಿಗೆ ಜನ್ಮಕೊಟ್ಟ ತವರೂರು. ಆದರೆ ಅಲ್ಲೀಗ ಬಹುದೊಡ್ಡ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ (High-tech prostitution) ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ (Holalkere) ಪಟ್ಟಣದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಬೆಳಕಿಗೆ ಬಂದಿದೆ. ಮೈಸೂರಿನ ಒಡನಾಡಿ (Odanadi) ಸೇವಾ ಸಂಸ್ಥೆ ಸಹಕಾರದೊಂದಿಗೆ ದಾಳಿ ನಡೆಸಿದ ಪೊಲೀಸರು (Police) ಈ ಜಾಲ ನೋಡಿ ಹೌಹಾರಿದ್ದಾರೆ. ದಾಳಿ ವೇಳೆ ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ
ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಪ್ರಜ್ವಲ್ ಎಂಬ ಹೆಸರಿನ ಲಾಡ್ಜ್‌ನಲ್ಲಿ ಈ ವೇಶ್ಯಾವಾಟಿಕೆ ಜಾಲ ನಡೆಯುತ್ತಿತ್ತು. ಮೈಸೂರು ಒಡನಾಡಿ ಸಂಸ್ಥೆ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಮಧ್ಯಾಹ್ನ ಪ್ರಜ್ವಲ್ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಲಾಡ್ಜ್ ಮ್ಯಾನೇಜರ್ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೊರಗಡೆ ಟಾಯ್ಲೆಟ್, ಒಳಗಡೆ ಬೆಡ್‌ ರೂಂ!

ಲಾಡ್ಜ್ ಒಳಗೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಟಾಯ್ಲೆಟ್ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಲಾಡ್ಜ್ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು.

ಪೊಲೀಸರು ಬರುತ್ತಿದ್ದಂತೆ ಒಳಗಡೆ ಬೆಲ್!

ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್ ಕಾಲ ಕೆಳಗೆ ಇದ್ದ ಸ್ವಿಚ್ ಒತ್ತಿದ ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್ ಆಗುತ್ತೆ. ಕೂಡಲೇ ಯುವತಿಯರು ಟಾಯ್ಲೆಟ್ ರೂಮ್ ಒಳಗೆ ಹೋಗಿ ಟೈಲ್ಸ್ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ.

ಗ್ರಾಮೀಣ ಭಾಗದಲ್ಲೂ ದಂಧೆ ನಡೆಯುತ್ತಿರುವ ಆತಂಕ

ಕರ್ನಾಟಕದ ಮೂಲೆಮೂಲೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ. ದೆಹಲಿ, ಮುಂಬೈ ಮಾದರಿಯಲ್ಲಿ ಗುಹೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರೋದು ಅಪಾಯಕಾರಿ ಎಂದು ಕಳವಳ ಅಂತ ಒಡನಾಡಿ ಸಂಸ್ಥೆ ನಿರ್ದೇಶಕಿ ಸ್ಟಾನ್ಲಿ ಒತ್ತಾಯಿಸಿದರು.

ರೈತರೇ ಈ ದಂಧೆಯ ಟಾರ್ಗೆಟ್

ಇಲ್ಲಿಯ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಇದರಿಂದ ಸಮಾಜ ಆರ್ಥಿಕ, ಸಾಂಸ್ಕೃತಿ ಹಾಗೂ ಸಾಮಾಜಿಕವಾಗಿ ದುಸ್ಥಿತಿ ತಲುಪಲಿದೆ. ಇದನ್ನು ಸಾಧ್ಯವಾದಷ್ಟು ತಡೆ ಹಿಡಿಯಬೇಕು ಎಂಬ ಉದ್ದೇಶದಿಂದ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ಮಾಜಿದ್ದಾರೆ ಅಂತ ಹೇಳಿದ್ರು.

ಇಂತಹ ಲಾಡ್ಜ್‌ಗಳನ್ನು ಶಾಶ್ವತವಾಗಿ ಮುಚ್ಚಿಸಿ

ಗ್ರಾಮೀಣ ಭಾಗದಲ್ಲಿ ರೈತರನ್ನ ಟಾರ್ಗೆಟ್ ಮಾಡುವುದೇ ಇವರ ಉದ್ದೇಶಾಗಿದೆ. ಇಂತಹ ಎಲ್ಲಾ ಲಾಡ್ಜ್ ಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು. ಈ ಕುರಿತು ಹಿಂದೆಯೇ ಮಾನವ ಹಕ್ಕುಗಳ ಆಯೋಗಕ್ಕೆ‌ ದೂರು ನೀಡಿದ್ದೆವು. ಇದೀಗ ಇಂತದ ದಂಧೆ ನಡೆಸುತ್ತಿರುವ ಹೊಳಲ್ಕೆರೆ ಪ್ರಜ್ವಲ್ ಲಾಡ್ಜ್ ಅನ್ನು ಎಸ್ಪಿ ಕೂಡಲೇ ಶಾಶ್ವತವಾಗಿ ಮುಚ್ಚಬೇಕು ಎಂದು ಒಡನಾಡಿ ಸಂಸ್ಥೆ ನಿರ್ದೇಶಕಿ ಸ್ಟಾನ್ಲಿ ಆಗ್ರಹಿಸಿದರು.

ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮೂವರು ಪುರುಷರು, ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾದವರ ಹೆಸರನ್ನು ಸಿಎಂ ಹೇಳಬೇಕು: ಡಿಕೆ ಶಿವಕುಮಾರ್!

Sat May 7 , 2022
ಧಾರವಾಡ: ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಭಾಗಿಯಾದವರ ಹೆಸರುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸಹೋದರನ ಅಗಲಿಕೆಯ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರನ್ನು ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಅಶ್ವಥ್ ನಾರಾಯಣ ಹೊರಗಡೆ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರುಗಳು […]

Advertisement

Wordpress Social Share Plugin powered by Ultimatelysocial