ಟಾಲಿವುಡ್‌ನಲ್ಲಿ ‘ದಳಪತಿ’ ವಿಜಯ್ – ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಹಿನ್ನಡೆ?

‘ದಳಪತಿ’ ವಿಜಯ್ ಅವರ ‘ಬೀಸ್ಟ್‌’ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಆ ಚಿತ್ರಕ್ಕೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಹಾಗಾಗಿ, ಈ ಬಾರಿ ತೆರೆಗೆ ಬರುತ್ತಿರುವ ಅವರ ‘ವಾರಿಸು’ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ಗೆಲ್ಲಲೇಬೇಕಾಗಿದೆ. ಆದರೆ ಆರಂಭದಲ್ಲೇ ಈ ಸಿನಿಮಾಗೆ ಒಂದು ಹಿನ್ನಡೆ ಆಗಿದೆ. ಹೌದು, ಎಲ್ಲರಿಗೂ ಗೊತ್ತಿರುವಂತೆ. ‘ವಾರಿಸು’ ಚಿತ್ರವನ್ನು ನಿರ್ದೇಶನ ಮಾಡಿರುವವರು ಮತ್ತು ನಿರ್ಮಾಣ ಮಾಡಿರುವವರು ಟಾಲಿವುಡ್‌ ಮಂದಿ. ಸಹಜವಾಗಿ ‘ವಾರಸುಡು’ ಹೆಸರಿನಲ್ಲಿ ತೆಲುಗಿನಲ್ಲೂ ಈ ಸಿನಿಮಾ ತೆರೆಕಾಣಿಸಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಅಲ್ಲಿ ಕೊಂಚ ಹಿನ್ನಡೆ ಆಗಿದೆ.’ದಳಪತಿ’ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ (ತಮಿಳು ವರ್ಷನ್) ಸಿನಿಮಾ ಜನವರಿ 11ರಂದು ಗ್ರ್ಯಾಂಡ್ ಆಗಿ ತೆರೆಗೆ ಬರುತ್ತಿದೆ. ಅದೇ ದಿನ ‘ವಾರುಸುಡು’ (ತೆಲುಗು ವರ್ಷನ್) ಕೂಡ ತೆರೆಗೆ ಬರಬೇಕಿತ್ತು. ಅದಕ್ಕಾಗಿ ನಿರ್ಮಾಪಕ ‘ದಿಲ್’ ರಾಜು ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಅದೀಗ ಸಾಧ್ಯವಾಗುತ್ತಿಲ್ಲ. ಜನವರಿ 11ರಂದು ‘ವಾರಿಸು’ ಮಾತ್ರ ತೆರೆಗೆ ಬರಲಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ‘ವಾರಿಸು’ ಚಿತ್ರದ ತೆಲುಗು ವರ್ಷನ್ ‘ವಾರುಸುಡು’ ರಿಲೀಸ್ ಆಗುತ್ತಿಲ್ಲ. ಅದನ್ನು ಜನವರಿ 14ರಂದು ರಿಲೀಸ್ ಮಾಡಲು ‘ದಿಲ್’ ರಾಜು ಪ್ಲ್ಯಾನ್ ಮಾಡಿಕೊಂಡಿದ್ದಾರೆ.ಸಂಕ್ರಾಂತಿ ಪ್ರಯುಕ್ತ ದೊಡ್ಡ ದೊಡ್ಡ ಸಿನಿಮಾಗಳು ಕ್ಯೂನಲ್ಲಿವೆ. ಅದರಲ್ಲೂ ತೆಲುಗಿನಲ್ಲಿ ಈ ಬಾರಿ ಥಿಯೇಟರ್‌ಗಳ ಮುಂದೆ ಮಾಸ್ ಜಾತ್ರೆಯೇ ನಡೆಯಲಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಮತ್ತು ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ ಸಿನಿಮಾಗಳು ಒಂದು ದಿನಗಳ ಅಂತರದಲ್ಲಿ ತೆರೆಗೆ ಬರಲಿವೆ. ಹಾಗಾಗಿ, ತೆಲುಗಿನಲ್ಲಿ ‘ವಾರುಸುಡು’ ಸಿನಿಮಾವನ್ನು ಈ ಎಲ್ಲ ಸಿನಿಮಾಗಳು ತೆರೆಗೆ ಬಂದಮೇಲೆ ರಿಲೀಸ್ ಮಾಡಲು ದಿಲ್ ರಾಜು ನಿರ್ಧರಿಸಿದ್ದಾರೆ. ‘ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ (ಜ.12) ಮತ್ತು ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ (ಜ.13) ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಸಿನಿಮಾಗಳಿಗೆ ಜಾಸ್ತಿ ಚಿತ್ರಮಂದಿರ ಸಿಗಬೇಕು. ಆದ್ದರಿಂದ ಆ ಸಿನಿಮಾಗಳು ರಿಲೀಸ್ ಆದಮೇಲೆ ಜನವರಿ 14ರಂದು ‘ವಾರುಸುಡು’ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ. ಒಟ್ಟಿನಲ್ಲಿ ಎಲ್ಲರ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಬೇಕು ಎಂಬುದು ನನ್ನ ಉದ್ದೇಶ..’ ಎಂದು ದಿಲ್ ರಾಜು ಅಧಿಕೃತ ಹೇಳಿಕೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭಾ ಚುನಾವಣೆಗೆ ತಂತ್ರ ರೂಪಿಸಲು ರಾಜ್ಯ ಬಿಜೆಪಿ ಚಿಂತನೆ!

Mon Jan 9 , 2023
ಈ ವರ್ಷದ ವಿಧಾನಸಭೆ ಚುನಾವಣೆಗೂ ಮುನ್ನ ಜನವರಿ 16 ರಂದು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಚುನಾವಣೆ ಕುರಿತು ಕಾರ್ಯತಂತ್ರ ಮತ್ತು ಪ್ರಣಾಳಿಕೆ ರೂಪಿಸಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಈ ವರ್ಷದ ವಿಧಾನಸಭೆ ಚುನಾವಣೆಗೂ ಮುನ್ನ ಜನವರಿ 16 ರಂದು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಚುನಾವಣೆ ಕುರಿತು ಕಾರ್ಯತಂತ್ರ ಮತ್ತು ಪ್ರಣಾಳಿಕೆ ರೂಪಿಸಲು […]

Advertisement

Wordpress Social Share Plugin powered by Ultimatelysocial