RECIPE: ಟೊಮ್ಯಾಟೋ ಚಟ್ನಿ;

ಬೇಕಾಗುವ ಸಾಮಾಗ್ರಿಗಳು;
2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ ಕಾಯಿ /ಹಸಿರು ಟೊಮ್ಯಾಟೊ
3 ಟೀ ಸ್ಪೂನ್ ಎಳ್ಳಿನ ಬೀಜ
ಸ್ವಲ್ಪ ಕೊತ್ತೊಂಬರಿ ಸೊಪ್ಪು
1 ಟೀ ಸ್ಪೂನ್ ಅಡುಗೆ ಎಣ್ಣೆ
7 ರಿಂದ 8 ಕರಿಬೇವಿನ ಎಸಳುಗಳು
1/2 ಟೀ ಸ್ಪೂನ್ ಜೀರಿಗೆ
1/2 ಟೀ ಸ್ಪೂನ್ ಸಾಸಿವೆ
1/2 ಟೀ ಸ್ಪೂನ್ ಸಕ್ಕರೆ
3 ರಿಂದ 4 ಹಸಿ ಮೆಣಸಿನ ಕಾಯಿಗಳು
ಒಂದು ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ;

•ಮೊದಲಿಗೆ ಎಳ್ಳಿನ ಬೀಜಗಳನ್ನು ಹುರಿದು ಒಣಗಿಸಿಕೊಳ್ಳಿ.

•ಈಗ ಒಂದು ಪ್ಯಾನ್ನಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇಂಗು, ಜೀರಿಗೆ, ಹಸಿ ಮೆಣಸಿಕಾಯಿ, ಕರಿಬೇವಿನ ಎಸಳುಗಳು ಹಾಗೂ ಸಣ್ಣದಾಗಿ ಕತ್ತರಿಸಿ ಇಟ್ಟುಕೊಂಡಿದ್ದ ಹಸಿರು ಟೊಮ್ಯಾಟೋವನ್ನು ಹಾಕಿ. ಸುಮಾರು 3 ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ. ಇದು ರುಚಿ ಜೊತೆಗೆ ಘಮವನ್ನೂ ಹೆಚ್ಚಿಸುತ್ತದೆ. ನಂತರ ಇದನ್ನುತಣ್ಣಗಾಗಲು ಬಿಡಿ.

•ಮಿಶ್ರಣ ತಣ್ಣಗಾದ ಬಳಿಕ ಅದರೊಂದಿಗೆ ಉಪ್ಪು , ಸಕ್ಕರೆ ಹಾಗೂ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಹಾಕಿ ಸರ್ವ್ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:'ವೀರಂ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ;

Sat Jan 29 , 2022
ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಜೋಡಿಯ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ವೀರಂ’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕುಮಾರ್ ರಾಜ್ ನಿರ್ದೇಶನದ ವೀರಂ ಸಿನಿಮಾ ಮೇ 6 ರಂದು ತೆರೆ ಕಾಣಲಿದೆ. ಶಶಿಧರ್ ಸ್ಟುಡಿಯೋ ಈ ಸಿನಿಮಾ ನಿರ್ಮಾಣ ಮಾಡಿದೆ. ತಾರಾಗಣದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಖಳನಟರಾಗಿ ಚಿರಾಗ್ ಜಾನಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಅವರ ಸಿನಿಮೆಟೊಗ್ರಫಿ ವೀರಂ ಸಿನಿಮಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial