ಟ್ರಾಫಿಕ್ ಪೊಲೀಸರನ್ನೇ ಅಪಹರಿಸಿದ ಕತರ್ನಾಕ್‌ ಚಾಲಕ…!

ಲಕ್ನೋ, ಅಕ್ಟೋಬರ್ 20: ಕಾರಿನ ದಾಖಲೆ ತೋರಿಸಿ ಎಂದ ಟ್ರಾಫಿಕ್ ಪೊಲೀಸರನ್ನೇ ಚಾಲಕ ಅಪಹರಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಸೆಕ್ಷನ್​​ 364, 353 ಹಾಗೂ 368ರ ಅಡಿ ದೂರು ದಾಖಲಾಗಿತ್ತು.ಸಂಜೆ ಈ ಘಟನೆ ನಡೆದಿದ್ದು, ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸುರ್ಜಾಪುರ್​ ರಸ್ತೆಯಲ್ಲಿ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿದ್ದ ವೇಳೆ ಡ್ರೈವರ್ ಈ ರೀತಿಯಾಗಿ ನಡೆದುಕೊಂಡಿದ್ದನೆಂದು ವರದಿಯಾಗಿದೆ.ಟ್ರಾಫಿಕ್​​ ಪೊಲೀಸ್ ಕಾನ್ಸ್​ಟೇಬಲ್​ ಒಬ್ಬರ ವಾಹನಗಳ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಆರೋಪಿ ಸಚಿನ್​ ರಾವತ್​ ಎಂಬಾತನ ಕಾರು ತಡೆದಿರುವ ಟ್ರಾಫಿಕ್ ಪೊಲೀಸ್​​ ವಿರೇಂದ್ರ ಸಿಂಗ್​​ ದಾಖಲಾತಿ ಕೇಳಿದ್ದಾರೆ.ಈ ವೇಳೆ, ಕಾರಿನೊಳಗೆ ಕುಳಿತುಕೊಳ್ಳಿ ಎಂದಿರುವ ಆತ, ದಿಢೀರ್​​​ನೇ ಕಾರ್​ ಡೋರ್​ ಲಾಕ್​ ಮಾಡಿಕೊಂಡು ಸುಮಾರು 10 ಕಿಲೋ ಮೀಟರ್ ದೂರ ಕರೆದೊಯ್ದಿದ್ದಾನೆ. ಇದಾದ ಬಳಿಕ ಅಜಯ್​ಪುರ್​ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಕೆಳಗಿಳಿಸಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿ ಸಚಿನ್ ರಾವಲ್ ಎಂಬಾತನ ಕಾರನ್ನು ಟ್ರಾಫಿಕ್ ಪೊಲೀಸ್ ವೀರೇಂದ್ರ ಸಿಂಗ್ ತಡೆದು ನಿಲ್ಲಿಸಿದ್ದರು. ಅಲ್ಲದೇ ದಾಖಲೆ ತೋರಿಸುವಂತೆಯೂ ತಿಳಿಸಿದ್ದರು.ಆಗ ರಾವಲ್ ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಿದ್ದ, ಈ ವೇಳೆ ಸಿಂಗ್ ದಾಖಲೆ ತೋರಿಸುವಂತೆ ಕೇಳಿದಾಗ, ದಿಢೀರನೆ ಕಾರಿನ ಬಾಗಿಲನ್ನು ಲಾಕ್ ಮಾಡಿ ಸುಮಾರು 10 ಕಿ.ಮೀ ದೂರದವರೆಗೆ ಕರೆದೊಯ್ದಿದ್ದ.ಬಳಿಕ ಟ್ರಾಫಿಕ್ ಕಾನ್‌ಸ್ಟೇಬಲ್ ಸಿಂಗ್ ಅವರನ್ನು ಅಜಯ್ ಪುರ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಹೊರದಬ್ಬಿ ಪರಾರಿಯಾಗಿದ್ದ. ರಾವಲ್ ಗ್ರೇಟರ್ ನೋಯ್ಡಾದ ಗೋಡಿ ಬಾಚೇಡಾಗ್ರಾಮದ ನಿವಾಸಿಯಾಗಿದ್ದು, ಈತ ತನ್ನ ಕಾರಿಗೆ ನಕಲಿ ನಂಬರ್ ಅಳವಡಿಸಿಕೊಂಡು ಓಡಾಡುತ್ತಿದ್ದ. ಆದರೆ ಪೊಲೀಸ್ ಕಾನ್‌ಸ್ಟೇಬಲ್ ಊರಿನ ವ್ಯಕ್ತಿಯೊಬ್ಬರ ಕಾರಿನ ನಂಬರ್ ಕೂಡ ಅದೇ ಆಗಿದ್ದರಿಂದ ಸಿಂಗ್ ಅನುಮಾನಗೊಂಡು ದಾಖಲೆ ತೋರಿಸಲು ಹೇಳಿದ್ದರು.ಆರೋಪಿ ಸಚಿನ್ ರಾವಲ್ ಈ ಮಾರುತಿ ಸ್ವಿಫ್ಟ್‌ ಕಾರನನ್ನು ಗುರುಗ್ರಾಮದ ಶೋರೂಂನಲ್ಲಿ ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಅಪಹರಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದೀಗ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೇಬಲ್ ಅನ್ನು ಅಪಹರಣಕ್ಕೆ ಯತ್ನಿಸಿದ ಆರೋಪದಲ್ಲಿ ಸಚಿನ್ ರಾವಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ-ಪಾಕ್‌ ನಡುವಿನ ರೋಚಕ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ ಸ್ಪಷ್ಟನೆ...?

Wed Oct 20 , 2021
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ಥಾನ ಪ್ರೇರಿತ ಉಗ್ರರು ಮುಗ್ಧ ನಾಗರಿಕರ ಹತ್ಯೆಯಲ್ಲಿ ತೊಡಗಿರುವುದರಿಂದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯವನ್ನು ರದ್ದುಗೊಳಿಸಬೇಕು, ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ಥಾನ ವಿರುದ್ಧ ಆಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ಪಂದ್ಯ ರದ್ದಾಗದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಇದು ಐಸಿಸಿ ಸಂಘಟಿಸುವ ಕೂಟವಾದ್ದರಿಂದ ಪ್ರತಿಯೊಂದು ತಂಡವೂ ನಿರ್ದಿಷ್ಟ ಎದುರಾಳಿ ವಿರುದ್ಧ ಆಡಲೇಬೇಕಾಗುತ್ತದೆ. ಇದನ್ನು ನಿರಾಕರಿಸುವಂತಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ […]

Advertisement

Wordpress Social Share Plugin powered by Ultimatelysocial