ಅಫ್ಘನ್-ಪಾಕ್ ನಡುವೆ ಗಡಿಯುದ್ಧ ಜೋರು! : ಇಮ್ರಾನ್​ಗೆ ಶಾಕ್!

ಅಫ್ಘನ್-ಪಾಕ್ ನಡುವೆ ಗಡಿಯುದ್ಧ ಜೋರು! ಇಮ್ರಾನ್​ಗೆ ಶಾಕ್!

ಅಫ್ಘಾನಿಸ್ತಾನದ ಘೊರುಸ್ಟೆಯ ಗಡಿಯ ಡುರಾಂಡ್​​​ ಲೈನ್​​ನಲ್ಲಿ ಪಾಕಿಸ್ತಾನದ ಸೇನೆ ನಿರ್ಮಿಸಿದ್ದ ಮುಳ್ಳುತಂತಿಯ ಬೇಲಿಯನ್ನು ತಾಲಿಬಾನಿಗಳು ನಾಶಪಡಿಸಿದ್ದಾರೆ. ಡ್ಯುರಂಡ್ ಲೈನ್​​ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವನ್ನು ಬೇರ್ಪಡಿಸೋ ಗಡಿರೇಖೆಯಾಗಿದೆ.

ಡ್ಯುರಂಡ್ ಅನ್ನೋದು ಈ ಗಡಿರೇಖೆ ಎಳೆದ ಬ್ರಿಟಿಷ್ ಅಧಿಕಾರಿಯ ಹೆಸರು. ಇದು ಸುಮಾರು 2670 ಕಿಲೋಮೀಟರ್ ಇದೆ. ಆದ್ರೆ ಈ ಗಡಿಯನ್ನು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳೆರಡೂ ಒಪ್ಪಿಕೊಳ್ಳೋದಿಲ್ಲ. ಇವರ ನಡುವೆ ಗಡಿ ವಿವಾದ ಇದ್ದು, ಸರಿಯಾದ ಬೇಲಿ ವ್ಯವಸ್ಥೆಯೇ ಇರಲಿಲ್ಲ. ಇದೀಗ ತಾಲಿಬಾನಿಗಳು ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬೇಲಿ ಕಟ್ಟೋಕೆ ಮುಂದಾಗಿದ್ದು, ಬಹುತೇಕ ನಿರ್ಮಾಣ ಕಾರ್ಯ ಮುಗಿದಿದೆ. ಆದ್ರೆ ಘೊರುಸ್ಟೆ ಭಾಗದಲ್ಲಿ ಅದನ್ನು ತಾಲಿಬಾನಿಗಳು ನಾಶ ಮಾಡ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Tue Dec 21 , 2021
ಬೆಳಗಾವಿ, ಡಿ.21: ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕವಾಗಿ ಗುಂಪು ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೋವಿಡ್, ಒಮೈಕ್ರಾನ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿ ಇಂದು ಅಪರಾಹ್ನ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಮಾಧ್ಯಮದವರಿಗೆ ಈ ಮಾಹಿತಿ ಹಂಚಿಕೊಂಡರು. ಡಿ.30ರಿಂದ ಜನವರಿ 2ರವವರೆಗೆ ರಾಜ್ಯಾದ್ಯಂತ ಈ ಮಾರ್ಗಸೂಚಿ ಜಾರಿಯಲ್ಲಿರುತ್ತದೆ. ಕೋವಿಡ್ ಮತ್ತು ಒಮೈಕ್ರಾನ್ ಪರಿಸ್ಥಿತಿ ಅವಲೋಕಿಸಿ ತಜ್ಞರ ಶಿಫಾರಸಿನಂತೆ ಈ ಮಾರ್ಗಸೂಚಿ ಜಾರಿಗೆ […]

Advertisement

Wordpress Social Share Plugin powered by Ultimatelysocial