ತಮಿಳುನಾಡಿನಲ್ಲೂ ನಾಳೆಯಿಂದ ನೈಟ್ ಕರ್ಫ್ಯೂ, ಭಾನುವಾರ ಲಾಕ್ಡೌನ್;

 ಚೆನ್ನೈ, 5 ಜನವರಿ(ಹಿ.ಸ) ಆಯಂಕರ್ : ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದೇ ಕಾರಣಕ್ಕಾಗಿ ಅನೇಕ ರಾಜ್ಯಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿವೆ.\

ತಮಿಳುನಾಡಿನಲ್ಲೂ ಕೊರೊನಾ ಆರ್ಭಟ ಹೆಚ್ಚಿದ್ದು ಸ್ಟಾಲಿನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಇದರ ಜೊತೆಗೆ ಭಾನುವಾರದಂದು ಲಾಕ್ಡೌನ್ ಹೇರಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿ, ರಾಜ್ಯದಲ್ಲಿ ನಾಳೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಭಾನುವಾರದಂದು ಲಾಕ್ಡೌನ್ ಹೇರಿಕೆ ಮಾಡಲಾಗುವುದು ಎಂದಿದ್ದಾರೆ.

ಜನವರಿ 9ರಂದು ರೆಸ್ಟೋರೆಂಟ್ಗಳು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. 1ರಿಂದ 9ನೇ ತರಗತಿವರೆಗೆ ಆನ್ಲೈನ್ ತರಗತಿಗಳು ನಡೆಯಲಿದ್ದು, 10ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ-ಕಾಲೇಜ್ಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

ತಮಿಳುನಾಡಿನ ಪ್ರಸಿದ್ಧ ಹಬ್ಬ ಪೊಂಗಲ್ಗೆ ಸಂಬಂಧಿಸಿದ ಸರ್ಕಾರಿ, ಖಾಸಗಿ ಸಮಾರಂಭಗಳನ್ನು ಮುಂದೂಡಲಾಗಿದೆ. ಬಸ್, ಉಪನಗರ ರೈಲುಗಳು ಹಾಗೂ ಮೆಟ್ರೋಗಳಲ್ಲಿ ಶೇ. 50ರ ಆಸನದೊಂದಿಗೆ ಕಾರ್ಯನಿರ್ವಹಿಸಲಿವೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಧಾರ್ಮಿಕ ಸ್ಥಳಗಳಲ್ಲಿ ಭಕ್ತರಿಗೆ ಅನುಮತಿ ಇರುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಿಗಳ ಬಳಿ ʼಪ್ರಧಾನಿ ಮೋದಿʼ ಅಸಮಾಧಾನ;

Wed Jan 5 , 2022
ಚಂಡೀಗಢ: ಪ್ರಧಾನ ಮಂತ್ರಿಗಳ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾದ ಹಿನ್ನೆಲೆಯಲ್ಲಿ ಪಂಚಾಬ್‌ನ ಫಿರೋಜ್ ಪುರ(Ferozepur)ದಲ್ಲಿ ಬುಧವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಮೊದಲ ರ್ಯಾಲಿ(first rally)ಯನ್ನ ರದ್ದುಗೊಳಿಸಲಾಗಿದ್ದು, ಪ್ರಧಾನಿ ನವದೆಹಲಿಗೆ ವಾಪಸ್‌ ಆಗಿದ್ದಾರೆ. ಇನ್ನು ದೆಹಲಿಗೆ ವಾಪಸಾಗುವಾಗ ಭಟಿಂಡಾ ಸೆಕ್ಯೂರಿಟಿ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ, ‘ಏರ್‌ಪೋರ್ಟ್‌ವರೆಗೆ ಜೀವಂತವಾಗಿ ವಾಪಸ್‌ ಬಂದಿದ್ದೇನೆ. […]

Related posts

Advertisement

Wordpress Social Share Plugin powered by Ultimatelysocial