ಉಕ್ರೇನ್‌: ಸುಮಿಯಲ್ಲಿ ಬಾಂಬ್ ದಾಳಿ- ಇಬ್ಬರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಸಾವು

ಕೀವ್: ಉಕ್ರೇನ್‌ನ ರಾಜಧಾನಿ ಕೀವ್‌ನಿಂದ 350 ಕಿ.ಮೀ ದೂರದಲ್ಲಿರುವ ಸುಮಿ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ರಕ್ಷಣಾ ಕಾರ್ಯಾಚರಣೆಯ ತಂಡ ತಿಳಿಸಿದೆ.

ಸೋಮವಾರ ರಾತ್ರಿ ‘ಶತ್ರು ವಿಮಾನಗಳು ಅಪಾರ್ಟ್‌ಮೆಂಟ್ ಮೇಲೆ ಕುತಂತ್ರದಿಂದ ದಾಳಿ ನಡೆಸಿವೆ’ಎಂದು ರಕ್ಷಣಾ ಕಾರ್ಯಾಚರಣೆ ತಂಡ ತಿಳಿಸಿದೆ ಎಂದು ಟೆಲಿಗ್ರಾಮ್‌ ವರದಿ ಮಾಡಿದೆ.

ರಷ್ಯಾದ ಗಡಿಯ ಸಮೀಪವಿರುವ ಸುಮಿ ನಗರದಲ್ಲಿ ಹಲವು ದಿನಗಳಿಂದ ಭಾರಿ ಹೋರಾಟ ನಡೆಯುತ್ತಿದೆ.

ಈ ಮಧ್ಯೆ, ರಷ್ಯಾ- ಉಕ್ರೇನ್ ನಿಯೋಗಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಫಲ ನೀಡುತ್ತಿಲ್ಲ.

ರಷ್ಯಾ ಮತ್ತು ಉಕ್ರೇನ್ ನಡುವೆ ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಮೂರನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ.

‘ಉಭಯ ದೇಶಗಳ ನಡುವಿನ ಮಾತುಕತೆಯು ರಾಜಕೀಯ ಮತ್ತು ಮಿಲಿಟರಿ ವಿಚಾರಗಳ ಕುರಿತು ಮುಂದುವರಿದಿದೆ. ಮಾತುಕತೆಯಿಂದ ಯಾವುದೇ ಪರಿಹಾರ ಲಭ್ಯವಾಗಿಲ್ಲ. ಈಗಲೇ ಏನನ್ನೂ ಹೇಳಲಾಗುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷರ ಸಹಾಯಕ ಮತ್ತು ಮಾಸ್ಕೋ ನಿಯೋಗದ ಮುಖ್ಯಸ್ಥರೂ ಆಗಿರುವ ವ್ಲಾಡಿಮಿರ್ ಮೆಡಿನ್‌ಸ್ಕಿ ತಿಳಿಸಿದ್ದಾರೆ.

ಇದೇ ನಗರದಲ್ಲಿ ಭಾರತದ 700 ವಿದ್ಯಾರ್ಥಿಗಳು ಸಿಲುಕಿದ್ದು, ಆತಂಕಕ್ಕೆ ಕಾರಣವಾಗಿದೆ. ಭಾರತದ ನಿರಂತರ ಮನವಿ ನಡುವೆಯೂ ಈ ನಗರದಿಂದ ಇಲ್ಲಿಯವರೆಗೆ ರಕ್ಷಣಾ ಕಾರಿಡಾರ್ ಆರಂಭವಾಗಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಂಕ್‌ ಗ್ರಾಹಕರಿಗೆ ನಿಂದ ಸಿಹಿ ಸುದ್ದಿ: ನೀವು ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೂ ಇನ್ಮುಂದೆ ಈ ರೀತಿ ಹಣದ ವಹಿವಾಟು ಮಾಡಬಹುದು, ಇಲ್ಲಿದೆ ಮಾಹಿತಿ

Tue Mar 8 , 2022
  ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಸ್ಮಾರ್ಟ್‌ಫೋನ್ ಅಲ್ಲದ ಬಳಕೆದಾರರಿಗಾಗಿ ವಿಶೇಷ UPI (UPI 123PAY) ಅನ್ನು ಬಿಡುಗಡೆ ಮಾಡಿದೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಫೀಚರ್ ಫೋನ್‌ಗಳನ್ನು ಬಳಸುವ ಸುಮಾರು 400 ಮಿಲಿಯನ್ ಜನರಿದ್ದಾರೆ.ಆರ್‌ಬಿಐ ಡಿಜಿಟಲ್ ಪಾವತಿಗಾಗಿ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದೆ, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಿದ್ಧಪಡಿಸಿದೆ. ‘ಡಿಜಿಸಾತಿ’ ಹೆಸರಿನ ಈ ಸಹಾಯವಾಣಿಯ ಸಹಾಯವಾಣಿಯನ್ನು ವೆಬ್‌ಸೈಟ್ – ‘dijisathi.com’ ಮತ್ತು ಫೋನ್ […]

Advertisement

Wordpress Social Share Plugin powered by Ultimatelysocial