ಕೇಂದ್ರ ಸಚಿವ ಗಡ್ಕರಿ ತವರಿನಲ್ಲೇ ಬಿಜೆಪಿಗೆ ಮುಖಭಂಗ;

ಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್, ಎನ್ ಸಿ ಪಿ ಮೈತ್ರಿಕೂಟದ ಸರ್ಕಾರವನ್ನು ಪತನಗೊಳಿಸಿ ಏಕನಾಥ್ ಶಿಂದೆ ಬಣದ ಶಿವಸೇನೆ ಶಾಸಕರೊಂದಿಗೆ ಸರ್ಕಾರ ರಚಿಸಿರುವ ಬಿಜೆಪಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮುಖಭಂಗವಾಗಿದೆ

ಆರ್ ಎಸ್ ಎಸ್ ಪ್ರಧಾನ ಕಚೇರಿ ಹೊಂದಿರುವ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಂತಹ ಘಟಾನುಘಟಿಗಳು ಇರುವ ನಾಗ್ಪುರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸೋಲಾಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗೋ ಗಾಣಾರ್ ಅವರ ವಿರುದ್ಧ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಮೈತ್ರಿಯ ಮಹಾವಿಕಾಸ್ ಆಘಾಡಿ ಅಭ್ಯರ್ಥಿ ಸುಧಾಕರ್ ಆಡಬಾಲೆ ಗೆಲುವು ಸಾಧಿಸಿದ್ದಾರೆ. ಇದು ಬಿಜೆಪಿಗೆ ದೊಡ್ಡ ಹಿನ್ನಡೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟುವ ಪ್ರತಿ ಮಗುವಿಗೆ 100 ಗಿಡ ನೆಡುವ ಅಭಿಯಾನಕ್ಕೆ ಚಾಲನೆ.

Fri Feb 3 , 2023
ಗ್ಯಾಂಗ್ಟಾಕ್, ಫೆ.3 – ಹಿಮಾಲಯ ರಾಜ್ಯ ಸಿಕಿಂನಲ್ಲಿ ಜನಿಸುವ ಪ್ರತಿ ಮಗುವಿಗೆ 100 ಮರಗಳನ್ನು ನೆಡುವ ಅಭಿಯಾನಕ್ಕೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಚಾಲನೆ ನೀಡಿದ್ದಾರೆ. ಮೇರೋ ರುಖ್ ಮೇರೋ ಸಂತತಿ (ಮರವನ್ನು ನೆಡಿರಿ, ಪರಂಪರೆ ನಡೆ) ಎಂಬ ಯೋಜನೆಯು ಮಗು ಜನನದ ನೆನಪಿಗಾಗಿ ಮರಗಳನ್ನು ನೆಡುವ ಮೂಲಕ ಪೋಷಕರು, ಮಕ್ಕಳು ಮತ್ತು ಪ್ರಕೃತಿಯ ನಡುವಿನ ಸಂಬಂಧ ಬಲಪಡಿಸುವ ಗುರಿಯನ್ನು ಹೊಂದಿದೆ. ಮಗು ಬೆಳೆದಂತೆ ಮರಗಳು ಬೆಳೆಯುವುದನ್ನು ನೋಡುವುದು […]

Advertisement

Wordpress Social Share Plugin powered by Ultimatelysocial