ಹುಟ್ಟುವ ಪ್ರತಿ ಮಗುವಿಗೆ 100 ಗಿಡ ನೆಡುವ ಅಭಿಯಾನಕ್ಕೆ ಚಾಲನೆ.

ಗ್ಯಾಂಗ್ಟಾಕ್, ಫೆ.3 – ಹಿಮಾಲಯ ರಾಜ್ಯ ಸಿಕಿಂನಲ್ಲಿ ಜನಿಸುವ ಪ್ರತಿ ಮಗುವಿಗೆ 100 ಮರಗಳನ್ನು ನೆಡುವ ಅಭಿಯಾನಕ್ಕೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಚಾಲನೆ ನೀಡಿದ್ದಾರೆ.

ಮೇರೋ ರುಖ್ ಮೇರೋ ಸಂತತಿ (ಮರವನ್ನು ನೆಡಿರಿ, ಪರಂಪರೆ ನಡೆ) ಎಂಬ ಯೋಜನೆಯು ಮಗು ಜನನದ ನೆನಪಿಗಾಗಿ ಮರಗಳನ್ನು ನೆಡುವ ಮೂಲಕ ಪೋಷಕರು, ಮಕ್ಕಳು ಮತ್ತು ಪ್ರಕೃತಿಯ ನಡುವಿನ ಸಂಬಂಧ ಬಲಪಡಿಸುವ ಗುರಿಯನ್ನು ಹೊಂದಿದೆ.

ಮಗು ಬೆಳೆದಂತೆ ಮರಗಳು ಬೆಳೆಯುವುದನ್ನು ನೋಡುವುದು ಸಂತಸ ಮತ್ತು ಈ ಭೂಮಿಗೆ ಆಗಮನದ ನೆನಪಿಸುವ ಸಾಂಕೇತಿಕ ಮಾರ್ಗವಾಗಿದೆ. ಇದು ಭಾರತದಲ್ಲಿ ಈ ರೀತಿಯ ನವೀನ ಹಸಿರು ಉಪಕ್ರಮವಾಗಿದೆ ಎಂದು ತಮಾಂಗ್ ಹೇಳಿದರು ಇದೇ ವೇಳೆ ಕೆಲವು ಶಿಶು ಪಡೆದ ಪೋಷಕರಿಗೆ ಸಸಿಗಳನ್ನು ವಿತರಿಸಿದರು.

ಅರಣ್ಯ ಇಲಾಖೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಈ ಯೋಜನೆ ಪ್ರಕೃತಿಯ ಬಗ್ಗೆ ಜನರ ಮನೋಭಾವವನ್ನು ಪರಿವರ್ತಿಸುತ್ತದೆ ಮತ್ತು ನೆಡುವ ಸಸಿಗಳು ತಲೆಮಾರುಗಳ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದರು.

ಸಿಕ್ಕಿಮೀಸ್ ಸಮಾಜವು ಅನಾದಿ ಕಾಲದಿಂದಲೂ ಪ್ರಕೃತಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ತಮಾಂಗ್ ಹೇಳಿದರು. ನಾವು ನಮ್ಮ ಪರ್ವತಗಳು, ಸರೋವರಗಳು, ನದಿಗಳು, ಗುಹೆಗಳು ಮತ್ತು ಬುಗ್ಗೆಗಳನ್ನು ಮಾತ್ರ ಗೌರವಿಸುತ್ತೇವೆ, ಆದರೆ ಇಡೀ ಭೂದೃಶ್ಯವನ್ನು ಪವಿತ್ರವೆಂದು ಪೂಜಿಸುತ್ತೇವೆ ಎಂದು ಅವರು ಹೇಳಿದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್‍ಗಳು, ಪೌರಕಾರ್ಮಿಕರು ಮತ್ತು ಅರಣ್ಯ ಸಿಬ್ಬಂದಿ ಈ ಯೋಜನೆ ಸಾಕಾರಕ್ಕೆ ಶ್ರಮಿಸಬೇಕು .ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಾದ ವಾಟ್ಸಾಪ್, ಇಮೇಲ್ ಮತ್ತು ವೆಬ್ ಪೋರ್ಟಲ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದರು. ಸಿಕ್ಕಿಂ ಮಾಹಿತಿ ಆಯೋಗದ ಪ್ರಕಾರ ಸಿಕ್ಕಿಂನಲ್ಲಿ 6.32 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

3ನೇ ಹಂತದ ಪ್ರಸ್ತಾವನೆ ಸ್ವೀಕರಿಸಿದ ಕೇಂದ್ರ.

Fri Feb 3 , 2023
ಬೆಂಗಳೂರು, ಫೆಬ್ರವರಿ 3: ನಮ್ಮ ಮೆಟ್ರೋ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ಕರ್ನಾಟಕದಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ. ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ ಸಿ ಮೋಹನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್, ಮೂರನೇ ಹಂತದ ಎರಡು ಕಾರಿಡಾರ್‌ಗಳೊಂದಿಗೆ 44.65 ಕಿ.ಮೀ. ಕಾರಿಡಾರ್-1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು ಹಂತ-II […]

Advertisement

Wordpress Social Share Plugin powered by Ultimatelysocial