3ನೇ ಹಂತದ ಪ್ರಸ್ತಾವನೆ ಸ್ವೀಕರಿಸಿದ ಕೇಂದ್ರ.

ಬೆಂಗಳೂರು, ಫೆಬ್ರವರಿ 3: ನಮ್ಮ ಮೆಟ್ರೋ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ಕರ್ನಾಟಕದಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ ಸಿ ಮೋಹನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್, ಮೂರನೇ ಹಂತದ ಎರಡು ಕಾರಿಡಾರ್‌ಗಳೊಂದಿಗೆ 44.65 ಕಿ.ಮೀ.

ಕಾರಿಡಾರ್-1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು ಹಂತ-II ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರುತ್ತದೆ. ಹಂತ-III ಯೋಜನೆಯ ಒಟ್ಟು ವೆಚ್ಚ 16,328 ಕೋಟಿ ರೂಪಾಯಿ ಎಂದು ಸಚಿವರು ಹೇಳಿದರು.

ಬೆಂಗಳೂರಿನ ನಮ್ಮ ಮೂರನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ಹಸಿರು ನಿಶಾನೆ ನೀಡಿತ್ತು. ಮೂರನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸೆಪ್ಟೆಂಬರ್‌ನಲ್ಲಿ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಅನುಮೋದನೆ ದೊರೆತು ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ಗೆ ರಿಪೋರ್ಟ್ ಸಲ್ಲಿಸಲಾಗಿತ್ತು. ಈಗ ಮೂರನೇ ಹಂತಕ್ಕೆ ಅನುಮೋದನೆ ನೀಡಲಾಗಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸರ್ವೆ ಕಾರ್ಯವು ನಡೆದು‌ ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿ ಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ಸಿದ್ಧತೆ ಮಾಡಲಾಗಿತ್ತು.‌ ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇರುವಿಕೆಯನ್ನು ಪರಿಶೀಲನೆ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗಿದೆ.

ಮೆಟ್ರೊ ಮೂರನೇ ಹಂತದಲ್ಲಿ 44.65 ಕಿಲೋಮೀಟರ್ ಉದ್ದದ ಮಾರ್ಗ ಇರುತ್ತದೆ. ನಮ್ಮ ಮೆಟ್ರೊ ಮೂರನೇ ಹಂತದಲ್ಲಿಎರಡು ಕಾರಿಡಾರ್ ಗಳು ಇರಲಿದೆ. ಮೊದಲನೇ ಕಾರಿಡಾರ್ ಜೆಪಿ ನಗರ ನಾಲ್ಕನೇ ಹಂತದಿಂದ ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿರುತ್ತದೆ. ಮೆಟ್ರೋ ಮೂರನೇ ಹಂತದ ಒಟ್ಟು ಕಾಮಗಾರಿ ವೆಚ್ಚ 13 ಸಾವಿರ ಕೋಟಿಯಿಂದ 16 ಸಾವಿರ ಕೋಟಿ ಎಂದು ಈಗಾಗಲೇ ಅಂದಾಜಿಸಲಾಗಿದೆ. ರಾಜ್‌ಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನು ಇದು ಹೊಂದಿರಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ,

Fri Feb 3 , 2023
ಬಳ್ಳಾರಿ, ಫೆಬ್ರವರಿ 3: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳಲ್ಲ ಎಂಬ ಮಾತಿದೆ. ಹಾಗೆಯೇ ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧಗಳ ಆತ್ಮೀಯತೆಯೇ ಬೇರೆ ಎನ್ನುವುದು ಕೂಡಾ ಸತ್ಯ. ಈ ಮಾತುಗಳಿಗೆ ನಿದರ್ಶನ ಎನ್ನುವಂತೆ ಕಾಂಗ್ರೆಸ್‌ನ ಮಾಜಿ ಸಚಿವ ಸಂತೋಷ್‌ ಲಾಡ್ ಹಾಗೂ ಸಚಿವ ಶ್ರೀರಾಮುಲು ಅವರ ಪರಸ್ಪರ ಪ್ರೀತಿ ಆಲಿಂಗನದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಒಬ್ಬರು ಬಿಜೆಪಿ ಪ್ರಮುಖ ಸಚಿವರು ಮತ್ತೊಬ್ಬರು ಕಾಂಗ್ರೆಸ್ ಪ್ರಮುಖ ನಾಯಕರು […]

Advertisement

Wordpress Social Share Plugin powered by Ultimatelysocial