ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ..

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ..
ಪರೀಕ್ಷಾ ಪೇ ಚರ್ಚೆ ಮೋದಿ ನಡೆಸಿದ್ದಾರೆ..
ಸವಾಯಿ ಗಂಧರ್ವ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ರು.
ಎಲ್ಲರಿಗೂ ಎಕ್ಸಾಮ್ ವಾರಿಯರ್ ಬುಕ್ ವಿತರಣೆ ಮಾಡಿದ್ದೇವೆ.
ಸಾವಿರಾರು ಮಕ್ಕಳು ಭಾಗವಹಿಸಿದ್ದು,ಕಾರ್ಯಕ್ರಮ ವಿಶೇಷವಾಗಿತ್ತು ಎಂದ ಜೋಶಿ.

ನಾಳೆ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
10.45 ಕ್ಕೆ ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಳಿಕ ಧಾರವಾಡದಲ್ಲಿ ವಿಧಿ ವಿಜ್ಞಾನ ಕ್ಯಾಂಪಸ್ ಗೆ ಶಂಕು ಸ್ಥಾಪನೆ ಮಾಡಲಿದ್ದಾರೆ..
ಮೋದಿ ಅವರು ಮಾರ್ಗದರ್ಶನದಲ್ಲಿ ಅಮಿತ್ ಶಾ ಕ್ಯಾಂಪಸ್ ಗೆ ಶಂಕು ಸ್ಥಾಪನೆ.

ಇದು ಹುಬ್ಬಳ್ಳಿ ಧಾರವಾಡಕ್ಕೆ ಪ್ರಮುಖ ಘಟ್ಟ.
ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರೋ ಯುನಿವರ್ಸಿಟಿ.
ಇಡೀ ಧಕ್ಷಿಣ ಭಾರತದಲ್ಲಿ ಇದು ಮೊದಲ ಕ್ಯಾಂಪಸ್ ಎಂದ ಜೋಶಿ..
ಹುಬ್ಬಳ್ಳಿ ಧಾರವಾಡಕ್ಕೆ ಇದೊಂದು ಐತಿಹಾಸಿಕ ಎಂದ ಜೋಶಿ.
ಬಳಿಕ ಕುಂದಗೋಳದಲ್ಲಿ ಭೂತ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ..
ನಂತರ ಬೆಳಗಾವಿಯಲ್ಲಿ ರ್ಯಾಲಿ,ಹಾಗೂ ಭೂತ ಸಂಕಲ್ಪ ಯಾತ್ರೆಯಲ್ಲಿ ಭಾಗಿ.
ಜೊತೆಗೆ ಪ್ರಮುಖರ ಸಭೆ ಮಾಡಲಿದ್ದಾರೆ.
ಮೋದಿ ಅಮಿತ್ ಶಾ ಬರೋದರಿಂದ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಲಿದೆ ಎಂದ ಜೋಶಿ..

ದಕ್ಷಿಣ ಭಾರತದ ಮೊದಲ ಎನ್.ಎಫ್.ಎಸ್.ಯು ನಾಳೆ ಅಡಿಗಲ್ಲು: ಕೇಂದ್ರ ಸಚಿವ ಜೋಶಿ

ಧಾರವಾಡ ಜಿಲ್ಲೆಗೆ ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ. ಬಿವ್ಹಿಬಿ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಬಹುನೀರಿಕ್ಷಿತ ಎನ್.ಎಫ್‌.ಎಸ್.ಯು(ನ್ಯಾಶನಲ್ ಫಾರೆನ್ಸಿಕ್ ಸೈನ್ಸ್ ಯುನಿವರ್ಸಿಟಿ) ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎನ್.ಎಫ್.ಎಸ್.ಯು ಬಗ್ಗೆ ಈಗಾಗಲೇ ಬೇಡಿಕೆ ಇಟ್ಟಿದ್ದೇವು. ಈಗ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಧಾರವಾಡಕ್ಕೆ ಎನ್.ಎಫ್.ಎಸ್.ಯು ಜಾರಿಯಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಂತೆ ಎನ್.ಎಫ್.ಎಸ್.ಯು ಕೂಡ ಕಾರ್ಯಾರಂಭವಾಗಲಿದ್ದು, ದಕ್ಷಿಣ ಭಾರತದಲ್ಲಿಯೇ ಮೊದಲ ವಿಶ್ವವಿದ್ಯಾಲಯ ಇದಾಗಿದೆ ಎಂದರು.
ಇನ್ನೂ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿರುವ ಭಯವನ್ನು ದೂರಮಾಡಿ ಹೊಸ ಉತ್ಸಾಹವನ್ನು ಸೃಷ್ಟಿಸುವ ಸದುದ್ದೇಶದಿಂದ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಕೋಟ್ಯಾಂತರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು ಅವರು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಹದಾಯಿಗಾಗಿ ತಾಂತ್ರಿಕವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ:

Fri Jan 27 , 2023
ಪಣಜಿ: ಯಾರು ಏನೇ ಹೇಳಲಿ, ಮಹದಾಯಿಗಾಗಿ ಯಾವುದೇ ಮಾರ್ಗದಲ್ಲಿಯಾದರೂ ಹೋರಾಡಲು ನಾವು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಲಿ, ನಮ್ಮ ನಿರ್ಧಾರದಲ್ಲಿ ನಾವು ದೃಢವಾಗಿದ್ದೇವೆ. ಮಹದಾಯಿಗಾಗಿ ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ತಾಂತ್ರಿಕವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial