ನೀವು ಓಡಾಡುವ ಬೆಂಗಳೂರಿನ ರಸ್ತೆಗಳು ಸರಿಯಿಲ್ಲವೇ?

ಬೆಂಗಳೂರು, ಜನವರಿ 19: ನೀವು ಓಡಾಡುವ ರಸ್ತೆಗಳು ಸರಿ ಇಲ್ಲವೇ? ಹಾಗಾದರೆ, ಬಿಬಿಎಂಪಿ ನಿಮಗೊಂದು ಆಯಪ್‌ ಸಿದ್ದಪಡಿಸಿದೆ. ಈ ಆಯಪ್‌ನ ಹೆಸರು ‘Fix My Street’. ಇದು ಗೂಗಲ್‌ ಪ್ಲೆಸ್ಟೋರ್‌ನಲ್ಲಿ ಲಭ್ಯವಿದೆ. ಈ ಆಯಪ್‌ ಶುರುವಾಗಿ ಈಗ 15 ದಿನಗಳಾಯಿತು.

‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ 15 ದಿನಗಳಲ್ಲಿ ಸುಮಾರು 2.5 ಸಾವಿರ ದೂರುಗಳನ್ನು ಪಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಡೆಕ್ಕನ್‌ ಹೆರಾಲ್ಡ್‌’ಗೆ ಮಾಹಿತಿ ನೀಡಿದ್ದಾರೆ.

ನಗರದಾದ್ಯಂತ ರಸ್ತೆ ಗುಂಡಿಗಳ ಕುರಿತು ವರದಿ ಮಾಡಲು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾದ ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ ಕೇವಲ 15 ದಿನಗಳಲ್ಲಿ 2,500 ದೂರುಗಳನ್ನು ಸ್ವೀಕರಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಪ್ರಕಾರ, ಸಾರ್ವಜನಿಕರಿಂದ ಬಂದ 2,500 ದೂರುಗಳಲ್ಲಿ 1,500 ಪರಿಹರಿಸಲಾಗಿದೆ. ‘ಕೆಲವು ಪುನರಾವರ್ತಿತ ದೂರುಗಳಿವೆ. ನಾವು ಅವುಗಳನ್ನು ಫಿಲ್ಟರ್ ಮಾಡಬೇಕಿದೆ. ಸದ್ಯಕ್ಕೆ 815 ದೂರುಗಳನ್ನು ಮಾತ್ರ ಸರಿಪಡಿಸಬೇಕಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಮೇ 2022 ರಿಂದ, ಈ ಅಪ್ಲಿಕೇಶನ್‌ನಲ್ಲಿ ಒಟ್ಟು 40,000 ರಸ್ತೆ ಗುಂಡಿಗಳ ಬಗ್ಗೆ ವರದಿಯಾಗಿವೆ.

ಆಯಪ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ದೂರುಗಳನ್ನು ನೀಡುತ್ತಿರುವ ನಾಗರಿಕರು ಆಯಪ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು ತಿಳಿಸಿದ್ದಾರೆ.

‘ನಾನು ಅಪ್ಲಿಕೇಶನ್‌ನಲ್ಲಿ ಕೆಲವು ಗುಂಡಿಗಳ ಬಗ್ಗೆ ದೂರು ನೀಡಿದ್ದೇನೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸಮಸ್ಯೆ ಬಗೆಹರಿದಿದೆಯೇ ಎಂದು ನಂತರ ಪರಿಶೀಲಿಸಲು ನನಗೆ ಸಾಧ್ಯವಾಗಲಿಲ್ಲ. ಅಪ್ಲಿಕೇಶನ್ ಅನ್ನು ಸುಧಾರಿಸಬೇಕಾಗಿದೆ. ಬಳಕೆದಾರರು ತಮ್ಮ ದೂರಿನ ಸ್ಥಿತಿಯ ಬಗ್ಗೆ ಅಪ್‌ಡೇಟ್ ಮಾಡಬೇಕಾಗಿದೆ’ ಎಂದು ಆಶಿಶ್ ಕೆ ತಿಳಿಸಿದ್ದಾರೆ. ಇದು ಪ್ರಾರಂಭವಾದ ನಂತರ ಅಪ್ಲಿಕೇಶನ್‌ನಲ್ಲಿ ಕನಿಷ್ಠ 10 ಪಾಟ್‌ಹೋಲ್‌ಗಳ ಬಗ್ಗೆ ದೂರು ನೀಡಿದ್ದೇನೆ ಅವರು ತಿಳಿಸಿದ್ದಾರೆ.

ಇಂತಹ ಲೋಪದೋಷಗಳನ್ನು ಪರಿಶೀಲಿಸಿ ಬಳಕೆದಾರರ ಅನುಭವವನ್ನು ಸುಧಾರಿಸುವುದಾಗಿ ಬಿಬಿಎಂಪಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಬಿದ್ದಿರುವ ವರದಿಯಾಗಿದೆ. ಈ ಗುಂಡಿಗಳು ವಾಹನ ಸವಾರರ ಪ್ರಾಣಗಳನ್ನೂ ಬಲಿ ಪಡೆದಿವೆ. ಬೆಂಗಳೂರಿನ ರಸ್ತೆಗಳ ಬಗ್ಗೆ ವಾಹನ ಸವಾರರು ಹಲವಾರು ಬಾರಿ ದೂರು ನೀಡಿದ್ದರೂ, ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಬಿಬಿಎಂಪಿ ಆದಷ್ಟೂ ಬೇಗನೇ ಇದನ್ನು ಸರಿ ಪಡಿಸಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ರೈಲಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ.

Thu Jan 19 , 2023
  ಇಟಾವಾ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ರೈಲಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರೈಲ್ವೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಪೋಷಕರು ಬೈದರೆಂದು ಮನನೊಂದು ಬಾಲಕಿ ತನ್ನ ಮನೆ ಬಿಟ್ಟು ಮಹೋಬಾ ಪ್ರದೇಶದಲ್ಲಿನ ತನ್ನ ಅಜ್ಜನ ಮನೆಗೆ ಹೋಗಲೆಂದು ಜನವರಿ 15 ರಂದು ರೈಲು ಹತ್ತಿದಳು. ಎಲ್ಲಾ ಪ್ರಯಾಣಿಕರು ಇಟಾವಾದಲ್ಲಿ ರೈಲಿನಿಂದ ಇಳಿದರು ಆದರೆ ಹುಡುಗಿ ಅಲ್ಲಿಯೇ ಕುಳಿತಿದ್ದಳು. ಈ ವೇಳೆ ರೈಲನ್ನು ಸ್ವಚ್ಛಗೊಳಿಸಲು ಬಂದ ಆರೋಪಿ […]

Advertisement

Wordpress Social Share Plugin powered by Ultimatelysocial