ತಲೆ ‘ಕೂದಲು’ ಉದುರುತ್ತಿದೆಯೇ.? ಚಿಂತೆ ಬಿಡಿ

ತಲೆ 'ಕೂದಲು' ಉದುರುತ್ತಿದೆಯೇ.? ಚಿಂತೆ ಬಿಡಿ

ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಮಾಡಿ.

ಅಲೋವೆರಾದಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲು ಉದ್ದ ಮತ್ತು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಾನಿಯಾದ ಕೂದಲನ್ನು ಪೋಷಿಸುತ್ತದೆ.

ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿದೆ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಇದಕ್ಕೆ ಆಲೂಗಡ್ಡೆ ಬೆರೆಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಮಾಡಿ. ಸ್ನಾನ ಮಾಡುವ ಮುಂಚೆ ಈ ಮಿಶ್ರಣವನ್ನು ತಲೆಯ ಬುಡದ ಕೆಳಗೆ ಹಚ್ಚಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ. ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಯುತ್ತದೆ. ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು

Thu Dec 23 , 2021
ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ ಔಷಧಿ ಪರಿಣಾಮ ಬೀರುವುದಿಲ್ಲ. ಅಂತವರಿಗೊಂದು ಉತ್ತಮ ಮನೆ ಮದ್ದು ಇಲ್ಲಿದೆ. ಪಾದಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಯೂ ಇದರಿಂದ ದೂರವಾಗುತ್ತದೆ. ಈ ಮನೆ ಮದ್ದು ಮಾಡಲು ಬೇಕಾಗುವ ಪದಾರ್ಥ : ಒಂದು ಕಪ್ ಔಷಧೀಯ ಆಲ್ಕೋಹಾಲ್ 10 ಆಸ್ಪಿರಿನ್ ಮಾತ್ರೆಗಳು 1 […]

Related posts

Advertisement

Wordpress Social Share Plugin powered by Ultimatelysocial