ಉತ್ತರ ಪ್ರದೇಶ: ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ

ಬಾಲ್ಲಿಯ (ಉತ್ತರ ಪ್ರದೇಶ): ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮತ್ತು ಕೋವಿಡ್ ನಿರ್ಬಂಧಗಳನ್ನು ಪಾಲಿಸದೇ ಇರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಾಗಿದೆ.ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟಿರುವುದಕ್ಕೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸುರೆಂದ್ರ ಸಿಂಗ್ ರಾಜೀನಾಮೆ ನೀಡಿದ್ದಾರೆ.ಅದಾದ ಬಳಿಕ, ಬೈರಿಯಾದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಲು ಅವರು ಮಂಗಳವಾರ ತೆರಳಿದ್ದರು.ಈ ಸಂದರ್ಭದಲ್ಲಿ ಸುಮಾರು ಸಾವಿರ ಜನರು ಸಭೆ ಸೇರಿ, ಚುನಾವಣಾ ನೀತಿ ಸಂಹಿತೆ ಮತ್ತು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಶಾಸಕ ಸಿಂಗ್ ಸಹಿತ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಹಿಜಾಬ್ ಸಾಲು: ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಶಿಕ್ಷಣ ಸಂಸ್ಥೆಗಳ ಗೇಟ್‌ಗಳ ಸುತ್ತಲೂ ಸಭೆ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ

Wed Feb 9 , 2022
  ಬೆಂಗಳೂರು: ಬೆಂಗಳೂರು ನಗರದ ಶಾಲೆಗಳು, ಪಿಯು ಕಾಲೇಜುಗಳು, ಪದವಿ ಕಾಲೇಜುಗಳು ಅಥವಾ ಅಂತಹುದೇ ಶಿಕ್ಷಣ ಸಂಸ್ಥೆಗಳ ಗೇಟ್‌ಗಳ 200 ಮೀಟರ್ ವ್ಯಾಪ್ತಿಯೊಳಗೆ ಎರಡು ವಾರಗಳವರೆಗೆ ಯಾವುದೇ ರೀತಿಯ ಸಭೆ, ಆಂದೋಲನ ಅಥವಾ ಪ್ರತಿಭಟನೆಗಳನ್ನು ಕರ್ನಾಟಕ ಪೊಲೀಸರು ಬುಧವಾರ ನಿಷೇಧಿಸಿದ್ದಾರೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಸುತ್ತಲಿನ ಬೆಳವಣಿಗೆಗಳ ನಂತರ ತಕ್ಷಣದ ಪರಿಣಾಮ. ಫೆಬ್ರವರಿ 22ರವರೆಗೆ ಆದೇಶ ಜಾರಿಯಲ್ಲಿರುತ್ತದೆ. ಅಧಿಕೃತ ಆದೇಶದಲ್ಲಿ, “ಕಮಲ್ ಪಂತ್, ಐಪಿಎಸ್, ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ […]

Advertisement

Wordpress Social Share Plugin powered by Ultimatelysocial