ಕನ್ನಡದಲ್ಲಿ ‘ವೀರ್ ಸಾವರ್ಕರ್’ ಬಯೋಪಿಕ್: ವಾಗ್ಮಿ ಅವತಾರವತ್ತಲಿರೋ ಸುನೀಲ್ ರಾವ್!

‘ಎಕ್ಸ್‌ಕ್ಯೂಸ್ ಮೀ’ ಸಿನಿಮಾ ಇಂದಿಗೂ ಅದೆಷ್ಟೋ ಮಂದಿಯ ಫೇವರಿಟ್. ಅದರಲ್ಲೂ ಸುನಿಲ್ ರಾವ್ ನಟನೆ ಮೆಚ್ಚಿಕೊಂಡವರೇನು ಕಮ್ಮಿಯಿಲ್ಲ. ಅಲ್ಲದೆ ಸುನೀಲ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ ಕೂಡ ಇದೇನೆ. ಇಲ್ಲಿಂದ ಒಂದರ ಹಿಂದೊಂದು ಸಿನಿಮಾಗಳಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದರು.

ಆದರೆ, ಕೆಲವು ಸಿನಿಮಾಗಳು ಇವರ ಕೈ ಹಿಡಿಯಲಿಲ್ಲ. ಹೀಗಾಗಿ ನಟನೆಯಿಂದ ಸ್ವಲ್ಪ ಸಮಯ ದೂರಾನೇ ಉಳಿದುಬಿಟ್ಟಿದ್ದರು. ಇತ್ತೀಚೆಗಷ್ಟೇ ಸುನೀಲ್ ರಾವ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆಸಿಸಿ, ಸಿನಿಮಾ ಅಂತ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ. ಅದುವೇ ‘ವೀರ್ ಸಾವರ್ಕರ್’ ಬಯೋಪಿಕ್.ಸುನೀಲ್ ರಾವ್ ಇದೂವರೆಗೂ ವಿಭಿನ್ನ ಪಾತ್ರಗಳಲ್ಲಿ ಕಂಡಿದ್ದಾರೆ. ಕಥೆಯ ಆಯ್ಕೆ, ಅಭಿನಯ ಕಂಡು ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದೂ ಇವೆ. ಈಗ ಮತ್ತೊಮ್ಮೆ ಇಂತಹದ್ದೇ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿ, ಲೇಖಕ, ಸದ್ಯ ಭಾರೀ ಚರ್ಚೆಯಲ್ಲಿರುವ ‘ವೀರ್ ಸಾವರ್ಕರ್’ ಅವತಾರದಲ್ಲಿ ಸುನೀಲ್ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಬಯೋಪಿಕ್ ಸಿನಿಮಾಗೆ ಬೇಕಾಗಿರೋ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಇನ್ನೇನು ಅಧಿಕೃತವಾಗಿ ಈ ಸಿನಿಮಾ ಅನೌನ್ಸ್ ಆಗಬೇಕಿದೆಯಷ್ಟೇ.

‘ವೀರ್ ಸಾವರ್ಕರ್’ ಸಿನಿಮಾವನ್ನು ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’, ‘ಚೈತ್ರದ ಚಂದ್ರಮ’ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ರಾಧಾಕೃಷ್ಣ ‘ವೀರ್ ಸಾವರ್ಕರ್’ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 6 ತಿಂಗಳಿನಿಂದ ವೀರ್‌ ಸಾವರ್ಕರ್ ಬಗ್ಗೆ ಅಧ್ಯಯನ ಮಾಡಿ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅನುಭವವಿರೋ ರಾಧಾಕೃಷ್ಣ ‘ವೀರ್ ಸಾವರ್ಕರ್’ ಬಯೊಪಿಕ್ ಆನ್ನು ತೇರೆಮೇಲೆ ಹೇಗೆ ತರುತ್ತಾರೆ ಅನ್ನೋ ಕುತೂಹಲವಿದೆ.’ವೀರ್ ಸಾವರ್ಕರ್’ ಬಯೋಪಿಕ್ ಆರಂಭ ಯಾವಾಗ?ನಿರ್ದೇಶಕ ರಾಧಾಕೃಷ್ಣ ಸಾರ್ವಜನಿಕ ವಲಯದಲ್ಲಿರೋ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಬಹುತೇಕ ಲಾಕ್ ಆಗಿದ್ದು, ಮಾರ್ಚ್ 25ರಿಂದ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎಂದು ವರದಿಯಾಗಿದೆ. ಅಲ್ಲದೆ ಸುನೀಲ್ ರಾವ್ ಈ ಪಾತ್ರಕ್ಕಾಗಿ ನಿಧಾನವಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ‘ವೀರ್ ಸಾವರ್ಕರ್’ ಪಾತ್ರ ಮಾಡುವುದಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ.

ಇನ್ನು ಸುನೀಲ್ ರಾವ್ ಸ್ವಾತಂತ್ರ್ಯ ಹೋರಾಟಗಾರ ‘ವೀರ್ ಸಾವರ್ಕರ್’ ಅವತಾರವೆತ್ತಿದ್ರೆ, ಇವರೊಂದಿಗೆ ಸಾಯಿ ಕುಮಾರ್, ಅನುಪ್ರಭಾಕರ್, ರವಿಶಂಕರ್, ರಂಗಾಯಣ ರಘು ಸೇರಿದಂತೆ ಕನ್ನಡದ ಜನಪ್ರಿಯರ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಎನ್ ಚಕ್ರಪಾಣಿ ನಿರ್ಮಾಣಕ್ಕೆ ಮುಂದಾಗಿದ್ದರೆ, ಕೆ ಎಸ್ ಚಂದ್ರಶೇಖರ್ ಛಾಯಾಗ್ರಾಹಕರಾಗಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶಕರಾಗಿ, ಸ್ಯಾಮ್ ಸಂಗೀತ ನಿರ್ದೇಶಕರಾಗಿ ‘ವೀರ್ ಸಾವರ್ಕರ್’ ಬಯೋಪಿಕ್‌ನಲ್ಲಿ ಕೆಲಸ ಮಾಡಲಿದ್ದಾರೆ.

ವೀರ್‌ ಸಾವರ್ಕರ್’ ಹಿನ್ನೆಲೆಯೇನು?

ವಿನಾಯಕ ದಾಮೋದರ್‌ ಸಾವರ್ಕರ್ ಮೇ 28 1883ರಲ್ಲಿ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಭಾಗ್ರೂರ್‌ ಎಂಬ ಗ್ರಾಮದಲ್ಲಿ ಜನನಿಸಿದ್ದರು. ಬಾಲ್ಯದಲ್ಲಿ ಓದುವ ಅಭ್ಯಾಸದ ಜೊತೆಗೆ ಸ್ವಾತಂತ್ರ್ಯ ಹೋರಾಟದ ಕಡೆಗೂ ಒಲವು ಬೆಳೆಸಿಕೊಂಡಿದ್ದರು. ಅಲ್ಲದೆ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್‌ ಅವರಿಂದ ಪ್ರೇರಣೆ ಹೊಂದಿದ್ದರು. ತಿಲಕ್ ಅವರ ‘ಕೇಸರಿ’ ಪತ್ರಿಕೆಯ ಬರಹಗಳಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಸಕ್ತಿ ಹೆಚ್ಚಾಗಿತ್ತು. ಬಳಿಕ ಕಾನೂನು ಪದವಿಗಾಗಿ ಲಂಡನ್‌ಗೆ ಹೋಗಿದ್ದ, ಸಾವರ್ಕರ್ ಸ್ವಾತಂತ್ರ್ಯದ ಬಗ್ಗೆ ಹೋರಾಟವನ್ನು ಮುಂದುವರೆಸಿದ್ದರು.

ಲಂಡನ್‌ನಲ್ಲಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯನ್ನು ಆರಂಭಿಸಿದ್ದರು. ಹೀಗಾಗಿ ಬ್ರಿಟಿಷ್ ಸರ್ಕಾರ 1910 ರಂದು ಲಂಡನ್‌ನಲ್ಲಿಯೇ ಅವರನ್ನು ಬಂಧಿಸಿತು. ಹಡುಗಿನಿಂದ ಜಿಗಿದು ಫ್ರೆಂಚ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಳಿಕ ಸಾವರ್ಕರ್‌ ಅವರನ್ನು ಅಂಡಮಾನ್‌ನ ಕಾಲೇಪಾನಿನಲ್ಲಿನ ಜೈಲಿನಲ್ಲಿ ಇಟ್ಟು ಚಿತ್ರಹಿಂಸೆ ನೀಡಲಾಗಿತ್ತು. 1937 ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ 1948ರಲ್ಲಿ ಗಾಂಧಿ ಹತ್ಯೆ ಆಗಿತ್ತು. ಅದರಲ್ಲಿ ‘ವೀರ್ ಸಾವರ್ಕರ್’ ಕೈವಾಡವಿದೆ ಎಂದು ಆರೋಪ ಮಾಡಲಾಗಿತ್ತು. ಬಳಿಕ ನಿರಪರಾಧಿ ಎಂದು ಸಾಬೀತಾಗಿತ್ತು. ಅಲ್ಲಿಂದ ‘ವೀರ್ ಸಾವರ್ಕರ್’ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಇವರ ಬಯೋಪಿಕ್ ಸಿನಿಮಾ ಕನ್ನಡದಲ್ಲಿ ನಿರ್ಮಾಣ ಆಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

35ನೇ ದಿನಕ್ಕೆ ಕಾಲಿಟ್ಟ ಕ್ರಾಂತಿ; ಮೈಸೂರಿನಲ್ಲಿ 2, ತುಮಕೂರಿನಲ್ಲಿ 1 ಚಿತ್ರಮಂದಿರ;

Wed Mar 1 , 2023
ಕಳೆದ ಜನವರಿ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಇಂದು ( ಮಾರ್ಚ್ 1 ) 35 ದಿನಗಳನ್ನು ಪೂರೈಸಿದೆ. ಬಿಡುಗಡೆಯ ದಿನ 12 ಕೋಟಿ ಗಳಿಸುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇನ್ನು ಸಾಮಾನ್ಯ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ದರ್ಶನ್ ಸ್ಟಾರ್‌ಡಂನಿಂದಾಗಿ ಸೇಫ್ ಆಗಿದೆ. ಯಜಮಾನ ಚಿತ್ರದ ಮೂಲಕ […]

Advertisement

Wordpress Social Share Plugin powered by Ultimatelysocial