ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಮುಖಂಡ ಹಾಸನ ಜಿಲ್ಲೆಯ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣನವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಪಕ್ಷದ ವತಿಯಿಂದ ಕ್ರೇನ್ ಮೂಲಕ ಹೂವಿನ ಹಾರವನ್ನು ಹಾಕಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದಂತಹ ಪ್ರಜ್ವಲ್ ರೇವಣ್ಣ ರಮೇಶ್ ಕುಮಾರ್ ಮಾತುಗಳನ್ನು ಯಾರು ನಂಬಬೇಡಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಶುದ್ಧ ಕುಡಿಯುವ ನೀರನ್ನು ಕೊಡುತ್ತೇವೆಂದು ಕೊಳಚೆ ನೀರನ್ನು ತಂದುಕೊಟ್ಟರು ಕೋಲಾರಕ್ಕೆ ಸಿದ್ದರಾಮಯ್ಯ ಬಂದರೆ ಅಭಿವೃದ್ಧಿಯಾಗುತ್ತದೆಂದು ಶಾಸಕ ರಮೇಶ್ ಕುಮಾರ್ ಹೇಳುತ್ತಾರೆ ತಾವು ಎರಡು ಬಾರಿ ಶಾಸಕರಾಗಿದ್ದೀರಾ ಸಚಿವರಾಗಿದ್ದೀರಾ ಸಿದ್ದರಾಮಯ್ಯ ಬಂದರೆ ಅಭಿವೃದ್ಧಿಯಾಗುವುದಾದರೆ ತಾವು 10 ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಾ ಎಂದು ಶಾಸಕ ರಮೇಶ್ ಕುಮಾರ್ ಅವರನ್ನು ಪ್ರಜ್ವಲ್ ರೇವಣ್ಣ ಪ್ರಶ್ನಿಸಿ ಬಿಜೆಪಿ ಹಾಗೂ ಕಾಂಗ್ರೆಸ್ನವರಿಗೆ ಹಸಿರು ಶಾಲು ಚುನಾವಣಾ ಸಂದರ್ಭದಲ್ಲಿ ಕಾಣಿಸುವುದು ಹೊರತುಪಡಿಸಿದರೆ ಉಳಿದ ಸಮಯದಲ್ಲಿ ರೈತರಾಗಳಿ, ಹಸಿರು ಶಾಲು ಆಗಲಿ ನೆನಪಾಗುವುದಿಲ್ಲ ಎರಡು ಪಕ್ಷಗಳ ನಾಯಕರು ಈಗಾಗಲೇ ಚುನಾವಣಾ ಪ್ರಚಾರಗಳನ್ನು ಕೈಗೊಂಡಿದ್ದಾರೆ ರೈತರಿಗೆ ಯಾವುದೇ ಭರವಸೆಗಳನ್ನು ಮಾತ್ರ ನೀಡುತ್ತಿಲ್ಲ ಆದರೆ ರೈತರಿಗೆ ಭರವಸೆಗಳನ್ನು ನೀಡುತ್ತಿರುವದು ಮುಖ್ಯಮಂತ್ರಿಗಳಾದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಿರುವುದು ಮುಂದೆ ಅಧಿಕಾರಿಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ತರುವ ಬಗ್ಗೆ ಭರವಸೆ ನೀಡುತ್ತಿರುವ ಏಕೈಕ ಪಕ್ಷ ಅಥವಾ ಏಕೈಕ ವ್ಯಕ್ತಿಯಂದರೆ ಅದು ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಮಾತ್ರವೆಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ.

Tue Jan 17 , 2023
ಸಿಮೆಂಟ್ ಇಟ್ಟಿಗೆಗಳು ತುಂಬಿದ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ನಲ್ಲಿ ಇದ್ದಂತಹ ವ್ಯಕ್ತಿಗಳಿಗೆ,ದ್ವಿಚಕ್ರ ವಾಹನ ಸವಾರರಿಗೆ ಗಂಭೀರವಾಗಿ ಗಾಯಗಳಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಗಾಯಲುಗಳನ್ನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೆಲ ವ್ಯಕ್ತಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಕಾರಣದಿಂದಾಗಿ ಕೋಲಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಅಪಘಾತಕ್ಕೆ […]

Advertisement

Wordpress Social Share Plugin powered by Ultimatelysocial