ವಿಜಯಾ ದಬ್ಬೆ ಪ್ರಾಧ್ಯಾಪಕರು.

 

ವಿಜಯಾ ದಬ್ಬೆ ಪ್ರಾಧ್ಯಾಪಕರಾಗಿ ಮತ್ತು ಬರಹಗಾರ್ರರಾಗಿ ಪ್ರಸಿದ್ಧರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ವಿಜಯಾ ದಬ್ಬೆ ಅವರು 2018 ವರ್ಷದ ಫೆಬ್ರವರಿ 23 ರಂದು ಈ ಲೋಕವನ್ನಗಲಿದರು.1951ರ ಜೂನ್ 1ರಂದು ಬೇಲೂರಿನಲ್ಲಿ ಜನಿಸಿದ ವಿಜಯಾ ದಬ್ಬೆ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಪುಸ್ತಕ ಪ್ರಕಟಣೆ ಮತ್ತು ಪತ್ರಿಕಾ ಸಂಪಾದಕರಾಗಿ ಮತ್ತು ವಿಶಿಷ್ಟ ಲೇಖಕರಾಗಿ ವಿವಿಧಮುಖಿ ಸೇವೆ ಸಲ್ಲಿಸಿದ್ದರು.ಉದಯೋನ್ಮುಖ ಕವಯತ್ರಿಯಾಗಿ ಪ್ರತಿಷ್ಟಿತ ವರ್ಧಮಾನ ಪ್ರಶಸ್ತಿ ಗಳಿಕೆಯಿಂದ ಮೊದಲ್ಗೊಂಡು, ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಅತ್ತಿಮಬ್ಬೆ ಪ್ರಶಸ್ತಿ, ಹಾಗೂ ಇನ್ನಿತರ ಗೌರವಗಳನ್ನು ಗಳಿಸಿದ್ದ ವಿಜಯಾ ದಬ್ಬೆ ಅವರದ್ದು ತಮ್ಮ ಸಾಹಿತ್ಯ ಮೌಲ್ಯದಂತೆಯೇ ಬದುಕನ್ನೂ ನಡೆಸಿದ್ದ ಹಿರಿಮೆಯುಳ್ಳ ಬದುಕು ಎಂಬುದು ಅವರನ್ನು ಬಲ್ಲ ಬಹುತೇಕರ ಆಪ್ತ ಧ್ವನಿ. ವಿದ್ಯಾರ್ಥಿ ಜೀವನದ ದೆಸೆಯಲ್ಲೇ ಮಹಿಳಾ ಪರ ಚಳುವಳಿಗಳ ನೇತೃತ್ವ ವಹಿಸಿ ಅವರು ಮೂಡಿಸಿದ ಜಾಗೃತಿ ಅನೇಕ ಕಡೆಗಳಲ್ಲಿ ಪ್ರತಿಧ್ವನಿ ಕಂಡಿತ್ತು. ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲಿಕ್ಕಾಗಿ ಅನೇಕರಿಗೆ ತಾವೇ ಬೆಂಗಾವಲಾಗಿ ನಿಂತು, ಮುಂದೆ ಬರಲು ನೀರೆರೆದರು.
ಇರುತ್ತವೆ (1975), ನೀರು ಲೋಹದ ಚಿಂತೆ (1985), ತಿರುಗಿ ನಿಂತ ಪ್ರಶ್ನೆ (1995) ಮುಂತಾದವು ವಿಜಯ ದಬ್ಬೆ ಅವರ ಕವನ ಸಂಕಲನಗಳು. ಉರಿಯ ಚಿಗುರು, ಉತ್ಕಲೆ ಪ್ರವಾಸ ಕಥನಗಳು. ನಯಸೇನ, ನಾಗಚಂದ್ರ ಒಂದು ಅಧ್ಯಯನ (ಪಿಎಚ್.ಡಿ ಪ್ರಬಂಧ), ಹಿತೈಷಿಯ ಹೆಜ್ಜೆಗಳು, ಸಾರಸರಸ್ವತಿ ಇವರ ಸಂಶೋಧನಾ ಕೃತಿಗಳು. ಹಿತೋಫಿಯಾ ಹೆಜ್ಜೆಗಳು , ಮಹಿಳಾಸಾಹಿತ್ಯ ಸಮಾಜ, ನಾರಿ ದಾರಿ ದಿಗಂತ(1977), ಮಹಿಳೆ ಮತ್ತು ಮಾನವತೆ, ಸಂಪ್ರತಿ ಇವರ ಚಿಂತನಾಪೂರ್ಣ ವಿಮರ್ಶಾ ಕೃತಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸ.

Thu Feb 23 , 2023
ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತಿನ ಚಟುವಟಿಕೆಗಳಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದವರಾಗಿ ಸ್ಮರಣೀಯರಾಗಿದ್ದಾರೆ.ಶಿವಮೂರ್ತಿ ಶಾಸ್ತ್ರಿಗಳು 1903ರ ಫೆಬ್ರವರಿ 23ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಬಸವಯ್ಯಸ್ವಾಮಿ. ತಾಯಿ ನೀಲಮ್ಮ. ಶಾಸ್ತ್ರಿಗಳ ವಿದ್ಯಾಭ್ಯಾಸ ಅಪ್ಪರ್ ಸೆಕೆಂಡರಿಯವರೆಗೆ ತುಮಕೂರಿನಲ್ಲಿ ನಡೆಯಿತು. ಮುಂದೆ ಕರಿಬಸವ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಅಭ್ಯಾಸ ಮಾಡಿದರು. ಜೊತೆಗೆ ಸ್ವಪ್ರಯತ್ನದಿಂದ […]

Advertisement

Wordpress Social Share Plugin powered by Ultimatelysocial