‘ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ …’ ಪ್ರಕೃತಿ ಗೀತೆಗೆ ವಿಜಯಪ್ರಕಾಶ್​ ಕಂಠ

ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್​ ಪ್ರತೀ ವರ್ಷ ‘ಭೂಮಿ’ ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಸಾಮಾನ್ಯವಾಗಿ, ಇದೇ ಶೀರ್ಷಿಕೆಯಡಿ ಪ್ರತೀ ವರ್ಷ ಹಾಡುಗಳು ಮೂಡಿಬರುತ್ತಿದ್ದು, ಈ ಹಾಡುಗಳನ್ನು ದೇಶದ ಜನಪ್ರಿಯ ಗಾಯಕ-ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, ಕನ್ನಡದಲ್ಲಿ ಒಂದು ಹಾಡು ಮೂಡಿಬಂದಿದ್ದು, ‘ಭೂಮಿ 2022’ ಹೆಸರಿನ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್​ ಧ್ವನಿಯಾಗಿದ್ದಾರೆ.
‘ದುನಿಯಾ’ ಎಂದು ಶುರುವಾಗುವ ಈ ಹಾಡಿಗೆ ವಿಜಯಪ್ರಕಾಶ್​ ಮತ್ತು ಸಲೀಮ್ ಮರ್ಚೆಂಟ್​ ಧ್ವನಿಯಾಗಿದ್ದಾರೆ. ‘ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ … ಕಲ್ಲುಗಳ ಮ್ಯಾಲೆ ಮಣ್ಣುಗಳ ಮ್ಯಾಲೆ ಪರಪಂಚ … ಗಾಳಿಯಾಗೇ ಭೂಮಿ ನಿಂತೈತೆ ಸೋಜಿಗ ನೋಡೋ … ಭೂಮಿಯಾಗೆ ಎಲ್ಲ ತುಂಬೈತೆ …’ ಎಂದು ಸಾಗುವ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ರಚಿಸಿದ್ದಾರೆ. ತೌಫೀಕ್​ ಖುರೇಷಿ ಅವರು ರಿದಮ್​ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಇತ್ತೀಚೆಗೆ ಈ ಹಾಡನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್​ ಬಿಡುಗಡೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಾಚರಣೆ ಹೇಗಿರುತ್ತೆ? – ಗೃಹ ಸಚಿವರಿಂದ ಬಂದೇ ಬಿಡ್ತು ಸೂಚನೆ.

Sat Dec 17 , 2022
ಈ ಭಾರಿ ಹೊಸ ವರ್ಷಾಚರಣೆಯನ್ನ ಜೋರಾಗಿ ಮಾಡೋದಕ್ಕೆ ಸಿಲಿಕಾಣ್‌ ಅಇಟಿ ಜನ ರೆಡಿಯಾಗಿದ್ದಾರೆ. ಕಳೆದ 2 ವರ್ಷದಿಂದ ಕೊರೋನಾ ಇದ್ದ ಕಾರಣ ಮೋಜು ಮಸ್ತಿಗೆ ಲಗಾಮು ಬಿದ್ದಿತ್ತು. ಕಳೆದ ವರ್ಷವೂ ಕೂಡ ಒಂದಿಷ್ಟು ಸಂಭ್ರಮಾಚರಣೆ ಮಿಸ್‌ ಆಗಿತ್ತು. ಆದರೆ ಈ ಈ ಭಾರಿ ಸಖತ್‌ ಎಂಜಾಯ್‌ ಮಾಡೋ ಹುಮ್ಮಸ್ಸಿನಲ್ಲಿದ್ದಾರೆ. ಹೊಸ ವರ್ಷಾಚರಣೆ ಹಿನ್ನಲೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸರ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ […]

Advertisement

Wordpress Social Share Plugin powered by Ultimatelysocial