ವಿಶ್ವನಾಥನ್ ಆನಂದ್ ವಿಶ್ವದ ಮಹಾನ್ ಚದುರಂಗದ ಆಟಗಾರಲ್ಲೊಬ್ಬರು.

 

ವಿಶ್ವನಾಥನ್ ಆನಂದ್ ತಮಿಳ್ನಾಡಿನ ಮಯಿಲದುತಿರೈ ಎಂಬ ಪುಟ್ಟ ಗ್ರಾಮದಲ್ಲಿ 1969ರ ಡಿಸೆಂಬರ್ 11ರಂದು ಜನಿಸಿದರು. ಇವರ ತಂದೆ ವಿಶ್ವನಾಥನ್ ಐಯರ್ ಮತ್ತು ತಾಯಿ ಸುಶೀಲಾ. ತಮ್ಮ ತಾಯಿಯಿಂದ ಚೆಸ್ ಬಗ್ಗೆ ಆರಂಭಿಕ ಶಿಕ್ಷಣ ಪಡೆದ ಆನಂದರಿಗೆ ಕುಟುಂಬದ ಮಿತ್ರರಾದ ದೀಪಾ ರಾಮಕೃಷ್ಣನ್ ಎಂಬವರು ಚೆಸ್ ಬಗೆಗೆ ಹೆಚ್ಚಿನ ಪರಿಜ್ಞಾನವನ್ನು ನೀಡಿದರು. ಉತ್ತಮ ಚೆಸ್ ಪಟುವಾಗಿದ್ದ ಸೂಸಾನ್ ಪೋಲ್ಗಾರ್ ಎಂಬವರ ಜೊತೆಗೆ ನಡೆಸಿದ ನಿರಂತರ ಮಾತುಕತೆಗಳು ಚೆಸ್ ಆಟದ ಬಗ್ಗೆ ತಮಗಿರುವ ಪರಿಣತಿಯನ್ನು ಹೆಚ್ಚಿಸಿತು ಎನ್ನುತ್ತಾರೆ ಆನಂದ್.
ವಿಶ್ವನಾಥನ್ ಆನಂದರು ಆರನೇ ವರ್ಷದಲ್ಲಿಯೇ ಚೆಸ್ ಆಟವಾಡಲು ಪ್ರಾರಂಭಿಸಿದರು. ಅವರ ಕುಟುಂಬದವರು ಒಂದು ವರ್ಷದ ಮಟ್ಟಿಗೆ ಫಿಲಿಫೈನ್ಸ್ ದೇಶಕ್ಕೆ ಸ್ಥಳಾಂತರಗೊಂಡಾಗ ಅಲ್ಲಿನ ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಒಂದು ಕಾರ್ಯಕ್ರಮದಲ್ಲಿನ ವಿವಿಧ ಆಟಗಳು, ಕ್ವಿಜ್ ಮುಂತಾದ ಸ್ಪರ್ಧೆಗಳು ಬಾಲಕ ಆನಂದರನ್ನು ಬಹುವಾಗಿ ಆಕರ್ಷಿಸಿತು. ಆನಂದ್ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಅವರ ತಾಯಿ ಈ ಕಾರ್ಯಕ್ರಮದಲ್ಲಿರುತ್ತಿದ್ದ ಕೆಲವು ಪ್ರಶ್ನೆಗಳು, ಒಗಟುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಆ ಬಳಿಕ ಸಂಜೆ ಕುಳಿತು ಇಬ್ಬರೂ ಸೇರಿ ಆ ಸ್ಪರ್ಧೆಗಳಿಗೆ ಉತ್ತರ ಹುಡುಕುತ್ತಿದ್ದರು. ಹೀಗೆ ಕಳುಹಿಸಿದ ಉತ್ತರಗಳು ಸರಿಯಾಗಿದ್ದರೆ ಒಂದು ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಆನಂದರು ಸತತವಾಗಿ ಆ ಸ್ಫರ್ಧೆಗಳನ್ನು ಗೆಲ್ಲುತ್ತಾ ಹೋದರು. ಹೀಗೆ ನಿರಂತರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಬರುತ್ತಿದ್ದ ಆನಂದರನ್ನು ಕುರಿತು ಆ ಸ್ಪರ್ಧೆಯ ಆಯೋಜಕರು “ನಮ್ಮಲ್ಲಿರುವ ಎಲ್ಲಾ ಪುಸ್ತಗಳನ್ನೂ ನಿನಗೇ ಕೊಟ್ಟುಬಿಡುತ್ತೇವೆ. ದಯವಿಟ್ಟು ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಬೇಡ” ಎಂದು ತಮಾಷೆ ಮಾಡಿದ್ದನ್ನು ಆನಂದ್ ನಿರಂತರವಾಗಿ ನೆನಪುಮಾಡಿಕೊಳ್ಳುತ್ತಾರೆ.
ಮುಂದೆ ಚೆನ್ನೈಗೆ ವಾಪಸಾದ ವಿಶ್ವನಾಥನ್ ಆನಂದರು ಎಗ್ಮೋರ್‌ನಲ್ಲಿರುವ ಡಾನ್ ಬಾಸ್ಕೋ ಮೆಟ್ರಿಕ್ಯುಲೇಶನ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲೇ ರಾಷ್ಟ್ರೀಯ ಸಬ್‌ ಜ್ಯೂನಿಯರ್ ಚೆಸ್ ಚಾಂಪಿಯನ್‌ಷಿಪ್ ಪಡೆದ ಆನಂದ್, 1984ರ ವರ್ಷದಲ್ಲಿ ಇನ್ನೂ ತಮ್ಮ 15ನೆಯ ವಯಸ್ಸಿನಲ್ಲೇ ಚೆಸ್‌ನ ಅಂತರಾಷ್ಟ್ರೀಯ ಮಾಸ್ಟರ್ ಪದವಿ ಪಡೆಯುವ ಮೂಲಕ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 16ರ ಹರೆಯದಲ್ಲೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಪಟ್ಟ ಪಡೆದರು ಹಾಗೂ ಮತ್ತೆರಡು ವರ್ಷ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ವೇಗದ ಚೆಸ್ ಆಟಕ್ಕೆ ಹೆಸರಾಗಿರುವ ಆನಂದ್, ತಮ್ಮ ಹದಿನೆಂಟರ ಹರೆಯದಲ್ಲೇ (1987ರಲ್ಲಿ) ವಿಶ್ವ ಕಿರಿಯರ ಚೆಸ್ ಚಾಂಪಿಯನ್ ಪಟ್ಟ ಪಡೆದರು ಮತ್ತು ಈ ಸಾಧನೆ ಮಾಡಿದ ಮೊತ್ತ ಮೊದಲ ಭಾರತೀಯರೆನಿಸಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ಮೇರುನಟ

Fri Dec 23 , 2022
  ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ಮೇರುನಟರು. ದುರಂತ ಪಾತ್ರಗಳು, ಐತಿಹಾಸಿಕ ಮತ್ತು ಜನಸಾಮಾನ್ಯನ ಪಾತ್ರಗಳಲ್ಲಿ ಅವರ ತೆರೆಯ ಮೇಲೆ ಕಳೆಕಟ್ಟಿದ್ದ ರೀತಿ ಮನನೀಯವಾದುದು. ಒಂದು ರೀತಿಯಲ್ಲಿ ಅಂದಿನ ಕಾಲದ ನಾಯಕರುಗಳಲ್ಲಿ ಕಾಣುತ್ತಿದ್ದ ಅತಿಯಾದ ನಾಟಕೀಯತೆ, ಕತ್ತಿವರಸೆ ಮುಂತಾದ ಅತೀ ರಂಜನೀಯ ಗುಣಗಳಿಂದ ಹೊರಬಂದು ಸಹಜತೆಗೆ ಸಮೀಪವಿದ್ದ ಕಲಾವಿದರ ಸಾಲಿನಲ್ಲಿ ದಿಲೀಪ್ ವಿಜ್ರಂಭಿಸುತ್ತಾರೆ. 1944ರ ಅವಧಿಯಿಂದ 1996ರ ಅವಧಿಯಲ್ಲಿ ಅವರು ನಟಿಸಿದ ಚಿತ್ರಗಳು ಸುಮಾರು 60 ಮಾತ್ರ. ದಿಲೀಪ್ ಕುಮಾರ್ […]

Advertisement

Wordpress Social Share Plugin powered by Ultimatelysocial