ಏನಿದು ಪಿಎಂ ಪ್ರಣಾಮ ಯೋಜನೆ,

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಕೆಲವು ಯೋಜನೆಗಳಿಗೆ ನಿಧಿ ಹಂಚಿಕೆಯನ್ನು ಕೂಡಾ ಮಾಡಿದೆ.

ಈ ಪೈಕಿ ಪ್ರಧಾನ ಮಂತ್ರಿ ಪ್ರಣಾಮ ಯೋಜನೆ ಕೂಡಾ ಒಂದಾಗಿದೆ.

ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪರ್ಯಾಯ ರಸಗೊಬ್ಬರಗಳನ್ನು ತಮ್ಮ ರಾಜ್ಯದಲ್ಲಿ ಪರಿಚಯಿಸಲು ಸಹಕಾರಿಯಾದ ಯೋಜನೆ ಇದಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯು ಈ ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯನ್ನು ಜಾರಿ ಮಾಡಿದೆ. 2022ರ ಸೆಪ್ಟೆಂಬರ್ 7ರಂದು ರಾಬಿ ಕ್ಯಾಂಪೇನ್‌ಗಾಗಿ ನಡೆಸಲಾದ ನ್ಯಾಷನಲ್ ಕಾನ್ಫೆರೆನ್ಸ್‌ನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.

ಇಲಾಖೆಯ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯೇ ಅದರ ಪೂರ್ಣ ಹೆಸರಲ್ಲ. ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಆಲ್ಟರ್ನೇಟಿವ್ ನ್ಯುಟ್ರಿಯಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೆಜ್‌ಮೆಂಟ್ ಯೋಜನೆ ಎಂದಾಗಿದೆ. ಈ ಯೋಜನೆಯ ಬಗ್ಗೆ ಇಲ್ಲಿದೆ.

ಪಿಎಂ ಪ್ರಣಾಮ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯು ಪರ್ಯಾಯ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಲು ಆರಂಭ ಮಾಡಲಾಗಿದೆ. ಭೂಮಿಯನ್ನು ಕಾಪಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರದೇಶದಲ್ಲಿ ರೈತರು ಪರ್ಯಾಯ ರಸಗೊಬ್ಬರವನ್ನು ಬಳಸಲು ಪ್ರೋತ್ಸಾಹ ನೀಡಬೇಕು ಮತ್ತು ರಾಸಾಯನಿಕ ರಸಗೊಬ್ಬರದ ಮಿತ ಬಳಕೆಯ ಅರಿವನ್ನು ಕೂಡಾ ಮೂಡಿಸಬೇಕು ಎಂಬುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ

* ರಾಸಾಯನಿಕ ರಸಗೊಬ್ಬರದ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವುದು ಯೋಜನೆಯ ಗುರಿಯಾಗಿದೆ. 2022-2023ರ ಹಣಕಾಸು ವರ್ಷದಲ್ಲಿ ಸಬ್ಸಿಡಿಯನ್ನು ಶೇಕಡ 39ರಷ್ಟು ಏರಿಸಿ, 2.25 ಲಕ್ಷ ಕೋಟಿ ರೂಪಾಯಿಷ್ಟು ಮಾಡುವ ಉದ್ದೇಶವನ್ನು ಹೊಂದಿದೆ. ಈ ಹಿಂದಿನ ವರ್ಷ 1.62 ಲಕ್ಷ ಕೋಟಿ ರೂಪಾಯಿ ಆಗಿತ್ತು.
* ರಾಸಾಯನಿಕ ರಸಗೊಬ್ಬರದ ಬಳಕೆಗೆ ಅಧಿಕ ಉತ್ತೇಜನ ನೀಡದಿರುವುದು ಈ ಯೋಜನೆಯ ಗುರಿಯಾಗಿದೆ.

ಯೋಜನೆಯ ಪ್ರಯೋಜನಗಳೇನು?

* ಈ ಯೋಜನೆಯು ಕಡಿಮೆ ರಾಸಾಯನಿಕ ರಸಗೊಬ್ಬರವನ್ನು ಬಳಸುವಂತೆ ಅರಿವುದು ಮೂಡಿಸುತ್ತದೆ.
* ಪರ್ಯಾಯ ಪೋಷಕಾಂಶಗಳು ಮತ್ತು ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುತ್ತದೆ.
* ಮಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ರಾಸಾಯನಿಕ ರಸಗೊಬ್ಬರದ ಬಳಕೆ ಮಾಡಬಾರದು ಎಂಬ ಅರಿವನ್ನು ರೈತರಲ್ಲಿ ಮೂಡಿಸಲಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ;

Thu Feb 2 , 2023
ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಣಗಳೇನು, ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ.ಉದ್ಯಮ   ಆರಂಭಿಸಿ ಯಶಸ್ಸು ಕಾಣಬೇಕೆಂದು ಹಂಬಲಿಸುವ ಬಡ ಮಹಿಳೆಯರಿಗಾಗಿ   ಸರ್ಕಾರ ಆರಂಭಿಸಿರುವ ಯೋಜನೆಯೇ ‘ಉದ್ಯೋಗಿನಿ ಸ್ಕೀಮ್  ಈ ಯೋಜನೆಯಡಿ ಮಹಿಳೆಯರು 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ […]

Advertisement

Wordpress Social Share Plugin powered by Ultimatelysocial