ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಲು ಕಠೋರ ನಿರ್ಧಾರ ಕೈಗೊಂಡ ತಂದೆ.!

ಬೆಂಕಿಯಿಂದ ತನ್ನ ಮೂರು ವರ್ಷದ ಮಗುವನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆಯುವ ಎದೆಝಲ್ ಎನಿಸುವ ವಿಡಿಯೋ ವೈರಲ್ ಆಗಿದೆ. ಅಮೇರಿಕದ ನ್ಯೂಜೆರ್ಸಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ವೇಗವಾಗಿ ಹಬ್ಬುತ್ತಿದ್ದ ಬೆಂಕಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ರಕ್ಷಣೆಗಾಗಿ ತನ್ನ ಚಿಕ್ಕ ಮಗನನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದತ್ತ ಎಸೆದಿದ್ದು, ನಂತರ ಆ ವ್ಯಕ್ತಿಯನ್ನು ಸಹ ರಕ್ಷಿಸುವ ವಿಡಿಯೋ ವೈರಲ್ ಆಗಿದೆ.ಸೌತ್ ಬ್ರನ್ಸ್‌ವಿಕ್‌ನ ಸೌತ್ ರಿಡ್ಜ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 8:15 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಹಿಂಭಾಗದ ಎರಡನೇ ಮತ್ತು ಮೂರನೇ ಮಹಡಿಯಿಂದ ಜ್ವಾಲೆ ಕಾಣಿಸಿದೆ.‌ಬೆಂಕಿಯ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದಾರೆ. ಮಗುವಿನೊಂದಿಗೆ ರಕ್ಷಣೆಗೆ ಹಾತೊರೆಯುತ್ತಿದ್ದ ವ್ಯಕ್ತಿಯನ್ನು ಕಂಡ ಅಧಿಕಾರಿಗಳು ಮಗುವನ್ನು ತಮ್ಮ‌ಕೈಗೆ ಹಾಕುವಂತೆ ಸೂಚಿಸಿದರು. ಆ ಪ್ರಕಾರ ಆತನು ಮಗುವನ್ನು ಆತ ಎರಡನೇ ಮಹಡಿಯಿಂದ ಕೆಳಕ್ಕೆ ಬಿಡುತ್ತಾನೆ. ಬಾಡಿ ಕ್ಯಾಮರಾದಲ್ಲಿ ರಕ್ಷಣಾ ಪ್ರಕ್ರಿಯೆ ಸೆರೆಯಾಗಿದೆ.ತಂದೆ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಿದ್ದು, ತಕ್ಷಣ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಲ್ಲಿ ಐವತ್ತು ಜನರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಪ್ರಯೋಜನಗಳಿಗಾಗಿ ಅಲೋವೆರಾ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ

Sun Mar 13 , 2022
ಲೋಳೆಸರ , ಪುರಾತನ ಔಷಧೀಯ ಸಸ್ಯ, ಅದರ ಚಿಕಿತ್ಸಕ ಗುಣಲಕ್ಷಣಗಳಿಗಾಗಿ ಜಗತ್ತಿನಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ, ಆದರೆ ಇದು ಶತಮಾನಗಳಿಂದಲೂ ಇದೆ ಮತ್ತು ಹಲವಾರು ಸಂಸ್ಕೃತಿಗಳಲ್ಲಿ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈಜಿಪ್ಟಿನ ರಾಣಿಯರಾದ ನೆಫೆರ್ಟಿಟಿ ಮತ್ತು ಕ್ಲಿಯೋಪಾತ್ರ ಇದನ್ನು ತಮ್ಮ ಸೌಂದರ್ಯ ಕಟ್ಟುಪಾಡುಗಳಿಗಾಗಿ ಬಳಸುತ್ತಿದ್ದರು ಮತ್ತು ಹಿಂದಿನ ಕಾಲದಲ್ಲಿ ಸೈನಿಕರ ಗಾಯಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತಿತ್ತು. ಪೌಷ್ಟಿಕತಜ್ಞರು ಬಹಿರಂಗಪಡಿಸಿದ ಶಾಶ್ವತ ತೂಕ ನಷ್ಟಕ್ಕೆ 4 ಸರಳ ಭಿನ್ನತೆಗಳು ಅಲೋವೆರಾ […]

Advertisement

Wordpress Social Share Plugin powered by Ultimatelysocial