ತುಪ್ಪದ ಬೆಡಗಿ ನಟಿ ರಾಗಿಣಿ ಮದುವೆ ಯಾವಾಗ?

ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದು ಟಾಪ್ ಲಿಸ್ಟನಲ್ಲಿ ಇದ್ದ ನಟಿ ಅಂದ್ರೆ ಅದು ತುಪ್ಪದ ಬೆಡಗಿ ರಾಗಿಣಿ. ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ.

ಕಿಚ್ಚ ಸುದೀಪ್ ಮತ್ತು ರಾಗಿಣಿ ಜೋಡಿ ತೆರೆ ಮೇಲೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಎಲ್ಲಾ ಸ್ಟಾರ್ ಗಳ ಜೊತೆ ರಾಗಿಣಿ ನಟಿಸಿ ಸೈ ಅನಿಸಿಕೊಂಡು ತುಂಬಾ ಬ್ಯುಸಿ ನಟಿಯಾಗಿದ್ದರು.

ಇಷ್ಟೆಲ್ಲಾ ಆದ ಬಳಿಕ ಏಕಏಕಿ ದಪ್ಪ ಆಗಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ರು.ಮತ್ತೇ ತೂಕ ಇಳಿಸಿಕೊಂಡು ಸಿನಿಮಾ ಪ್ರಾಜೆಕ್ಟ್ ಗಳಳ್ಳಿ ಬ್ಯುಸಿ ಆಗಿದ್ದಾರೆ. ಅದರ ಜೊತೆ ಸಮಾಜಮುಖಿ ಕೆಲಸ ಮಾಡೋ ಆಸೆ ರಾಗಿಣಿಗಿದೆ. ಮಂಗಳಮುಖಿಯರ ಪಾಲಿಗೂ ಕೆಲವೊಂದು ವಿಚಾರದಲ್ಲಿ ಬೆಳಕಾಗಿದ್ದಾರೆ. ಇದೀಗ ಅವರ ಅಭಿಮಾನಿಗಳು ರಾಗಿಣಿ ಮದುವೆ ಆಗ್ತಾರಾ ಇಲ್ವಾ ಅನ್ನೋ ಪ್ರಶ್ನೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೇಳಲು ಶುರು ಮಾಡಿದ್ದಾರೆ.

ಇತ್ತೀಚಿಗೆ ರಾಗಿಣಿ ಮಹಿಳಾ ಪ್ರಧಾನ ಸಿನಿಮಾಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯವಾಗಿಯೂ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋ ಮದ್ವೆ ಯೋಚನೆ ಮಾಡಿರೋ ಸೂಚನೆಗಳು ಎಲ್ಲೂ ರಾಗಿಣಿ ಕಡೆಯಿಂದ ಕಾಣಿಸುತ್ತಿಲ್ಲ. ಏನೇ ಇದ್ದರೂ ಅಭಿಮಾನಿಗಳಿಗೆ ನೇರವಾಗಿ ಕನೆಕ್ಟ್ ಆಗಿರೋ ತುಪ್ಪದ ಬೆಡಗಿ ಅವರೇ ಮುಂದಿನ ಯೋಚನೆಗಳನ್ನ ಹೇಳಿಕೊಳ್ಳಬಹುದು.ಸಮಾಜಕ್ಕೆ ಬಡವರಿಗೆ ಆದಷ್ಟು ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಇರೋ ರಾಗಿಣಿಗೆ ಆ ದೇವರು ಹೆಚ್ಚು ಶಕ್ತಿ ಕೊಡಲಿ ಅನ್ನೋದೇ ನಮ್ಮ ಆಶಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಹೇಳಿಗೆಯನ್ನು ಸಹಿಸಲಾರದೆ ನಾನು ಈ ಹಿಂದೆ ಇದ್ದ ಪಕ್ಷದ ಸ್ಥಳಿಯ ನಾಯಕರೇ ನನ್ನ ಮನೆಯ ಮೇಲೆ ಕಲ್ಲು ಹೊಡೆಸಿದ್ರು.

Mon Feb 13 , 2023
ನನ್ನ ಹೇಳಿಗೆಯನ್ನು ಸಹಿಸಲಾರದೆ ನಾನು ಈ ಹಿಂದೆ ಇದ್ದ ಪಕ್ಷದ ಸ್ಥಳಿಯ ನಾಯಕರೇ ನನ್ನ ಮನೆಯ ಮೇಲೆ ಕಲ್ಲು ಹೊಡೆಸಿದ್ರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮತ್ತು ವಿಧಾನಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ರಾಜಾಹುಲಿ ದಿನೇಶ್ ಬಹಿರಂಗ ಸಭೆಯಲ್ಲಿ ಆರೋಪ ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಬಳಿ ಶ್ರೀ ಗವಿರಂಗನಾಥ ಶ್ರೀ ಕ್ಷೇತ್ರದಲ್ಲಿ ತಾಪಂ ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಬೃಹತ್ ಸ್ವಾಭಿಮಾನಿಸಮಾವೇಶ […]

Advertisement

Wordpress Social Share Plugin powered by Ultimatelysocial