ಜನತಾ ಬಜಾರ ಸುಪರ್ ಮಾರುಕಟ್ಟೆ ಓಪನ್ ಯಾವಾಗ..? ಕಾಯ್ದು ಕುಳಿತ ವ್ಯಾಪಾರಸ್ಥರು.

ಹುಬ್ಬಳ್ಳಿ: ಅದು ವಾಣಿಜ್ಯ ನಗರಿ ಪ್ರಮುಖ ವ್ಯಾಪಾರ ಸ್ಥಳ ಜನತಾ ಬಜಾರ್ ಈ ಮಾರುಕಟ್ಟೆಯನ್ನು ನಂಬಿಕೊಂಡು ಅದೆಷ್ಟೋ ವ್ಯಾಪಾರಸ್ಥರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದ್ರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಪರ್ ಮಾರುಕಟ್ಟೆ ಕಟ್ಟಿದ್ದಾರೆ. ಕಾಮಗಾರಿ ಮುಗಿದ್ರೂ ಕೂಡ ಇನ್ನೂವರೆಗೂ ಮಳಿಗೆಗಳು ಹಂಚಿಕೆಯಾಗಿಲ್ಲ….

ಹೌದು,,,, ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸಿಟಿ ಅಡಿಯಲ್ಲಿ, ಹುಬ್ಬಳ್ಳಿ ಜನತಾ ಬಜರಾದಲ್ಲಿ 18.35 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನೂರಕ್ಕೂ ಹೆಚ್ವು ಮಳಗಿಯನ್ನು ಕಟ್ಟಿದ್ದಾರೆ. ಆದ್ರೆ ಇನ್ನೂವರೆಗೂ ಹಂಚಿಕೆ ಮಾಡಿಲ್ಲ. 2019 ರಲ್ಲಿ ಕಾಮಗಾರಿ ಆರಂಭವಾಗಿದ್ದ 2021 ರಲ್ಲಿ ಮುಕ್ತಾಯವಾಗಬೇಕಿತ್ತು. ಆದ್ರೆ ಕೊರೊನಾದಿಂದಾಗಿ ತಡವಾಗಿದೆ. ಸಧ್ಯ ಕಾಮಗಾರಿ ಎಲ್ಲವೂ ಮುಗದಿದ್ದು ಈ ಅಧಿಕಾರಿಗಳು ಯಾಕೆ ಮಳಿಗೆಯನ್ನು ಹಂಚಿಕೆ ಮಾಡುತ್ತಿಲ್ಲ. ಇಲ್ಲಿನ ವ್ಯಾಪಾರಸ್ಥರು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪಾಲಿಕೆ ಆಯುಕ್ತ ಬಿ. ಗೋಪಾಲಕೃಷ್ಣ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದಾರೆ. ಆದ್ರೆ ಯಾರೂ ಕೂಡ ಕ್ಯಾರೆ ಎನ್ನುತ್ತಿಲ್ಲ… ಈ ಬಗ್ಗೆ ವ್ಯಾಪಾರಸ್ಥರು ಹೇಗೆಲ್ಲ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ನಲ್ಲಿ ಹೇಳಬೇಕೆಂದ್ರೆ ಎಲ್ಲರ ಅನುಕೂಲಕ್ಕೆಂದು ಈ ಮಾರುಕಟ್ಟೆಯನ್ನು ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಹಂಚಿಕೆ ಮಾಡಿ ಕೊಡಬೇಕಾಗಿದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹಾಸನ ಮಿಕ್ಸಿ ಸ್ಫೋಟದ ಆರೋಪಿ ಅರೆಸ್ಟ್‌

Wed Jan 4 , 2023
  ಹಾಸನದ ಕೊರಿಯರ್‌ ಅಂಗಡಿಯಲ್ಲಿ ಕಳೆದ ಡಿಸೆಂಬರ್‌ ೨೬ರಂದು ಸಂಭವಿಸಿದ ಮಿಕ್ಸಿ ಸ್ಫೋಟ ಪ್ರಕರಣದ ಪ್ರಧಾನ ಆರೋಪಿ ಅನೂಪ್‌ ಕುಮಾರ್‌ನನ್ನು ಬಂಧಿಸಲಾಗಿದೆ. ಆತನನ್ನು ನೆಲಮಂಗಲ ಬಳಿ ಬಂಧಿಸಿದ್ದು, ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.ಇದರ ಜತೆಗೆ ಆತ ಈ ಕೃತ್ಯವನ್ನು ಯಾಕೆ ಮಾಡಿದ್ದ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ.ಹಾಸನದ ವಿಚ್ಛೇದಿತ ಮಹಿಳೆ ವಸಂತಾಗೆ […]

Advertisement

Wordpress Social Share Plugin powered by Ultimatelysocial