ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ.?

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ?ನಿತ್ಯ ಜಿಮ್‌, ವ್ಯಾಯಾಮ ಮಾಡುವವರು ಕೆಲವು ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದುಕೊಂಡರೆ ಅಥವಾ ಅದನ್ನು ನಿಲ್ಲಿಸಿದರೆ ಅವರು ವಿಪರೀತ ದಪ್ಪವಾಗುವುದನ್ನು ನೀವು ಕಂಡಿರಬಹುದು.ಇದಕ್ಕೆ ಮುಖ್ಯ ಕಾರಣ ಅವರಿಗೆ ಹಸಿವಾಗುವುದು. ನಿಯಮಿತವಾಗಿ ನಡೆಯುತ್ತಿದ್ದ ದೇಹದ ವ್ಯಾಯಾಮ ನಿಂತ ಕಾರಣ ಹೊಟ್ಟೆ ವಿಪರೀತ ಹಸಿದುಕೊಳ್ಳುತ್ತದೆ. ಪರಿಣಾಮ ಅವರು ಹೆಚ್ಚು ತಿಂದು ಕೊಬ್ಬು ಬೆಳೆಯುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದ ಹಸಿವಿನ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.ವ್ಯಾಯಾಮ ಮಾಡಿದಾಗ ಹೆಚ್ಚು ಬೆವರುವುದರಿಂದ ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಇದರಿಂದ ಹಸಿವು ಸಹಜವಾಗಿಯೇ ಕಡಿಮೆಯಾಗುತ್ತದೆ. ವ್ಯಾಯಾಮ ಇಲ್ಲದಾಗ ಹಸಿವು ಹೆಚ್ಚಲು ಇದೂ ಒಂದು ಕಾರಣ.ವ್ಯಾಯಾಮ ಮಾಡದಿರುವಾಗ ದೇಹ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವಂತೆ ಉತ್ತೇಜಿಸುತ್ತದೆ ಎನ್ನುತ್ತದೆ ಇತ್ತೀಚಿನ ಸಂಶೋಧನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ.

Mon Feb 27 , 2023
ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ.ನಾವು ತಿನ್ನುವ ಆಹಾರ, ಜೀವನ ಪದ್ಧತಿ ಇವೆಲ್ಲದರ ಕಾರಣದಿಂದ ದೇಹದಲ್ಲಿ ಟಾಕ್ಸಿನ್ ಹೆಚ್ಚಾಗುತ್ತದೆ.ಆಗಾಗ ನಮ್ಮ ದೇಹವನ್ನು ಡಿಟಾಕ್ಸಿಫಿಕೆಷನ್ ಮಾಡುತ್ತಿರಬೇಕು,ನಮ್ಮ ರಕ್ತವನ್ನು ಶುದ್ದೀಕರಿಸಿದರೆ ನಮ್ಮ ಕಿಡ್ನಿ, ಲಿವರ್, ಹೃದಯ ಎಲ್ಲವೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಈ ರಕ್ತವನ್ನು ನೈಸರ್ಗಿಕವಾಗಿ ಹೇಗೆ ಶುದ್ದೀಕರಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ […]

Advertisement

Wordpress Social Share Plugin powered by Ultimatelysocial