ಹೋಳಿ ಹಬ್ಬದೊಂದಿಗೆ ದೇಶದಲ್ಲಿ ಬಿಸಿಲ ಬೇಗೆ ಪ್ರಾರಂಭವಾಗಿದೆ.

ವದೆಹಲಿ: ಹೋಳಿ ಹಬ್ಬದೊಂದಿಗೆ ದೇಶದಲ್ಲಿ ಬಿಸಿಲ ಬೇಗೆ ಪ್ರಾರಂಭವಾಗಿದೆ. ದೇಶದ ಹಲವೆಡೆ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಶೀಘ್ರವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಆರ್ಭಟ ಶುರುವಾಗಲಿದೆ. ಈ ಋತುವಿನಲ್ಲಿ ಶಾಖದಿಂದ ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ, ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಹ ನಿಮ್ಮನ್ನು ಕಾಡಲು ಶುರುಮಾಡುತ್ತವೆ.

ಈ ಸಮಸ್ಯೆ ತಪ್ಪಿಸಲು ಇಂದು ನಾವು ನಿಮಗೆ 5 ನೈಸರ್ಗಿಕ ಪಾನೀಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳನ್ನು ಸೇವಿಸುವ ಮೂಲಕ ನೀವು ಬೇಸಿಗೆಯಲ್ಲೂ ಫಿಟ್ ಆಗಿರಬಹುದು.

ನಿಂಬೆ ಪಾನಕ: ಬೇಸಿಗೆಯಲ್ಲಿ ದೇಹವನ್ನು ಸದೃಢವಾಗಿಡಲು ನಿಂಬೆ ಪಾನಕರಾಮಬಾಣ. ವಿಟಮಿನ್-ಸಿ ನಿಂಬೆಯಲ್ಲಿ ಸಾಕಷ್ಟು ಕಂಡುಬರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಮಲಬದ್ಧತೆ ಮತ್ತು ಹೊಟ್ಟೆಯ ಗ್ಯಾಸ್-ಆಸಿಡಿಟಿ ಸಮಸ್ಯೆ ಸಹ ನಿವಾರಿಸುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ.

ಮಜ್ಜಿಗೆ: ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿಯ ಸೇವನೆಯು ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಹೊಟ್ಟೆಯ ಶಾಖ ಶಾಂತಗೊಳ್ಳುತ್ತದೆ ಮತ್ತು ದೀರ್ಘಕಾಲದ ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ. ಪ್ರತಿದಿನ ಲಸ್ಸಿ ಕುಡಿಯುವುದರಿಂದ ಕರುಳನ್ನು ಸ್ವಚ್ಛಗೊಳಿಸಲು ಸಹಕಾರಿ. ಜೀರ್ಣಕ್ರಿಯೆ ಸುಧಾರಿಸುವಲ್ಲಿ ಇದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಕಬ್ಬಿನ ರಸ: ಕಬ್ಬಿನ ರಸವು ಬೇಸಿಗೆಯಲ್ಲಿ ಮಾರಾಟವಾಗುವ ಜನಪ್ರಿಯ ಪಾನೀಯ. ಇದನ್ನು ನೈಸರ್ಗಿಕ ಶಕ್ತಿ ವರ್ಧಕ ಪಾನೀಯವೆಂದು ಪರಿಗಣಿಸಲಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುವುದು ಮಾತ್ರವಲ್ಲದೆ ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ಸಹಕಾರಿ. ಪ್ರತಿದಿನ ಒಂದು ಲೋಟ ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.

ಬೇಲ್ ಪತ್ತರ್ ಜ್ಯೂಸ್: ಬೇಸಿಗೆಯಲ್ಲಿ ಬೆಲ್ ಪತ್ತರ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಹೊಟ್ಟೆಯ ಶಾಖ ಶಾಂತವಾಗಿ ದೇಹಕ್ಕೆ ತಂಪು ಸಿಗುತ್ತದೆ. ಬೇಲ್ ಪತ್ತರ್ ರಸವು ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಇದನ್ನು ಕುಡಿಯುವುದರಿಂದ ಜೀರ್ಣಾಂಗವ್ಯೂಹ ಆರೋಗ್ಯಪೂರ್ಣವಾಗುತ್ತದೆ ಮತ್ತು ಹಸಿವು ಚೆನ್ನಾಗಿರುತ್ತದೆ.

ತೆಂಗಿನ ನೀರು:ತೆಂಗಿನ ನೀರು ವರ್ಷದ 12 ತಿಂಗಳು ಮಾರಾಟವಾಗುವ ನೈಸರ್ಗಿಕ ಪಾನೀಯವಾಗಿದೆ. ಇದನ್ನು ನೈಸರ್ಗಿಕ ಶಕ್ತಿಯ ಉಗ್ರಾಣವೆಂದೂ ಕರೆಯುತ್ತಾರೆ. ಈ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆಯ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ತೆಂಗಿನ ನೀರು ಅನೇಕ ಪೋಷಕಾಂಶಗಳನ್ನು ಹೊಂದಿದೆ, ಇದು ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ.ಕೆ ಸುರೇಶ್ ನ ನಾನು ಸೋಲಿಸುತ್ತಿದ್ದೆ..

Sat Mar 11 , 2023
ಡಿ.ಕೆ ಸುರೇಶ್ ನ ನಾನು ಸೋಲಿಸುತ್ತಿದ್ದೆ.. ಮಾಜಿ ಶಾಸಕ ಸುರೇಶ್ ಗೌಡ ಉವಾಚ.. ಊರ್ಡಿಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿಕೆ.. ತುಮಕೂರು ಊರ್ಡಿಗೆರೆ ಗ್ರಾಮ.. ನನಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಬಿಜೆಪಿ ಟಿಕೆಟ್ ಸಿಕ್ಕಿತ್ತು.. ನಾನು ತುಮಕೂರು ಗ್ರಾಮಾಂತರ ಬಿಟ್ಟು ರಾಷ್ಟ್ರ ಜಾರಕಾರಣಕ್ಕೆ ಹೋಗುವುದಕ್ಕೆ ಮನಸಿರಿರ್ಲಿಲ್ಲ.. ಒಂದು ವೇಳೆ ನಾನು ಹೋಗಿದ್ರೆ ಡಿ.ಕೆ ಸುರೇಶ್ ವಿರುದ್ಧ ಗೆಲ್ತಿದ್ದೆ.. ಬಿ ಫಾರ್ಮ್ ನನ್ನ ಕೈಗೆ ಕೊಟ್ಟಿದ್ರು ಆದ್ರೆ ರಾತ್ರಿ 12ಗಂಟೆಗೆ ನಾನು ಬೇಡ […]

Advertisement

Wordpress Social Share Plugin powered by Ultimatelysocial