ಯಾದಗಿರಿ: ಡಿಜಿಟಲ್ ಸೇವೆ ವಾಹನಕ್ಕೆ ಚಾಲನೆ

ಯಾದಗಿರಿ: ‘ಜಿಲ್ಲೆಯ ಜನರ ಮನೆ ಬಾಗಿಲಿಗೆ ಡಿಜಿಟಲ್ ಸೇವೆಗಳನ್ನು ತಲುಪಿಸಿ. ಜನರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲು (ಸಿಎಸ್‌ಸಿ ) ಸಾಮಾನ್ಯ ಸೇವಾ ಕೇಂದ್ರಗಳು ಸಹಕಾರಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಹೇಳಿದರು.ಕಚೇರಿಯ ಆವರಣದಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಡೆಲ್ ಟೆಕ್ನಾಲಜೀಸ್, ಲರ್ನಿಂಗ್‌ ಫೌಂಡೇಶನ್ ಅಡಿಯಲ್ಲಿ ಹಾಗೂ ಡಿಜಿಟಲ್ ಇಂಡಿಯಾ ಕಾರ್ಯಕ್ರಮವಾದ ಸಾಮಾನ್ಯ ಸೇವಾ ಕೇಂದ್ರಗಳ ( ಸಿಎಸ್‌ಸಿ) ಯೋಜನೆಯ ಸಹಯೋಗದೊಂದಿಗೆ ಡಿಜಿಟಲ್ ಸೇವೆ ತಲುಪಿಸುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತ ಸರಕಾರದ ಸಾಮಾನ್ಯ ಸೇವಾ ಕೇಂದ್ರ ಕಾರ್ಯಕ್ರಮ ಗ್ರಾಮೀಣ ಜನತೆಗೆ ಸರಕಾರಿ, ಖಾಸಗಿ ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆಗಳನ್ನು ಒದಗಿಸುವ ಮುಂಚೂಣಿಯ ಸ್ಥಾನಗ ಳನ್ನಾಗಿ ಕೇಂದ್ರಗಳನ್ನು ರೂಪಿಸುವ ದೂರದೃಷ್ಟಿಯೊಂದಿಗೆ ಸಿಎಸ್ಸಿ ಕಾರ್ಯ ಕ್ರಮವನ್ನು ಪ್ರಾರಂಭಿಸಿದೆ ಎಂದರು.ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಸಿದ್ದು ಹರಸೂರ್ ಹಾಗೂ ತಿಮ್ಮಯ್ಯ ನಾಯಕ, ಬಸವಂತರಾಯ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುರುವಾರ ಲಘು ಮಳೆ ಮತ್ತು ಚಳಿಗಾಲದ ಚಳಿಯಿಂದ ಲಕ್ನೋ ಎಚ್ಚರಗೊಳ್ಳುತ್ತದೆ!

Thu Feb 3 , 2022
  ಲಕ್ನೋ ನಗರದ ನಿವಾಸಿಗಳು ಗುರುವಾರ ಬೆಳಿಗ್ಗೆ ಮೋಡ ಕವಿದ ಆಕಾಶದಿಂದ ಎಚ್ಚರಗೊಂಡರು, ಇದು ಚಳಿಗಾಲದ ತೀವ್ರ ಚಳಿಯಿಂದ ನಿರೂಪಿಸಲ್ಪಟ್ಟಿದೆ. ಇಂದು ನಸುಕಿನ ವೇಳೆಯಲ್ಲಿ ಅಲ್ಪ ಪ್ರಮಾಣದ ಮಳೆ, ಮಬ್ಬು ಮತ್ತು ಕಡಿಮೆ ತಾಪಮಾನವು ಹವಾಮಾನಕ್ಕೆ ಕಾರಣವಾಗಿದೆ. IMD ವರದಿಗಳ ಪ್ರಕಾರ, ಫೆಬ್ರವರಿ 4 ರವರೆಗೆ ಲಕ್ನೋದಲ್ಲಿ ಗುಡುಗು ಸಹಿತ ಈ ಶೀತ ಅಲೆ ಮತ್ತು ಮಳೆಯ ಕಾಗುಣಿತದ ಸಾಧ್ಯತೆಯಿದೆ. ಅದರ ನಂತರ ಆಕಾಶವು ಸ್ಪಷ್ಟವಾಗುತ್ತದೆ, ಪಾದರಸದಲ್ಲಿ ಮತ್ತಷ್ಟು ಕುಸಿತವು […]

Advertisement

Wordpress Social Share Plugin powered by Ultimatelysocial