ಬಿಜೆಪಿಗೆ ಯತ್ನಾಳ್​ ಶಾಕ್:

 

ಬೆಂಗಳೂರು: ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪಕ್ಷದ ವಿರುದ್ಧ ಮಾಡಿರುವ ಗಂಭೀರ ಆರೋಪ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಬೆಳವಣಿಗೆ ಪದ ರಾಜ್ಯ ಟಕದಲ್ಲಿ ಹಿಡಿತವಿಲ್ಲದ ನಾಯಕತ್ವವನ್ನು ಸಾಬೀತುಪಡಿಸುವ ಜತೆಯಲ್ಲೇ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಉಸ್ತುವಾರಿಯಿಂದ ಸಂಟನೆಯಲ್ಲಿ ಶಿಸ್ತು ದೂರಾಗಿ ಪದ ಕಾರ್ಯಕರ್ತರಿಗೂ ಇರುಸುಮುರಿಸು ಉಂಟು ಮಾಡಿದೆ.

ಪ್ರತಿ ನಿತ್ಯ ಒಂದಿಲ್ಲೊಂದು ಹೇಳಿಕೆಗಳಿಂದಲೇ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತ ಬಂದಿರುವ ಯತ್ನಾಳ್​, ರಾಮದುರ್ಗ ತಾಲೂಕಿನಲ್ಲಿ ಜರುಗಿದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಮಾತನಾಡುತ್ತ, ‘ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು’ ಎನ್ನುವ ಮೂಲಕ ಪ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಯತ್ನಾಳ್​ ಅವರ ಈ ಹೇಳಿಕೆಗೆ ಪಕ್ಷದ ನಾಯಕರು ನಿರುತ್ತರರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮೆತ್ತಿಕೊಂಡಿರುವ ಪರ್ಸೆಂಟೇಜ್​, ನೇಮಕಾತಿ ಹಗರಣಗಳ ಕಳಂಕದಿಂದ ಹೊರಬರಲು ಪರದಾಡುತ್ತಿರುವ ಸಂದರ್ಭದಲ್ಲಿಯೇ ಯತ್ನಾಳ್​ಅವರ ಈ ಆರೋಪ ನಾಯಕತ್ವಕ್ಕೆ ಕಪುಚುಕ್ಕೆಯನ್ನಿಟ್ಟಿದೆ. ಪ್ರತಿಪಕ್ಷಗಳ ಕೈಗೂ ಅಸ್ತ್ರ ದೊರಕಿಸಿಕೊಟ್ಟಿದೆ.

ಯತ್ನಾಳ್​ ಹೇಳಿದ್ದೇನು?: ‘ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು. ಮಕ್ಕಳಾ 2,500 ಕೋಟಿ ರೂ. ಅಂದ್ರೆ ಏನ್​ ಅಂತ ತಿಳಿದೀರಿ ಅಂತ ನಾನು ಅವರನ್ನು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್​ ಇಡೋದು. ಕೋಣೆಯಲ್ಲಿ ಇಡೋದಾ, ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ. ರಾಜಕಾರಣದಲ್ಲಿ ಮೋಸ ಮಾಡ್ತಾರೆ. ವಾಜಪೇಯಿ ನೆರಳಲ್ಲಿ ಕೆಲಸ ಮಾಡಿದವನು ನಾನು. ಅಡ್ವಾಣಿ, ರಾಜನಾಥ್​ ಸಿಂಗ್​ ನನ್ನನ್ನು ಬಸವನಗೌಡ ಅಂತಾ ಹೆಸರು ಹೇಳಿ ಕರೀತಿದ್ರು.’
ನಾಯಕರೇ ಗುರಿ: ವಾರದ ಹಿಂದಷ್ಟೇ ಗೃಹ ಸಚಿವರ ವಿರುದ್ಧ ಹೇಳಿಕೆ ನೀಡಿದ್ದ ಯತ್ನಾಳ್​ ಸರ್ಕಾರಕ್ಕೆ ಮುಜುಗರ ತಂದಿದ್ದರು. ಗೃಹ ಸಚಿವರ ಹುದ್ದೆ ಖಾಲಿ ಇದೆ ಎಂದು ಜಾಹೀರಾತು ನೀಡಬೇಕು ಎಂದು ತಮ್ಮದೇ ಸರ್ಕಾರದ ವಿರುದ್ಧ ನಡೆಸಿದ ದಾಳಿ ಪ್ರತಿಪದ ಗೇಲಿಗೆ ಸರಕಾಯಿತು. ರಾಜಕೀಯ ವಲಯದಲ್ಲಿ ಯತ್ನಾಳ್​ ಹೇಳಿಕೆ ಗಂಭೀರವಾಗಿ ಪರಿಗಣನೆ ಆಗದಿದ್ದರೂ, ಪ್ರತಿಪಕ್ಷ ಕಾಂಗ್ರೆಸ್​ 2500 ಕೋಟಿ ರೂ. ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿ ತನಿಖೆಗೂ ಆಗ್ರಹಿಸಿದೆ. ಯತ್ನಾಳ್​ ಹೇಳಿಕೆ ಮುಂದಿಟ್ಟುಕೊಂಡು ಜಾಲತಾಣದಲ್ಲಿ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ.

ನಿರಂತರ ಮುಕ್ಕು
40 ಪರ್ಸೆಂಟ್​ ಕಮಿಷನ್​ ಆರೋಪದಿಂದ ಹೊರಬರಲು ಸರ್ಕಾರ ಯತ್ನಿಸುತ್ತಿದ್ದಾಗಲೇ, ಈಶ್ವರಪ್ಪ ತಲೆದಂಡ ಕೊಡಲೇಬೇಕಾದ ಸನ್ನಿವೇಶ ಎದುರಾಯಿತು. ಪಿಎಸ್​ಐ ನೇಮಕ ಅಕ್ರಮದಲ್ಲಿ ಬಿಜೆಪಿ ನಾಯಕಿ ಸಿಕ್ಕಿಬಿದ್ದಿದ್ದು, ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಹೀಗೆ ಸರಣಿ ಪ್ರಕರಣಗಳು ಸರ್ಕಾರದ ಇಮೇಜ್​ಗೆ ನಿರಂತರವಾಗಿ ಪೆಟ್ಟುನಿಡಿದೆ.

ಅಮಿತ್​ ಷಾ ಈ ಹಿಂದೆ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದೀಗ ಯತ್ನಾಳ್​ ನೀಡಿರುವ ಹೇಳಿಕೆ ನೋಡಿದಾಗ ಅದು ನಿಜ ಅನ್ನಿಸುತ್ತದೆ. ಯತ್ನಾಳ್​ ಹೇಳಿಕೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ರಾಜ್ಯಪಾಲರು ಕೂಡಲೇ ತನಿಖೆಗೆ ಆದೇಶ ನೀಡಬೇಕು.

| ಬಿ.ಕೆ. ಹರಿಪ್ರಸಾದ್​ ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ

ಯತ್ನಾಳ್​ ಕೇಂದ್ರದ ಮಾಜಿ ಸಚಿವ ರಾಗಿದ್ದು. ಸದ್ಯ ಹಾಲಿ ಶಾಸಕ ರಿದ್ದಾರೆ. ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು.

| ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ

ಯತ್ನಾಳ್​ ಹೇಳಿಕೆ ಗಮನಿಸಿದಾಗ ಸಿಎಂ ಬೊಮ್ಮಾಯಿ ಎಷ್ಟು ಕೋಟಿ ರೂ. ಕೊಟ್ಟು ಮುಖ್ಯಮಂತ್ರಿ ಹುದ್ದೆ ಪಡೆದರು ಎಂಬ ಅನುಮಾನ ಮೂಡುತ್ತದೆ. ಇದನ್ನು ಅವರೇ ಬಗೆ ಹರಿಸಬೇಕು.

| ಬಿ.ವಿ. ಶ್ರೀನಿವಾಸ್​ ಅಧ್ಯಕ್ಷ ಅಖಿಲ ಭಾರತ ಯುವ ಕಾಂಗ್ರೆಸ್​ ಸಮಿತಿ

ತನಿಖೆಗೆ ಕಾಂಗ್ರೆಸ್​ ಆಗ್ರಹ
ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ. ನೀಡಬೇಕು ಎಂಬ ಯತ್ನಾಳ್​ ಹೇಳಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಕಾಂಗ್ರೆಸ್​ ನಾಯಕರು ಆಗ್ರಹಿಸಿದ್ದಾರೆ.

ಯತ್ನಾಳ್​ ಹೇಳಿದ್ದೇನು?
* ನಮ್ಮಲ್ಲಿ 100 ಕೋಟಿ ರೂ., 50 ಕೋಟಿ ರೂ. ಹಣ ಕೊಟ್ಟು ಮಂತ್ರಿ ಆಗುತ್ತಾರೆ. ಆ ಮೇಲೆ ಕರ್ನಾಟಕ ಲೂಟಿ ಮಾಡುತ್ತಾರೆ. ನಾನು ಅಷ್ಟೊಂದು ಹಣ ಎಲ್ಲಿಂದ ಕೊಡಲಿ? ನನ್ನನ್ನು ಯಾವುದಾದರೂ ಕೇಸ್​ನಲ್ಲಿ ಸಿಲುಕಿಸಲು ನಮ್ಮವರು ಪ್ರಯತ್ನಿಸುತ್ತಿದ್ದಾರೆ.
* ರಾಜಕಾರಣ ಬಹಳ ಕೆಟ್ಟು ಹೋಗಿದ್ದು, ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಸಮೀಪ ಬಂತೆಂದರೆ ನಿಮ್ಮನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್​ ಷಾ, ಕೈ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸ್ತಿವಿ. ಟಿಕೇಟ್​ ಕೊಡಿಸ್ತೀವಿ ಎಂದು ಕೆಲವರು ಬರುತ್ತಾರೆ.
* ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿ ಗಿರಾಕಿಗಳು ನಿಮಗೆ ಟಿಕೆಟ್​ ಕೊಡಿಸ್ತಿವಿ ಅಂಥ ಬರುತ್ತಾರೆ. ಅವರಿಂದ ಹುಷಾರಾಗಿ ಇರಬೇಕು.
* ನೇರವಾಗಿ ಮಾತನಾಡಿದರೆ, ಸತ್ಯ ಹೇಳಿದರೆ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ಸುಳ್ಳು ಹೇಳುವವರು, ಮೋಸ ಮಾಡುವವರು ರಾಜಕಾರಣದಲ್ಲಿ ಉಳಿಯಲು ಸಾಧ್ಯ.
* ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಹೋರಾಟ ಮಾಡುತ್ತಿದ್ದೇನೆ. ವಿನಾ ಮಂತ್ರಿಗಿರಿಗಾಗಿ ಅಲ್ಲ.
* ಪಕ್ಷದಲ್ಲಿ ಒಂದು ಕಾಲಕ್ಕೆ ಎಲ್ಲವೂ ನನ್ನ ಕೈಯಲ್ಲಿತ್ತು. ಆದರೆ, ಇದೀಗ ಎಲ್ಲವು ದೊಡ್ಡ ದೊಡ್ಡವರ ಕೈಯಲ್ಲಿದೆ. ನಮ್ಮ ಸಮಾಜದ ಹೋರಾಟ ಹತ್ತಿಕ್ಕಲು ನನಗೆ ಮಂತ್ರಿ ಸ್ಥಾನದ ಲಾಲಿಪಪ್​ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಹೇಳಿದ್ದೇನೆ.ಯತ್ನಾಳ್​ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದಾಗ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸದೆಯೇ ಅವರು ಸಿಟ್ಟಾಗಿ ತೆರಳಿದರು.

ದುರ್ಬಲ ನಾಯಕತ್ವ
ರಾಜ್ಯ ಬಿಜೆಪಿ ನಾಯಕತ್ವ ದಿನದಿನಕ್ಕೂ ದುರ್ಬಲವಾಗಿ ಕಾಣಿಸಲಾರಂಭಿಸಿದೆ. ಯತ್ನಾಳ್​ ಅವರ ಈ ಹಿಂದಿನ ವಿಮರ್ಶೆಗಳಿಗೂ ಪದ ರಾಜ್ಯಾಧ್ಯರೇ ಚಕಾರ ಎತ್ತದ ಕಾರಣ, ಆ ಹೇಳಿಕೆ ಹಿಂದೆಯೂ ಪದ ಅಧ್ಯರೇ ಇರಬಹುದೆಂದು ಚರ್ಚೆಯಾಗುತ್ತಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಸಂಟನೆ ಮೇಲೆ ಪ್ರಭಾವ ಬೀರುವಂತೆ ಕಾಣಿಸಿಲ್ಲ. ಇಲ್ಲಿನ ಆಗುಹೋಗುಗಳ ಬಗ್ಗೆ ಅವರು ತಲೆಕೆಡಿಸಿಕೊಂಡಂತೆಯೂ ಇಲ್ಲ.

ಯತ್ನಾಳ್​ ಬಿಜೆಪಿ ಲೀಡರ್​, ಕೇಂದ್ರದ ಮಾಜಿ ಮಂತ್ರಿ. ಅವರು ಹೇಳಿದ್ದು ಸತ್ಯ ಇರಬೇಕು. ಪಿಎಸ್​ಐಗೆ 50ರಿಂದ 80 ಲಕ್ಷ ರೂ. ತಗೋತಾರಂದ್ರೆ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ಕೇಳಿದ್ದರಲ್ಲಿ ಸತ್ಯವಿರಬೇಕು ಅನಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಡುಗೆ ಅನಿಲವೂ ತುಟ್ಟಿ; 14.2 ಕೆಜಿಯ ಪ್ರತಿ ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳ

Sat May 7 , 2022
ಹೊಸದಿಲ್ಲಿ: ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಏರಿಕೆಗೆ ಅನುಗುಣವಾಗಿ ಎಲ್‌ಪಿಜಿ ಬೆಲೆಯನ್ನು ಭಾನುವಾರ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದ 14.2 ಕೆಜಿ ಸಬ್ಸಿಡಿ ರಹಿತ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಪ್ರತಿ ಸಿಲಿಂಡರ್ ಬೆಲೆ 999.50 ರೂ. ಆಗಿರಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗುತ್ತಿದ್ದು, ಅದೇ ಸಮಯದಲ್ಲಿ ಗೃಹೋಪಯೋಗಿ ಅನಿಲ ಸಿಲಿಂಡರ್ ಬೆಲೆಯಲ್ಲಿಯೂ ಏರಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. […]

Advertisement

Wordpress Social Share Plugin powered by Ultimatelysocial