ವರ್ಷಾಂತ್ಯದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡ

 

 

2022ನೇ ವರ್ಷಾಂತ್ಯಕ್ಕೆ ಭಾರತ ಕ್ರಿಕೆಟ್​ ತಂಡ ಕ್ರಿಕೆಟ್​ ಕ್ಷೇತ್ರದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇದುವರೆಗೆ ಯಾವುದೇ ತಂಡದ ಮಾಡದ ಗೆಲುವಿನ ಸಾಧನೆ ಅದಾಗಿದ್ದು, ವಿಶ್ವದ ನಂಬರ್​ ಒನ್​ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.ಸುಮಾರು ಏಳು ನಾಯಕರ ಮುಂದಾಳತ್ವದಲ್ಲಿ ಆಡಿರುವ ಭಾರತ ತಂಡ ಚರಿತ್ರೆ ಸೃಷ್ಟಿಸಿದೆ.2022ರ ಅಂತ್ಯಕ್ಕೆ ಭಾರತ ತಂಡ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 46 ಪಂದ್ಯಗಳಲ್ಲಿ ಜಯ ಗಳಿಸಿದೆ. ರೋಹಿತ್​ ಶರ್ಮ ಕಾಯಂ ನಾಯಕತ್ವದ ಟೀಮ್ ಇಂಡಿಯಅ ವರ್ಷಾಂತ್ಯಕ್ಕೆ ಗರಿಷ್ಠ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತನ್ನೆಸರಿಗೆ ಬರೆಸಿಕೊಂಡಿದೆ. ಇದರಲ್ಲಿ ತವರಿನ ಸರಣಿ, ವಿದೇಶಿ ಪ್ರವಾಸ, ಏಷ್ಯಾ ಕಪ್​ ಹಾಗೂ ಟಿ20 ವಿಶ್ವ ಕಪ್​ನ ಪಂದ್ಯಗಳು ಸೇರಿಕೊಂಡಿವೆ. ಒಟ್ಟಾರೆ ಭಾರತ ತಂಡ 71 ಪಂದ್ಯಗಳಲ್ಲಿ ಆಡಿದೆ.ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದೆ. 2003ರಲ್ಲಿ ಆಸ್ಟ್ರೇಲಿಯಾ ಬಳಗ ಒಟ್ಟು 38 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ರಿಕಿ ಪಾಂಟಿಂಗ್​ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು. ಮೂರನೇ ಸ್ಥಾನವನ್ನು ಭಾರತವೇ ತನ್ನದಾಗಿಸಿಕೊಂಡಿದೆ. ವಿರಾಟ್​ ಕೊಹ್ಲಿಯ ನೇತೃತ್ವದಲ್ಲಿ ಆಡುತ್ತಿದ್ದ ಭಾರತ ಬಳಗ ಆ ವರ್ಷ 37 ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು.ನಾಲ್ಕನೇ ಸ್ಥಾನ ಮತ್ತೆ ಆಸ್ಟ್ರೇಲಿಯಾಗೆ ಲಭಿಸಿದೆ. ಸ್ಟ್ರೀವ್​ ವಾ ಅವರ ನಾಯಕತ್ವದ ತಂಡ 35 ಪಂದ್ಯಗಳನ್ನು ಗೆದ್ದು ಸಾಧನೆ ಮಾಡಿದೆ. ಪಟ್ಟಿಯಲ್ಲಿ ಐದನೇ ಸ್ಥಾನ ಭಾರತಕ್ಕೆ ಲಭಿಸಿದೆ. ವಿರಾಟ್​ ಕೊಹ್ಲಿ ಮುಂದಾಳತ್ವದ ಭಾರತ ತಂಡ 2018ರಲ್ಲಿ 35 ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು. ಈ ರೀತಿಯಾಗಿ ಅಗ್ರ ಐದು ಸ್ಥಾನಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ 3 ಹಾಗೂ 2 ಸ್ಥಾನಗಳನ್ನು ಪಡೆದುಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್‌

Sat Dec 31 , 2022
  ಟೀಮ್ ಇಂಡಿಯಾದ ಕ್ರಿಕೆಟ್​ ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ಹಾರ್ದಿಕ್ ಪಾಂಡ್ಯ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.ಅಮಿತ್​ ಶಾ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಫೋಟೊವನ್ನು ಶನಿವಾರ ಹಾರ್ದಿಕ್​ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವರೊಂದಿಗೆ ಅಮೂಲ್ಯ ಸಮಯವನ್ನು ಕಳೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಅಮಿತ್ ಶಾ ಅವರನ್ನು […]

Advertisement

Wordpress Social Share Plugin powered by Ultimatelysocial