‘ಯಲ್ಲೋ ಬೋರ್ಡ್’ ನಲ್ಲಿ ಮೊದಲ ಬಾರಿಗೆ ಹಲವು ವಿಷಯಗಳನ್ನು ಕಲಿತೆ: ಅಹಲ್ಯಾ ಸುರೇಶ್

 

 

ಆದಿ ಪುರಾಣ, ಕಮರೊಟ್ಟು ಚೆಕ್ ಪೋಸ್ಟ್, ಮಾರ್ಗರೇಟ್ ಚಿತ್ರಗಳಲ್ಲಿ ನಟಿಸಿರುವ ಅಹಲ್ಯಾ ಸುರೇಶ್ ತ್ರಿಲೋಕ್ ರೆಡ್ಡಿಯವರ ಮುಂಬರುವ ಚಿತ್ರ ಯಲ್ಲೋ ಬೋರ್ಡ್ ನಲ್ಲಿ ನಟಿಸುತ್ತಿದ್ದಾರೆ. ಪ್ರದೀಪ್ ಬಗೋಡಿ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎನ್ನುತ್ತಾರೆ ಅಹಲ್ಯಾ.ಯಲ್ಲೋ ಬೋರ್ಡ್ ಅಹಲ್ಯಾ ಅವರ ಮೊದಲ ಕಮರ್ಷಿಯಲ್ ಚಿತ್ರವಾಗಿದ್ದು ಇದರಲ್ಲಿ ಕೆಲವೊಂದು ಮೊದಲ ಪ್ರಯತ್ನಗಳನ್ನು ಮಾಡಿದ್ದಾರೆ. ಹಲವು ವಿಧದ ಡ್ರೈವಿಂಗ್ ಪಾಠಗಳನ್ನು ಕಲಿತಿದ್ದಾರಂತೆ. ಕೆಲವೊಂದು ಯುದ್ಧದ ಸನ್ನಿವೇಶಗಳಲ್ಲಿ ಕೂಡ ನಟಿಸಿದ್ದಾರೆ. ಮೊದಲ ಬಾರಿಗೆ ಹಲವು ವಿಷಯಗಳನ್ನು ಪ್ರಯತ್ನಿಸುವಾಗ ಉತ್ಸಾಹ ಮತ್ತು ಭಯ ಒಟ್ಟಿಗೆ ಉಂಟಾಯಿತು ಎಂದು ಅಹಲ್ಯಾ ಸುರೇಶ್ ಹೇಳುತ್ತಾರೆ.ಕ್ಯಾಬ್ ಡ್ರೈವರ್ ಕಥೆ ಯಲ್ಲೋ ಬೋರ್ಡ್ ಸಿನಿಮಾದ್ದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್ ಗಳ ಕುರಿತ ಜನಜೀವನವನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಸಾಮಾನ್ಯವಾಗಿ ನೋಟದಿಂದ ಕ್ಯಾಬ್ ಡ್ರೈವರ್ ಬಗ್ಗೆ ಜನರು ಹೀಗೆಂದು ನಿರ್ಣಯಿಸುತ್ತಾರೆ. ಯಲ್ಲೋ ಬೋರ್ಡ್ ಕ್ಯಾಬ್ ಡ್ರೈವರ್‌ಗಳ ಜೀವನದ ಬಗ್ಗೆ ತೆರೆ ಮೇಲೆ ತೋರಿಸುವುದು ಮಾತ್ರವಲ್ಲದೆ ಜನರನ್ನು ನೋಟದಿಂದ ನೋಡಿ ನಿರ್ಧರಿಸಬಾರದು ಎಂಬ ಸಾರಾಂಶ ಹೇಳುತ್ತದೆ ಎನ್ನುತ್ತಾರೆ.ತೆಲುಗಿನಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಚಿತ್ರದ ಮೂಲದ ಚಿತ್ರರಂಗಕ್ಕೆ ಕಾಲಿಟ್ಟ ಅಹಲ್ಯಾ ಅಲ್ಲಿ ಕೂಡ ಹೊಸ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಚಿಕ್ಕಬಳ್ಳಾಪುರ ಮೂಲದವರಾದ ಅಹಲ್ಯಾ ನಂತರದ ದಿನಗಳಲ್ಲಿ ಬೆಂಗಳೂರಿಗೆ ಶಿಫ್ಟ್ ಆದರು. ಇಂದು ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ಸದ್ಯ ಅವರಿಗೆ ನಟನೆಯೇ ಆದ್ಯತೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

.ಬದಲಾದ ಹೇರ್ ಸ್ಟೈಲ್: ವೈರಲ್ ಆಯ್ತು ವಿಜಯ್ ದೇವರಕೊಂಡ ಹೊಸ ಲುಕ್

Wed Mar 2 , 2022
  ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ಗಾಗಿ ಲಾಂಗ್ ಹೇರ್ಸ್ ಬಿಟ್ಟಿದ್ದರು. ಇದೀಗ ಎರಡು ವರ್ಷಗಳ ಬಳಿಕ ವಿಜಯ್ ದೇವರಕೊಂಡ ತಮ್ಮ ಲಾಂಗ್ ಹೇರ್ಸ್‍ಗೆ ಗುಡ್ ಬೈ ಹೇಳಿದ್ದಾರೆ. ಇತ್ತೀಚೆಗಷ್ಟೇ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವಿಜಯ್ ವಿಜೇತರಿಗೆ ಟ್ರೋಫಿ ನೀಡಿ ವಿಶ್ ಮಾಡಿದ್ದರು. ಸದ್ಯ ಈ ಫೋಟೋಗಳು ಸೋಶಿಯಲ್ […]

Advertisement

Wordpress Social Share Plugin powered by Ultimatelysocial