ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ!

ಬಾಲಿವುಡ್ ಮತ್ತು ಸೌತ್ ಇಂಡಿಯಾ ಸಿನಿಮಾಗಳಲ್ಲಿ ಹೆಸರುವಾಸಿಯಾದ ನಾಯಕ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿದ್ದರು. ಮಂಗಳವಾರದ ಶುಭ ದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದ್ದರು. ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಸೇವೆಯಲ್ಲಿ ಪಾತ್ರಿಗಳಿಂದ ಆಶೀರ್ವಾದ ಪಡೆದರು. ಈ ಹಿಂದೆಯೂ ಮಾರಿಗುಡಿಗೆ ಬಂದಿದ್ದ ಪೂಜಾ ಹೆಗ್ಡೆ ಕ್ಷೇತ್ರದ ಬಗ್ಗೆ ತಮಗಿರುವ ಅಗಾಧ ಭಕ್ತಿ ಹಾಗೂ ಪ್ರೀತಿಯನ್ನು ಈ ವೇಳೆ ವ್ಯಕ್ತಪಡಿಸಿದರು. ಕುಟುಂಬ ಸದಸ್ಯರೊಂದಿಗೆ ದೇವಾಲಯದ ಅವರಣದಲ್ಲಿ ಕೆಲ ಕಾಲ ಕಳೆದರು. ಬಾಲಿವುಡ್ ಮಾತ್ರವಲ್ಲವೇ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ಪೂಜಾ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತಾಲೂಕಿನವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ 1005 ನೇ ತಿರುನಕ್ಷತ್ರ ಮಹೋತ್ಸವ!

Thu May 5 , 2022
ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ 1005 ನೇ ತಿರುನಕ್ಷತ್ರ ಮಹೋತ್ಸವ ಕರ್ನಾಟಕದ ಕರ್ಮಭೂಮಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವೈಭವದಿಂದ ನಡೆಯುತ್ತಿದೆ.ಬೆಳಿಗ್ಗೆ ರಾಮಾನುಜರಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ನೆರವೇರಿತು ದೇವಾಲಯದ ರಾಜಗೋಪುರದ ಬಳಿ ಆಚಾರ್ಯರಿಗೆ ಮಹಾಮಂಗಳಾರತಿ ಈಯಲ್ ಗೋಷ್ಟಿ ಶಾತ್ತುಮೊರೆ ನಡೆಯಿತು ವೈಭವದಿಂದ ಕಾರ್ಯ ಕ್ರಮದಲ್ಲಿ ಕಾರ್ಯ ಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳು ತಮಿಳುನಾಡು,ಆಂದ್ರಪ್ರದೇಶಗಳಿಂದ ನೂರಾರು ಭಕ್ತರು ಭಾಗವಹಿಸಿ ಆಚಾರ್ಯ ರ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial