ಬಿಹಾರದಲ್ಲಿ ೨೪೩ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ನಲ್ಲಿ ಚುನಾವಣೆ ನಡೆಯಲಿದೆ. ೨೦೧೫ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ೫೩ಸ್ಥಾನ ಗಳಿಸಿದ್ದರೆ, ಎನ್ಡಿಎ ಮೈತ್ರಿಕೂಟ ೫೮ ಸ್ಥಾನ ಗಳಿಸಿತ್ತು. ಈ ಬಾರಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೇಸರಿ ಪಾಳಯ ಹೊಸ ಯೋಜನೆ ರೂಪಿಸ್ತಿದೆ ಎನ್ನಲಾಗಿದೆ. ಎಲ್ಲಾ ಎಲೆÀಕ್ಷನ್ಗಳಲ್ಲೂ ಬಿಜೆಪಿ ಬೃಹತ್ ರ್ಯಾಲಿಗಳನ್ನು ನಡೆಸೋ ಮೂಲಕ, ಸಾವಿರಾರು ಜನರನ್ನು ಉದ್ದೇಶಿಸಿ ಮೋದಿ, ಅಮಿತ್ ಶಾ ಮಾತನಾಡುವ ಮೂಲಕ ಮತಯಾಚನೆ ಮಾಡ್ತಿದ್ರು, ಆದ್ರೆ ಈ ಬಾರಿ ಕೊರೊನಾ ಆರ್ಭಟದ ಹಿನ್ನಲೆಯಲ್ಲಿ ಕೇಸರಿ ಪಡೆ ವರ್ಚ್ಯುವಲ್ ರ್ಯಾಲಿ ನಡೆಸೋಕೆ ಮುಂದಾಗಿದೆ. ಮುಂದಿನ ವಾರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಹಾಗೂ ಫೇಸ್ಬುಕ್ ಲೈವ್ ಮೂಲಕ ಬಿಹಾರದ ಜನತೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.
ಎಲೆಕ್ಷನ್ ಮೇಲೆ ಕೇಸರಿ ಕಣ್ಣು / ಡಿಜಿಟಲ್ ಕ್ಯಾಂಪೆನ್ಗೆ ಸಿದ್ಧತೆ
Please follow and like us: