ಬಂಡೇಪಾಳ್ಯ ಬಳಿಯ ಸೂಪರ್ ಮಾರ್ಕೆಟ್ ನ ಕ್ಯಾಷಿಯರ್ ನಿಂದ 7 ಲಕ್ಷ ಎಗರಿಸಿದ್ದ ಖದೀಮರು. ಜುಲೈ 19 ಲಾಕ್ಡೌನ್ ಹಿನ್ನೆಲೆ ಸೂಪರ್ ಮಾರ್ಕೆಟ್ ರಸ್ತೆ ಜನಸಂಚಾರ ವಿರಳವಾಗಿತ್ತು ಈ ಸಂಧರ್ಭ ತರಕಾರಿ ಸೋಗಿನಲ್ಲಿ ಮಾಸ್ಕ ಧರಿಸಿ ಒಂದೇ ಬೈಕ್ ನಲ್ಲಿ ಬಂದಿದ್ದ ಕಳ್ಳರು ಶಾಪ್ಕ್ಲೋಸ್ ಮಾಡಿಸಿ ಕ್ಯಾಷಿಯರ್ ಪವನ್ ಗೆ ಚಾಕು ಹಾಕಿ ಹಗ್ಗದಿಂದ ಕೈಕಾಲು ಕಟ್ಟಿ ದರೋಡೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂಡೆಪಾಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸಿಸಿಟಿವಿ ಆಧರಿಸಿ ದರೋಡೆಕೋರರ ಪತ್ತೆಗೆ ಪೋಲೀಸರು ಬಲೆಬೀಸಿದ್ದಾರೆ.