ಬಿಗ್​ಬಾಸ್​ ಖ್ಯಾತೀಯ ಪ್ರಶಾಂತ್​ ಸಂಬರಗಿ ಸುದ್ದಿಯಲ್ಲಿದ್ದಾರೆ.

ಬಿಗ್​ಬಾಸ್​ ಖ್ಯಾತೀಯ ಪ್ರಶಾಂತ್​ ಸಂಬರಗಿ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾ ವಿಚಾರಕ್ಕೆ ಸುದ್ದಿ ಅಗಿರೋದು ಖಂಡಿತಾ ಅಲ್ಲ. ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಿಂದ ವೈರಲ್​ ಆಗಿದ್ದಾರೆ. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ಹಂಚಿಕೊಂಡಿರುವ ಫೋಟೊದಿಂದ ಈಗ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇವರ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ಬೈಗುಳದ ಸುರಿಮಳೆಯನ್ನೇ ಸುರಿಸಿದ್ದಾರೆ. ಅಂದಹಾಗೆಯೇ ಸಂಬರಗಿ ಹಂಚಿಕೊಂಡಿರುವ ಪೋಸ್ಟ್​ನಲ್ಲೇನಿದೆ?

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಯಕ್ಟೀವ್​ ಆಗಿ ಇದ್ದಾರೆ. ಫೇಸ್​ಬುಕ್​ನಲ್ಲಿ ಸದಾ ಏನಾದರೊಂದು ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆಯೇ ಬುಧವಾರದಂದು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಸೋನಿಯಾ ಗಾಂಧಿಯ ಅವರ ಎಡಿಟೆಡ್​ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಫೋಟೋದಲ್ಲಿ ಅಂಥದ್ದೇನಿದೆ.|?

ಫೋಟೋದಲ್ಲಿ ಸೋನಿಯಾ ಗಾಂಧಿ ಒಂದೆಡೆಯಾದರೆ. ಬ್ಯಾಗ್​ಗೌಂಡ್​ನಲ್ಲಿ ಶಿಲಾಬಾಲಿಕೆಯಂತೆ ಕಂಬದ ತಾಗಿ ನಿಂತಿರುವ ಮಹಿಳೆ ಕರಿನೆರಳಿನ ಚಿತ್ರಣವಿದೆ. ಈ ಫೋಟೋವನ್ನು ಫೇಸ್​​ಬುಕ್​ನಲ್ಲಿ ಹಂಚಿಕೊಂಡ ಪ್ರಶಾಂತ್​ ಸಂಬರಗಿ ಅವರು ”ನಾನು ಖಂಡಿಸುತ್ತೇನೆ” ಎಂದು ಅಡಿಬರಹ ಬರೆದಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗಿದೆ.

ಪ್ರಶಾಂತ್​ ಸದಾ ಏನಾದರೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿರುತ್ತಾರೆ. ಅದರಂತೆಯೇ ಇದೀಗ ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿಯವರ ಎಡಿಟೆಡ್​ ಫೋಟೋ ಹಂಚಿಕೊಂಡು ವೈರಲ್​ ಆಗಿದ್ದಾರೆ. ಇವರ ಪೋಸ್ಟ್ ನೋಡಿ ಅನೇಕರು ಕಾಮೆಂಟ್​​ ಬರೆದಿದ್ದಾರೆ. ಅದರಲ್ಲೂ ಹೆಚ್ಚಿನವರು ಈ ಪ್ರಶಾಂತ್ ಸಂಬರಗಿ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.

ಬ್ರಿಜೇಶ್​​ ಕಾಳಪ್ಪ ಈ ಬಗ್ಗೆ ಟ್ವೀಟ್​​ ಮಾಡಿದ್ದು, ನಾನು ಐಎನ್​ಸಿಯನ್ನು ತೊರೆದಿರಬಹುದು. ಆದರೆ ನಾನು ಶ್ರೀಮತಿ ಸೋನಿಯಾ ಗಾಂಧಿಯನ್ನು ಭಾರತದ ಅತ್ಯಂತ ಗೌರವಾನ್ವಿತ ಮಹಿಳಾ ನಾಯಕರಲ್ಲಿ ಒಬ್ಬರೆಂದು ಪರಿಗಣಿಸುತ್ತೇನೆ. ನಾಚಿಕೆಗೇಡಿತನ ಮತ್ತು ಅಸಹ್ಯಕರ. ಈ ಬಿಜೆಪಿ ನಾಯಕನನ್ನು ಜೈಲಿಗೆ ಹಾಕಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶ್​-ರಾಧಿಕಾ ಸರ್ಪ್ರೈಸ್​ ವಿಸಿಟ್.

Thu Feb 16 , 2023
ಸ್ಯಾಂಡಲ್​ವುಡ್​​ನ ಕ್ಯೂಟೆಸ್ಟ್​​​ ಕಪಲ್​​ ಎಂದು ಕರೆಸಿಕೊಳ್ಳೋ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್ ಇಬ್ಬರು ರಾಜಸ್ಥಾನದ ಜೈಪುರದಲ್ಲಿ ವ್ಯಾಲೆಂಟೈನ್ಸ್​​ ಡೇ ವಿಶ್​​ ಮಾಡಿಕೊಂಡಿದ್ದಾರೆ. ಈ ವಿಶೇಷವಾದ ಕ್ಷಣದ ಫೋಟೋವನ್ನು ರಾಧಿಕಾ ಪಂಡಿತ್​​​​​ ತಮ್ಮ ಇನ್​​​​​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಸ್ಯಾಟಂಡಲ್​ವುಡ್​​​ನಲ್ಲಿ ಸೂಪರ್​​ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು. […]

Advertisement

Wordpress Social Share Plugin powered by Ultimatelysocial